Times of Deenabandhu
  • Home
  • ಮುಖ್ಯಾಂಶಗಳು
  •  ಪ್ರವಾಹ: ಸರ್ಕಾರದಿಂದ ಪರಿಷ್ಕೃತ ಪರಿಹಾರ ಮೊತ್ತ, ಮನೆ ದುರಸ್ತಿಗೆ ₹5 ಲಕ್ಷ!
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಪ್ರವಾಹ: ಸರ್ಕಾರದಿಂದ ಪರಿಷ್ಕೃತ ಪರಿಹಾರ ಮೊತ್ತ, ಮನೆ ದುರಸ್ತಿಗೆ ₹5 ಲಕ್ಷ!

ಬಳ್ಳಾರಿ: ಪ್ರವಾಹದಿಂದ ಮನೆಗೆ ಸಂಪೂರ್ಣ ಹಾನಿಯಾದರೆ ನೀಡುತ್ತಿದ್ದ ₹ 5 ಲಕ್ಷ ಪರಿಹಾರವನ್ನು, ಭಾಗಶಃ ಹಾನಿಯಾದ ಮನೆಯ ಮರುನಿರ್ಮಾಣಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.

ಹಿಂದಿನ ವರ್ಷ ಪ್ರವಾಹದಲ್ಲಿ ಮನೆ ಸಂಪೂರ್ಣ ಹಾನಿಯಾದವರಿಗೆ ₹ 5ಲಕ್ಷ ಪರಿಹಾರವನ್ನು ನೀಡಲಾಗಿತ್ತು. ಆದರೆ ಮನೆ ದುರಸ್ತಿಗೆ ಆಗ ₹ 95,100 ನೀಡಲಾಗಿತ್ತು. ಈ ವರ್ಷ ಕೇಂದ್ರ ಸರ್ಕಾರದ ಮಾರ್ಗಸೂಚಿ ದರಕ್ಕಿಂತಲೂ ಹೆಚ್ಚು ಪರಿಹಾರಧನ ಸಂತ್ರಸ್ತರಿಗೆ ದೊರಕಲಿದೆ. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚುವರಿ ಹಣವನ್ನು ಭರಿಸಲು ನಿರ್ಧರಿಸಿದ್ದು ಶುಕ್ರವಾರ ಆದೇಶ ಹೊರಬಿದ್ದಿದೆ.

ಮನೆಗೆ ಶೇ 25ರಿಂದ ಶೇ 75ರವರೆಗೂ ಹಾನಿಯಾದರೆ ನೀಡುತ್ತಿದ್ದ ಪರಿಹಾರ ಧನವನ್ನು ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಗುಂಪಿನ ಸಂತ್ರಸ್ತರು ಹೊಸದಾಗಿ ಮನೆ ಕಟ್ಟಿಕೊಳ್ಳಲು ಈ ಮೊತ್ತ ನೆರವಾಗಲಿದೆ.

ಭಾಗಶಃ ಮನೆಹಾನಿಯಾದರೆ ನೀಡುತ್ತಿದ್ದ ₹ 95,100ರ ಬದಲಿಗೆ ₹ 3 ಲಕ್ಷ ಪರಿಹಾರವನ್ನು ಸರ್ಕಾರ ನೀಡಲಿದೆ. ಶೇ 15.25ರಷ್ಟು ಹಾನಿಯಾದರೆ ಕೇವಲ ₹ 5,200 ನೀಡಲಾಗುತ್ತಿತ್ತು. ಈಗ ಅದನ್ನು ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ.

ದಿನಬಳಕೆ ವಸ್ತುಗಳಿಗೆ ₹ 10 ಸಾವಿರ: ಪ್ರವಾಹದಿಂದ ಬಾಧಿತರಾದ ಜನರ ಬಟ್ಟೆ ಹಾಗೂ ದಿನಬಳಕೆ ವಸ್ತುಗಳಿಗಾಗಿ ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪ ಪರಿಹಾರ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ₹ 3,800 ನಿಗದಿಪಡಿಸಿದ್ದು, ರಾಜ್ಯ ಸರ್ಕಾರವು ಅದಕ್ಕೆ ₹ 6,200 ಸೇರಿಸಿ ಒಟ್ಟು ₹10 ಸಾವಿರ ನೀಡಲಿದೆ. ರಾಜೀವಗಾಂಧಿ ವಸತಿ ನಿಗಮವು ಅಭಿವೃದ್ಧಿಪಡಿಸಿದ ತಂತ್ರಾಂಶದ ಮೂಲಕವೇ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಪರಿಹಾರಧನ ಸೇರಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್‌, ‘ಈ ವರ್ಷ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಧನ ದೊರಕಲಿದೆ. ಆಗ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ದುರಸ್ತಿಗೆ ನಿಗದಿಯಾಗಿದ್ದ ಮೊತ್ತ ಈ ವರ್ಷ ಹೆಚ್ಚಾಗಿದೆ’ ಎಂದು ಹೇಳಿದರು.

Related posts

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ, ಪಾದರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

Times fo Deenabandhu

ಮದುಮಗಳ ಸಹೋದರನಿಗೆ ಕೊರೊನಾ ಸೋಂಕು..ಮದುಮಗಳು ಸೇರಿದಂತೆ ಕುಟುಂಬದವರೆಗೆಲ್ಲ ಕ್ವಾರಾಂಟೈನ್..

ಪ್ರಧಾನಿ ನರೇಂದ್ರ ಮೋದಿಗೆ ದೇವಸ್ಥಾನ ನಿರ್ಮಿಸಿ ಅಭಿಮಾನ ಮೆರೆದ ತಮಿಳುನಾಡು ರೈತ

Times fo Deenabandhu