Times of Deenabandhu
  • Home
  • ಮುಖ್ಯಾಂಶಗಳು
  •  ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರಸಿಂಗ್‌ ಧೋನಿ ನಿವೃತ್ತಿ
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರಸಿಂಗ್‌ ಧೋನಿ ನಿವೃತ್ತಿ

ಮುಂಬೈ: ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕ ಎಂದೇ ಖ್ಯಾತರಾಗಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರೊಂದಿಗೆ ಸುಮಾರು ಒಂದು ವರ್ಷದಿಂದ ಅವರ ನಿವೃತ್ತಿಯ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ಶನಿವಾರ ತೆರೆ ಎಳೆದಿದ್ದಾರೆ.
’ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಇಂದು ಸಂಜೆ (ಶನಿವಾರ) 7.29 (19.29) ರಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ‘ ಎಂದು 39 ವರ್ಷದ ವಿಕೆಟ್‌ಕೀಪರ್– ಬ್ಯಾಟ್ಸ್‌ಮನ್ ಧೋನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಅವರ ನಾಯಕತ್ವದಲ್ಲಿ ಭಾರತ ತಂಡವು 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2014ರಲ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2017ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಟಗಾರನಾಗಿ ಮುಂದುವರಿದಿದ್ದರು. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಂತರ ಅವರು ಭಾರತ ತಂಡಕ್ಕೆ ಮರಳಿರಲಿಲ್ಲ.

’ಕ್ಯಾಪ್ಟನ್ ಕೂಲ್‘ ಎಂದೇ ಖ್ಯಾತರಾಗಿರುವ ಧೋನಿ ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವರು. ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲು ಅವರು ಶುಕ್ರವಾರ ಚೆನ್ನೈಗೆ ಬಂದಿಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಐಸಿಸಿಯ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಹಲವು ನೂತನ ಸಾಧನೆಗಳಿಗೆ ಅವರ ನಾಯಕತ್ವ ಕಾರಣವಾಗಿತ್ತು.

ಜಾರ್ಖಂಡ್ ರಾಜಧಾನಿ ರಾಂಚಿಯ ಧೋನಿ ಹೆಚ್ಚಾಗಿ ಬ್ಯಾಟಿಂಗ್ ಮಾಡಿದ್ದು 5 ಅಥವಾ 7ನೇ ಕ್ರಮಾಂಕದಲ್ಲಿ. ಆದರೂ 350 ಏಕದಿನ ಪಂದ್ಯಗಳಿಂದ 10773 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ10 ಶತಕ ಮತ್ತು 73 ಅರ್ಧಶತಕಗಳು ಇವೆ.

90 ಟೆಸ್ಟ್‌ಗಳಲ್ಲಿ 4876 ರನ್‌ ಗಳನ್ನು ಕಲೆಹಾಕಿದ್ದರು. ಅದರಲ್ಲಿ ಆರು ಶತಕ, ಒಂದು ದ್ವಿಶತಕ ಮತ್ತು 33 ಅರ್ಧಶತಕಗಳು ಸೇರಿವೆ.

ಟಿ20 ಕ್ರಿಕೆಟ್‌ನಲ್ಲಿ 98 ಪಂದ್ಯಗಳನ್ನು ಆಡಿ 4432 ರನ್‌ಗಳನ್ನು ಗಳಿಸಿದ್ದಾರೆ. ಎರಡು ಅರ್ಧಶತಕಗಳು ಇವೆ.

Related posts

ಈ ಬಾರಿ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆ ದಿನ ಹೊರಬಿದ್ದ ಎರಡನೇ ಸ್ಪರ್ಧಿ ಯಾರು? ಜನರ ಮೆಚ್ಚುಗೆ ಗಳಿಸಿದ ಅವರು ಯಾರು?

Times fo Deenabandhu

ಅಯೋಧ್ಯೆ ರಾಮ ಮಂದಿರ : ಭಕ್ತಿ–ಸಂಭ್ರಮಗಳ ಪರಾಕಾಷ್ಠೆ

Times fo Deenabandhu

 ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಇನ್ನೊಂದು ಹೆಸರು, ಶಿಕ್ಷಣ, ವೃತ್ತಿ ಹಿನ್ನಲೆ ಬಗ್ಗೆ ಇಲ್ಲಿದೆ ಸವಿವರ!

Times fo Deenabandhu