Times of Deenabandhu
  • Home
  • ಜಿಲ್ಲೆ
  • ಬಿ.ಆರ್.ಪ್ರಾಜೆಕ್ಟ್ ಗುತ್ತಿಗೆದಾರರಾದ ಹೆಚ್.ಬಿ.ಭದ್ರಯ್ಯ ಇನ್ನಿಲ್ಲ…
ಜಿಲ್ಲೆ ಶಿವಮೊಗ್ಗ

ಬಿ.ಆರ್.ಪ್ರಾಜೆಕ್ಟ್ ಗುತ್ತಿಗೆದಾರರಾದ ಹೆಚ್.ಬಿ.ಭದ್ರಯ್ಯ ಇನ್ನಿಲ್ಲ…

ಬಿ.ಆರ್.ಪ್ರಾಜೆಕ್ಟ್ ಅ.31: ಬಿ.ಆರ್.ಪ್ರಾಜೆಕ್ಟ್‍ನ ಕಂಟ್ರಾಕ್ಟರ್ ಅಸೋಷಿಯೇಷನ್ ಅಧ್ಯಕ್ಷರಾಗಿದ್ದ ಹೆಚ್.ಬಿ.ಭದ್ರಯ್ಯ(66)ನವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರ.

ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ.

ಇವರು ಲಯನ್ಸ್ ಸಂಸ್ಥೆಯ ಸದಸ್ಯರಾಗಿ, ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಟ್ರಸ್ಟಿಯಾಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸದಾ ಹಸನ್ಮುಖಿಯಾಗಿದ್ದ, ಜನರೊಡನೆ ಸ್ನೇಹದಿಂದ ಬೆರೆಯುವ ರೀತಿ  ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಊರಿನಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾದಂತಹ ಸಂದರ್ಭದಲ್ಲಿ ಮುಂದೆ ನಿಂತು ಉಭಯತ್ರರೂ ಮೆಚ್ಚುವ ರೀತಿಯಲ್ಲಿ ಬಗೆಹರಿಸುವ ಅವರ ಗುಣ ವಿಶಿಷ್ಠವಾಗಿತ್ತು. ಅವರ ಗುತ್ತಿಗೆದಾರರ ವೃತ್ತಿಯಲ್ಲೂ ಪ್ರಾಮಾಣಿಕತೆ ಮೆರೆದಿದ್ದರು.

ಹೆಚ್.ಬಿ.ಭದ್ರಯ್ಯನವರು ಪತ್ನಿ ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂಧುಬಳಗದವರನ್ನು ಹಾಗು ಸ್ನೇಹಿತರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸಂಘ-ಸಂಸ್ಥೆಗಳು ಗಣ್ಯರ ಕಂಬನಿ:

ಭದ್ರಯ್ಯನವರ ಅಕಾಲಿಕ ಮರಣಕ್ಕೆ ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್, ಸಿಂಗನಮನೆ ಜಿಲ್ಲಾಪಂಚಾಯತ್ ಸದಸ್ಯರಾದ ಜೆ.ಪಿ.ಯೋಗೇಶ್, ಭದ್ರಾವತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎನ್.ಕೃಷ್ಣಪ್ಪ, ಬಿ.ಆರ್.ಪ್ರಾಜೆಕ್ಟ್ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಲ್.ರಮೇಶ್, ಧೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಶಶಿಕುಮಾರ್, ಜಿಲ್ಲಾ ಸಂಘಟನೆ ಗೌರವಾಧ್ಯಕ್ಷ ತ್ಯಾಗರಾಜ್ ಗೋಣಿಬೀಡು ತಮ್ಮ ತೀವ್ರತರವಾದ ದು:ಖ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

Related posts

ತಾಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆ

Times fo Deenabandhu

ಫೆಬ್ರವರಿ 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

Times fo Deenabandhu

ಕುವೆಂಪು ವಿವಿ: ಚಿನ್ನಾದೊರೈ ಅವರ ಬೀಳ್ಕೊಡುಗೆ ಸಮಾರಂಭ

Times fo Deenabandhu