Times of Deenabandhu
  • Home
  • ಮುಖ್ಯಾಂಶಗಳು
  •  ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!

ಆತ ಕಳ್ಳತನಕ್ಕೆ ಹೊಂಚು ಹಾಕಿ ಬ್ಯಾಂಕಿಗೆ ನುಗ್ಗಿದ್ದ. ಅಂತೆಯೇ ಯಶಸ್ವಿಯಾಗಿ ಕಳ್ಳತನದ ಕೆಲಸವನ್ನೂ ಮಾಡಿ ಮುಗಿಸಿದ್ದ. ಆದರೆ, ಈತ ಬ್ಯಾಂಕಿನಲ್ಲಿದ್ದ ಯಾವುದೇ ಹಣವನ್ನು ಮುಟ್ಟಿಲ್ಲ…! ಮತ್ತೇನು ಕದ್ದಿದ್ದು ಅಂತೀರಾ…? ಈತ ಕದ್ದಿದ್ದು ಸ್ಯಾನಿಟೈಜರ್…! ಖಂಡಿತಾ ನಿಜ. ಈತ ಸ್ಯಾನಿಟೈಜರ್ ಕದಿಯುವ ಸಲುವಾಗಿಯೇ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದ…!
ಇದು ಅಮೇರಿಕಾದ ಅಯೋವಾದಲ್ಲಿ ನಡೆದಿರುವ ವಿಲಕ್ಷಣ ಪ್ರಕರಣ. ಬ್ಯಾಂಕಿನಲ್ಲಿ ಸ್ಯಾನಿಟೈಸರ್ ಕಳ್ಳತನ ಮಾಡಿದ ಆರೋಪದಲ್ಲಿ 39 ವರ್ಷದ ಮಾರ್ಕ್ ಗ್ರೇ ಎಂಬಾತನನ್ನು ಪೊಲೀಸರೀಗ ಬಂಧಿಸಿದ್ದಾರೆ.
ಕೊರೊನಾ ವೈರಸ್ ಅಬ್ಬರ ಶುರುವಾದ ಬಳಿಕ ಸ್ಯಾನಿಟೈಜರ್‌ನ ಬೇಡಿಕೆ ಹೆಚ್ಚಾಗಿದೆ. ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಎಲ್ಲರೂ ಸ್ಯಾನಿಟೈಜರ್ ಬಳಸುತ್ತಿದ್ದಾರೆ. ಈ ಸ್ಯಾನಿಟೈಜರ್ ಬಳಕೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ ಒಂದು ಹಂತದಲ್ಲಿ ದುಪ್ಪಟ್ಟು ಹಣ ಕೊಡುತ್ತೇವೆ ಎಂದರೂ ಸ್ಯಾನಿಟೈಜರ್ ಸಿಗುತ್ತಿರಲಿಲ್ಲ. ಈಗಲೂ ಹಲವು ಕಡೆ ಇದೇ ಸ್ಥಿತಿ ಇದೆ. ಅಂತೆಯೇ ಮಾರ್ಕ್ ಗ್ರೇ ಕೂಡಾ ಸ್ಯಾನಿಟೈಜರ್ ಸಿಗದ ಕಾರಣ ಬ್ಯಾಂಕಿಗೆ ನುಗ್ಗಿದ್ದ. ಈತ ಮಧ್ಯರಾತ್ರಿ ಪಿಯರ್ಸ್ ಸ್ಟ್ರೀಟ್‌ನಲ್ಲಿರುವ ನ್ಯಾಷನಲ್ ಬ್ಯಾಂಕಿನ ಗಾಜನ್ನು ಒಡೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದಾನೆ ಎಂದು ದೂರಲಾಗಿದೆ. ಈ ಕಳ್ಳತನದ ಬಗ್ಗೆ ಬ್ಯಾಂಕಿನವರು ಬೆಳಗ್ಗೆ 5:15ಕ್ಕೆ ಸಿಯೋಕ್ಸ್ ನಗರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಳ್ಳತನ ಬೇಟೆಗೆ ಇಳಿದಿದ್ದರು.
ಹಾಗಂತ ಮಾರ್ಕ್ ಗ್ರೇ ಬ್ಯಾಂಕಿಗೆ ಮಾತ್ರ ನುಗ್ಗಿರಲಿಲ್ಲ. ಮುಂಜಾನೆ 1: 45ರ ಸುಮಾರಿಗೆ ನೆಬ್ರಸ್ಕಾ ಸ್ಟ್ರೀಟ್‌ನಲ್ಲಿರುವ ಕೌನ್ಸೆಲಿಂಗ್ ಸೇವೆಯೊದಗಿಸುವ ಕಚೇರಿಯ ಗಾಜಿನ ಬಾಗಿಲನ್ನು ಒಡೆದು ಹಣ ಹುಡುಕಿದ ಆರೋಪವೂ ಈತನ ಮೇಲಿದೆ. ಇದಾದ ಬಳಿಕ ಬೆಳಗ್ಗೆ 5: 45 ರ ಸುಮಾರಿಗೆ ಗ್ರೇ ಇಟಾಲಿಯನ್ ರೆಸ್ಟೋರೆಂಟ್‌ಗೆ ನುಗ್ಗಿದ ಆರೋಪವನ್ನೂ ಈತ ಎದುರಿಸುತ್ತಿದ್ದಾನೆ. ಇದಾದ ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಸರಣಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಮಾಡಿದ ತಪ್ಪಿಗೆ ಮಾರ್ಕ್‌ ಗ್ರೇ ಜೈಲೂಟ ತಿನ್ನುತ್ತಿದ್ದಾನೆ.

Related posts

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾ.7ರ ವರೆಗೆ ಪೊಲೀಸ್​ ವಶಕ್ಕೆ ನೀಡಿದ ಕೋರ್ಟ್​

Times fo Deenabandhu

 ‘ಭಯ ಬೇಡ, ಭಾರತ ಶೀಘ್ರದಲ್ಲೇ ಕೊರೊನಾ ಮುಕ್ತ’: ವಿನಯ್‌ ಗುರೂಜಿ ಅಭಯ

ಗಲ್ಲು ಶಿಕ್ಷೆಗೆ ಕೆಲವೇ ಗಂಟೆಗಳ ಮುನ್ನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿರ್ಭಯಾ ಹಂತಕರು

Times fo Deenabandhu