Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕಚೇರಿ ಬಳಿಕ ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!

ಮುಂಬೈ: ಇತ್ತೀಚೆಗಷ್ಟೇ ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕೆಲ ಭಾಗ ಅತಿಕ್ರಮಣವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿತ್ತು. ಇದೀಗ ಕಂಗನಾ ಮನೆಯನ್ನು ಮುಂಬೈ ಮಹಾನಗರ ಪಾಲಿಕೆ ಟಾರ್ಗೇಟ್​ ಮಾಡಿದೆ!
ಹೌದು, ಇದೀಗ ಮುಂಬೈನ ಖರ್​ ಪ್ರದೇಶದಲ್ಲಿರುವ ಕಂಗನಾ ಮನೆಗೂ ಬಿಎಂಸಿ ನೋಟಿಸ್​ ರವಾನಿಸಿದ್ದು, ಅತಿಕ್ರಮಣವಾದ ಮನೆಯನ್ನು ತೆರೆವುಗೊಳಿಸಿ ಎಂದಿದೆ. ಖರ್ ಪ್ರದೇಶದ ಬಹು ಮಹಡಿಯ ಅಪಾರ್ಟ್ಮೆಂಟ್​ನಲ್ಲಿ ಮೂರು ಫ್ಲಾಟ್​​ಗಳು ಕಂಗನಾ ಅವರದ್ದಾಗಿವೆ.

ಮೊದಲ ಫ್ಲಾಟ್​ 797 ಚದರ ಅಡಿ ವಿಸ್ತಿರ್ಣ, ಎರಡನೆಯದ್ದು 711 ಚದರ ಅಡಿ ಮತ್ತು ಮೂರನೇಯ ಫ್ಲಾಟ್ 459 ಚದರ ಅಡಿ ವಿಸ್ತೀರ್ಣ ಹೊಂದಿದೆ. 2019ರ ಮಾರ್ಚ್ 8ರಂದು ಕಂಗನಾ ಹೆಸರಿನಲ್ಲಿ ಈ ಮೂರು ಕಟ್ಟಡಗಳು ನೋಂದಣಿಯಾಗಿವೆ. ಕಟ್ಟಡದ ಪ್ಲಾನ್​ನಲ್ಲಿ ಇಲ್ಲದ ಒಂದಷ್ಟು ಭಾಗಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸುವಂತೆ ನೋಟಿಸ್​ನಲ್ಲಿ ಆದೇಶಿಸಿದೆ.
ಕಂಗನಾ ಅವರ ನಿವಾಸದ ಅನಧಿಕೃತ ಭಾಗಗಳಿಗೆ ಸಂಬಂಧಿಸಿದ ವಿಚಾರಣೆ ಸೆಪ್ಟೆಂಬರ್ 25 ರಂದು ನಡೆಯಲಿದ್ದು, ಸ್ವತಃ ಕಂಗನಾ ಈ ವಿಚಾರಣೆಗೆ ಹಾಜರಾಗಲಿದ್ದಾರೆ.

Related posts

ಅಂಫಾನ್ ಅಬ್ಬರ: ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ, ಇಬ್ಬರು ಸಾವು

ಒಂದು ವರ್ಷ ಪೂರೈಸಿದ ಮೇಯರ್ ಎಸ್.ಎನ್.ಚನ್ನಬಸಪ್ಪರ ಮನದ ಮಾತು..

Times fo Deenabandhu

ಟೈರ್‌ನೊಳಗೆ ಸಿಕ್ಕಿಕೊಂಡ ಶ್ವಾನದ ತಲೆ

Times fo Deenabandhu