Times of Deenabandhu
  • Home
  • ಮುಖ್ಯಾಂಶಗಳು
  • ಅರ್ಚಕರ ಕೊಲೆಗಾರರ ಮೇಲೆ ಶೂಟೌಟ್​​ ! ಮೂವರು ಆರೋಪಿಗಳು ಅರೆಸ್ಟ್ !
ಪ್ರಧಾನ ಸುದ್ದಿ ಮುಖ್ಯಾಂಶಗಳು

ಅರ್ಚಕರ ಕೊಲೆಗಾರರ ಮೇಲೆ ಶೂಟೌಟ್​​ ! ಮೂವರು ಆರೋಪಿಗಳು ಅರೆಸ್ಟ್ !

ಮಂಡ್ಯದ ಮೂವರು ಅರ್ಚಕರ ಮರ್ಡರ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಬಂಧನಕ್ಕೆ ತೆರಳಿದ್ದಾಗ ಕಲ್ಲು, ಚಾಕುಗಳಿಂದ ಪೊಲೀಸರ ಮೇಲೆ ಆರೋಪಿಗಳು ದಾಳಿಗೆ ಯತ್ನ ಮಾಡಿದ್ದರು. ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಪ್ರತಿದಾಳಿ ಮಾಡಿದ್ದಾರೆ.
ಮದ್ದೂರು ತಾಲೂಕಿನ ಸಾದೊಳಲು ಗ್ರಾಮದ ಬಳಿ ಕಾರ್ಯಾಚರಣೆ ನಡೆದಿದ್ದು, ಘಟನೆಯಲ್ಲಿ ಮೂವರು ಆರೋಪಿಗಳ ಕಾಲಿಗೆ ಗುಂಡೇಟು ತಗುಲಿದೆ.
ಮೂರ್ನಾಲ್ಕು ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿವೆ. ಆಂಧ್ರ ಮೂಲದ 25 ವರ್ಷದ ವಿಜಿ, ಮದ್ದೂರಿನ ಅರೆಕಲ್ ದೊಡ್ಡಿಯ 28 ವರ್ಷದ ಗಾಂಧಿ, ತೊಪ್ಪನಹಳ್ಳಿಯ 30 ವರ್ಷದ ಮಂಜು ಕಾರ್ಯಾಚರಣೆ ವೇಳೆ ಗಾಯಗೊಂಡ ಆರೋಪಿಗಳು. ಮಂಡ್ಯದ PSI ಶರತ್ ಕುಮಾರ್, ASI ಕೃಷ್ಣಕುಮಾರ್, ಹೆಡ್ ಕಾನ್ಸ್‌ಟೇಬಲ್ ಅನಿಲ್​ಗೆ ಗಾಯಗಳಾಗಿವೆ.
ಗಾಯಾಳು ಆರೋಪಿಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ಕೊರೊನಾ ನೈಸರ್ಗಿಕವಲ್ಲ, ಲ್ಯಾಬ್‌ನಲ್ಲಿ ಜನನ: ಗಡ್ಕರಿ

ವಿಶ್ವ ಪರಿಸರ ದಿನಾಚರಣೆ: ಭೂ ಜೀವವೈವಿಧ್ಯತೆ ಕಾಪಾಡಲು ಪ್ರಧಾನಿ ಕರೆ

ಅಮೆರಿಕ ತಲುಪಿದ ಭಾರತದ ಮಾತ್ರೆ: ಮೋದಿ ಹರ್ಷೋದ್ಗಾರದ ನಡುವೆ ವಿಮಾನಕ್ಕೆ ಸ್ವಾಗತ!

Times fo Deenabandhu