Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಸೈಲೆಂಟ್ ಆಗಿ ಎಂಗೇಜ್ ಆದ ನಟಿ ಕಾಜಲ್ ಅಗರ್ವಾಲ್!

 

ಈ ಲಾಕ್‌ಡೌನ್‌ನಲ್ಲಿ ಸಿನಿಮಾರಂಗದ ಅನೇಕರು ಮದುವೆ ಮೂಡ್‌ನಲ್ಲಿದ್ದಾರೆ. ಈಗಾಗಲೇ ಎಷ್ಟೋ ಸೆಲೆಬ್ರಿಟಿಗಳು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕಡಿಮೆ ಅತಿಥಿಗಳ ಸಮ್ಮುಖದಲ್ಲಿ, ಸರಳವಾಗಿ, ಸುಂದರವಾಗಿ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಈಚೆಗಷ್ಟೇ ನಟ ರಾಣಾ ದಗ್ಗುಬಾಟಿ ಕೂಡ ಮದುವೆಯಾದರು. ಸದ್ಯದ ಮಾಹಿತಿ ಪ್ರಕಾರ, ನಟಿ ಕಾಜಲ್‌ ಅಗರ್ವಾಲ್ ಕೂಡ ಎಂಗೇಜ್‌ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸದ್ದಿಲ್ಲದೇ, ನಡೆದ ಈ ಎಂಗೇಜ್‌ಮೆಂಟ್‌ ಚಿತ್ರರಂಗದ ಒಬ್ಬ ನಟ ಮಾತ್ರ ಹೋಗಿದ್ದರಂತೆ!

ಉದ್ಯಮಿಯೊಂದಿಗೆ ಕಾಜಲ್‌ ಎಂಗೇಜ್‌?

2007ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕಾಜಲ್‌ಗೆ ಈಗ 35ರ ಹರೆಯ. ಈಚೆಗೆ ಹಲವು ಬಾರಿ ಕಾಜಲ್ ಮದುವೆ ಕುರಿತಂತೆ ವದಂತಿಗಳು ಕೇಳಿಬರುತ್ತಿದ್ದವು. ಈಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಅವರು ಉದ್ಯಮಿ ಗೌತಮ್ ಎಂಬುವವರೊಂದಿಗೆ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಕಾಜಲ್ ಆಗಲಿ ಅಥವಾ ಕುಟುಂಬದವರಾಗಲಿ ಖಚಿತಪಡಿಸಿಲ್ಲ. ಇನ್ನು, ಗೌತಮ್‌ ಎಂಬುವವರು ಉದ್ಯಮಿ ಅನ್ನೋದು ಬಿಟ್ಟರೆ, ಅವರ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ!

ಎಂಗೇಜ್‌ಮೆಂಟ್‌ಗೆ ಹೋಗಿದ್ದ ನಟ ಶ್ರೀನಿವಾಸ್‌

ಟಾಲಿವುಡ್ ನಟ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆಗೆ ಕಾಜಲ್‌ಗೆ ಉತ್ತಮ ಗೆಳೆತನ ಇದೆ. ಅವರೊಂದಿಗೆ ಬ್ಯಾಕ್ ಟು ಬ್ಯಾಕ್‌ ‘ಸೀತಾ’, ‘ಕವಚಂ’ ಚಿತ್ರಗಳಲ್ಲಿ ಕಾಜಲ್ ನಟಿಸಿದ್ದಾರೆ. ಹಾಗಾಗಿ, ಎಂಗೇಜ್‌ಮೆಂಟ್‌ಗೆ ಅವರೊಬ್ಬರಿಗೆ ಮಾತ್ರ ಆಹ್ವಾನ ಇತ್ತು ಎನ್ನಲಾಗಿದೆ. ಅವರು ಹೋಗಿ ಬಂದಿದ್ದರಿಂದಲೇ ಈ ವಿಚಾರ ಬಹಿರಂಗಗೊಂಡಿದೆ ಎಂಬುದು ಮೂಲಗಳ ಮಾಹಿತಿ. ಒಟ್ಟಿನಲ್ಲಿ ಈ ಬಗ್ಗೆ ಅಧಿಕೃತ ಸ್ಪಷ್ಟನೆಯನ್ನು ಕಾಜಲ್ ಅವರೇ ನೀಡಬೇಕಿದೆ.

ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಕಾಜಲ್‌ಗೆ ಸದ್ಯ ಕಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಅವಕಾಶಗಳಿವೆ. ತೆಲುಗಿನಲ್ಲಿ ಚಿರಂಜೀವಿ ಅಭಿನಯದ ‘ಆಚಾರ್ಯ’ ಹಾಗೂ ತಮಿಳಿನಲ್ಲಿ ಕಮಲ್‌ ಹಾಸನ್‌ ನಟನೆಯ ‘ಇಂಡಿಯನ್‌ 2’ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಪ್ಯಾರೀಸ್ ಪ್ಯಾರೀಸ್‌’ ಚಿತ್ರದಲ್ಲಿ ಅವರು ನಟಿಸಿದ್ದು, ರಿಲೀಸ್‌ಗೆ ರೆಡಿ ಇದೆ. ‘ಮೋಸಗಾಳ್ಳು’, ‘ಹೇ ಸಿನಮಿಕಾ’, ‘ಮುಂಬೈ ಸಾಗಾ’ ಅವರ ಇನ್ನಿತರ ಸಿನಿಮಾಗಳು.

Related posts

ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

Times fo Deenabandhu

ಶ್ರೀರಾಮುಲು ಪುತ್ರಿ ವಿವಾಹದಲ್ಲಿ ಬದ್ಧವೈರಿಗಳ ಮುಖಾಮುಖಿ

ಡಿಕೆಶಿಗೆ ಮುಸ್ಲಿಮರನ್ನು ಬಿಟ್ಟರೆ ರಾಜಕೀಯ ಜೀವನವೇ ಇಲ್ಲ: ಸಚಿವ ಈಶ್ವರಪ್ಪ ಲೇವಡಿ

Times fo Deenabandhu