Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಈವರೆಗಿನ ಗರಿಷ್ಠ ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ 7,178 ಮಂದಿ ಕೋವಿಡ್ ಪೀಡಿತರಾಗಿರುವುದು ಶನಿವಾರ ದೃಢಪಟ್ಟಿದೆ. ಈವರೆಗೆ 24 ಗಂಟೆಗಳ (ಆ.7ರ ಸಂಜೆ ಐದರಿಂದ ಆ.8ರ ಸಂಜೆ ಐದರವರೆಗೆ) ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಸೋಂಕಿತರ ಸಂಖ್ಯೆ 1.72 ಲಕ್ಷ ದಾಟಿದೆ.

ರಾಜ್ಯದಲ್ಲಿ ಪ್ರಥಮ ಕೋವಿಡ್ ಪ್ರಕರಣ ವರದಿಯಾಗಿ (ಮಾ.8ರಂದು) ಐದು ತಿಂಗಳು ಕಳೆದಿದೆ. ಪ್ರಾರಂಭಿಕ ದಿನಗಳಲ್ಲಿ ಲಾಕ್‌ ಡೌನ್ ಪರಿಣಾಮಕಾರಿಯಾಗಿ ಜಾರಿ ಮಾಡಿದ ಪರಿಣಾಮ ಸೋಂಕು ನಿಯಂತ್ರಣದಲ್ಲಿತ್ತು. ನಾಲ್ಕನೇ ಹಂತದ ಲಾಕ್‌ ಡೌನ್ ಅಂತ್ಯವಾಗುವ ವೇಳೆಗೆ (ಜೂ.30) ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15,242ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ 4,555 ಮಂದಿ ಮಾತ್ರ ಕೋವಿಡ್ ಪೀಡಿತರಾಗಿದ್ದರು. ಮುಂದಿನ ದಿನಗಳಲ್ಲಿ ಲಾಕ್‌ ಡೌನ್‌ ಸಡಿಲಗೊಳಿಸಿ, ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿದ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿತು. ಕಳೆದ 39 ದಿನಗಳಲ್ಲಿ 1.56 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 4,022 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಸರಾಸರಿ 22 ದಿನಗಳಿಗೆ ದುಪ್ಪಟ್ಟಾಗುತ್ತಿದೆ. ರಾಜ್ಯದಲ್ಲಿ 15 ದಿನಗಳಲ್ಲೇ ಇಮ್ಮಡಿಯಾಗುತ್ತಿದೆ. ಪ್ರತಿ ಹತ್ತು ಲಕ್ಷ ಮಂದಿಯಲ್ಲಿ 45 ಮಂದಿ ಮೃತಪಡುತ್ತಿದ್ದು, ಬಹುತೇಕರು 50 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಈವರೆಗೆ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ ಶೇ 83.2 ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೇ ಗೋಚರಿಸಿಲ್ಲ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯವೂ ಹಿಂದೆಬಿದ್ದಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿದ್ದರಿಂದಾಗಿ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ ತಲಾ 100 ಪರೀಕ್ಷೆಗಳಲ್ಲಿ 9 ಮಂದಿ ಸೋಂಕಿತರಾಗಿರುವುದು ದೃಢಪಡುತ್ತಿದೆ. ಈ ಪ್ರಮಾಣ ಮಹಾರಾಷ್ಟ್ರದಲ್ಲಿ 19, ದೆಹಲಿಯಲ್ಲಿ 13 ರಷ್ಟಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಚೇತರಿಸಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಬೆಂಗಳೂರಿನಲ್ಲಿ 2,229 ಮಂದಿ ಸೇರಿದಂತೆ ರಾಜ್ಯದಲ್ಲಿ 5,006 ಮಂದಿ ಶನಿವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಹೊಸದಾಗಿ 2,665 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ ಮತ್ತೆ 607 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರದ ಗಡಿ (9,991) ಸಮೀಪಿಸಿದೆ.

3 ಸಾವಿರ ಗಡಿ ದಾಟಿದ ಸಾವು: ಕೊರೊನಾ ಸೋಂಕಿತರಲ್ಲಿ ಮತ್ತೆ 93 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ ಮೂರು ಸಾವಿರದ ಗಡಿ (3,091) ದಾಟಿದೆ.

Related posts

ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಡ: ಒಳ ಮೀಸಲಾತಿಗೆ ಆಗ್ರಹ

Times fo Deenabandhu

 ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!

Times fo Deenabandhu

ನಾಯಿ ಬಿಸ್ಕೇಟ್ ತಿಂದಿದ್ದೇಕೆ ನಟಿ ರಶ್ಮಿಕಾ ಮಂದಣ್ಣ?

Times fo Deenabandhu