Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸ್ನಾನ ಮಾಡುವಾಗ ಮಾಡುವ ಈ ತಪ್ಪುಗಳೇ ನಿಮ್ಮ ತ್ವಚೆಯ ಹಾನಿಗೆ ಕಾರಣ

ನಿತ್ಯದ ಒಂದು ಕರ್ಮವೇ ಆಗಿದೆ. ಮೊದಲು ತಲೆ ಮೈಮೇಲೆಲ್ಲಾ ನೀರು ಸುರಿದುಕೊಳ್ಳುವುದು, ಸೋಪು ಹಾಕಿ ಚೆನ್ನಾಗಿ ನೊರೆ ಬರಿಸಿ ಮೈ ಉಜ್ಜಿಕೊಳ್ಳುವುದು. ಬಳಿಕ ನೀರಿನಿಂದ ತೋಯಿಸಿ ನೊರೆಯನ್ನು ನಿವಾರಿಸಿ. ಬಳಿಕ ದಪ್ಪ ಟವೆಲ್ಲಿನಿಂದ ಒರೆಸಿಕೊಳ್ಳುವುದು, ಅಷ್ಟೇ. ಈ ಕ್ರಮವನ್ನು ನಾವು ದಶಕಗಳಿಂದ ಅನುಸರಿಸುತ್ತಾ ಬಂದಿದ್ದೇವೆ. ಆದರೆ ಈ ಕ್ರಮ ನಿಮ್ಮ ತ್ವಚೆಗೆ ನಿಮಗೆ ಅರಿವಿಲ್ಲದೇ ಅಪಾಯ ಉಂಟುಮಾಡುತ್ತಿದ್ದಿರಬಹುದು.

ನಿಮ್ಮ ಸ್ನಾನದ ಕ್ರಮ ಅಥವಾ ಕಾಲುಗಳ ರೋಮಗಳನ್ನು ನಿವಾರಿಸುವ ಮೂಲಕ ಸೌಂದರ್ಯ ಹೆಚ್ಚಿಸುವ ಕ್ರಮ ನಿಮ್ಮ ತ್ವಚೆಯ ಆರೋಗ್ಯದ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಹಾಗಾಗಿ, ತ್ವಚೆಯ ಆರೋಗ್ಯ ಚೆನ್ನಾಗಿರಬೇಕಾದರೆ ತ್ವಚೆಗೆ ಉತ್ತಮ ಆರ್ದ್ರತೆ ಒದಗಿಸುವುದು ಮತ್ತು ಅಪಾಯಕರ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿದೆ. ಬನ್ನಿ, ಸ್ನಾನದಲ್ಲಿ ನಾವು ಮಾಡುವ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.
ತುಂಬಾ ಹೆಚ್ಚು ಹೊತ್ತು ಸ್ನಾನ ಮಾಡುವುದು
ಸ್ನಾನ ಅಗತ್ಯವೇ ಆದರೂ ತುಂಬಾ ಹೊತ್ತು ಮಾಡಬಾರದು. ಹೆಚ್ಚು ಹೊತ್ತೂ ಸ್ನಾನ ಮಾಡಿದಷ್ಟೂ ತ್ವಚೆಯಿಂದ ಹೆಚ್ಚು ತೈಲ ನಷ್ಟಗೊಂಡು ತ್ವಚೆ ಅತಿಯಾಗಿ ಒಣಗುತ್ತದೆ. ಹಾಗಾಗಿ ಸ್ನಾನ ಐದರಿಂದ ಹದಿನೈದು ನಿಮಿಷಗಳಲ್ಲಿ ಪೂರೈಸುವುದು ಉತ್ತಮ ಕ್ರಮವಾಗಿದೆ. ಅಲ್ಲದೇ ನೀರು ಉಗುರುಬೆಚ್ಚಗಿದ್ದಷ್ಟೂ ಒಳ್ಳೆಯದು.

​ಬಿಸಿ ನೀರಿನ ಸ್ನಾನ ಏಕೆ ಕೆಟ್ಟದು?
ಬಿಸಿನೀರು ಅಪ್ಯಾಯಮಾನವೇನೋ ಹೌದು. ಏಕೆಂದರೆ ಈ ಮೂಲಕ ತ್ವಚೆಗೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುವುದೇ ಹೆಚ್ಚು. ಏಕೆಂದರೆ ಪ್ರತಿ ಬಾರಿ ನಮ್ಮ ತ್ವಚೆಯ ಮೇಲೆ ನೀರು ಮತ್ತು ಸೋಪು ಬಿದ್ದಾಗ ಸೂಕ್ಷ್ಮರಂಧ್ರಗಳಿಂದ ನಮ್ಮ ತ್ವಚೆಯಲ್ಲಿರುವ ಅಮೂಲ್ಯ ತೈಲವೂ ಹೊರಬರುತ್ತದೆ ಮತ್ತು ನಷ್ಟವಾಗುತ್ತದೆ. ಹೆಚ್ಚು ಹೊತ್ತು ನೀರಿನಲ್ಲಿದ್ದಷ್ಟೂ ಹೆಚ್ಚು ತೈಲ ನಮ್ಮ ತ್ವಚೆಯಿಂದ ನಷ್ಟವಾಗುತ್ತದೆ ಹಾಗೂ ತ್ವಚೆ ತೀರಾ ಒಣಗುತ್ತದೆ. ಅಲ್ಲದೇ ನಮ್ಮ ಸ್ನಾನದ ನೀರು ಅತಿ ಬಿಸಿಯಾಗಿರಬಾರದು. ಬಿಸಿ ಹೆಚ್ಚಿದಷ್ಟೂ ತೈಲ ಆವಿಯಾಗುವ ಪ್ರಮಾಣವೂ ಹೆಚ್ಚುತ್ತದೆ.

ಶವರ್ ಸ್ನಾನದಿಂದ ನಿಮ್ಮ ಸ್ನಾನ ಪೂರ್ಣವಾಗುತ್ತದೆಯೇ?
ಸಾಮಾನ್ಯವಾಗಿ ಸ್ನಾನವನ್ನು ಶವರ್ ಅಥವಾ ನೀರಿನ ಸಿಂಪರಣೆಯ ಮೂಲಕ ನಾವೆಲ್ಲಾ ನಿರ್ವಹಿಸುತ್ತೇವೆ. ಆದರೆ ಈ ವಿಧಾನದಿಂದ ನಮ್ಮ ಶರೀರ ಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆಯೇ? ಇಲ್ಲ, ನಮ್ಮ ಕುತ್ತಿಗೆಗೆ ಈ ವಿಧಾನದಿಂದ ಪೂರ್ಣವಾದ ಸ್ವಚ್ಛತೆ ದೊರಕುವುದಿಲ್ಲ. ಏಕೆಂದರೆ ಕುತ್ತಿಗೆಯ ಚರ್ಮ ಹೆಚ್ಚು ನೆರಿಗೆಯನ್ನು ಹೊಂದಿರುತ್ತದೆ. ತಲೆ ಮೇಲೆತ್ತಲು ಮತ್ತು ಕೆಳಗೆ ಬಗ್ಗಿಸಲು ಹೆಚ್ಚಿನ ವಿಸ್ತಾರದ ಚರ್ಮದ ಅಗತ್ಯವಿರುವ ಕಾರಣ ಇಲ್ಲಿ ಹೆಚ್ಚು ನೆರಿಗೆಗಳಿರುತ್ತವೆ. ಹಾಗಾಗಿ ಬೀಳುವ ನೀರಿನಿಂದ ಮಾತ್ರವೇ ಕುತ್ತಿಗೆಯನ್ನು ತೋಯಿಸದೇ ಮೈ ಉಜ್ಜುವ ಬ್ರಶ್ ನಿಂದ ತಲೆ ಮೇಲೆತ್ತಿ ಕುತ್ತಿಗೆಯ ಚರ್ಮವನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು. ಅಲ್ಲದೇ ಇಲ್ಲಿ ಹಿಂದಿನ ದಿನಗಳಲ್ಲಿ ಸಂಗ್ರಹವಾಗಿದ್ದ ಕೊಳೆಯೆಲ್ಲಾ ಹೋಗಲು ಚೆನ್ನಾಗಿ ಸೋಪನ್ನು ನೊರೆಬರಿಸಿ ತಿಕ್ಕುವುದು ಅಗತ್ಯ.

ಹೇರ್‌ ರಿಮೂವಿಂಗ್ ಸ್ನಾನಕ್ಕೂ ಮೊದಲು ಆಗಬೇಕೇ ಬಳಿಕವೇ?
ಒಂದು ವೇಳೆ ರೋಮ ನಿವಾರಣೆಯ ಬಳಿಕ ನೀವು ಸ್ನಾನ ಮಾಡುತ್ತಿದ್ದರೆ ಇದು ತಪ್ಪು ಕ್ರಮವಾಗಿದೆ. ಸ್ನಾನದ ಬಳಿಕ ತ್ವಚೆ ಮೃದುವಾಗಿದ್ದು ಕೂದಲ ಬುಡಗಳು ಸಹಾ ಮೃದುವಾಗಿರುತ್ತವೆ ಹಾಗೂ ಇವನ್ನು ನಿವಾರಿಸುವುದು ಇತರ ಸಮಯಗಳಿಗಿಂತಲೂ ಈಗ ಹೆಚ್ಚು ಸುಲಭವಾಗಿರುತ್ತವೆ. ಹಾಗೂ ಉರಿ ಅಥವಾ ಚರ್ಮ ಕೆಂಪಗಾಗುವುದು ಮೊದಲಾದವು ಎದುರಾಗುವುದಿಲ್ಲ.

ಸ್ನಾನದ ಸಮಯದಲ್ಲಿ ಹೆಚ್ಚು ಒತ್ತಡದಿಂದ ಬ್ರಶ್ ಬಳಸುತ್ತೀರೋ
ತ್ವಚೆಗೆ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಹೆಚ್ಚು ಒತ್ತಡದಿಂದ ಬ್ರಶ್ ಬಳಸಿದಾಗ ಮಾತ್ರ ಎಂದು ಅಂದುಕೊಂಡಿದ್ದರೆ ಇದು ತಪ್ಪು ಕ್ರಮವಾಗಿದೆ. ಆದರೆ ಹೆಚ್ಚು ಒತ್ತಡದಿಂದ ತ್ವಚೆಯನ್ನು ಉಜ್ಜಿದಷ್ಟೂ ಇದು ಚರ್ಮದ ಆಳದಿಂದ ನೈಸರ್ಗಿಕ ತೈಲಗಳು ಮತ್ತು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಹುದು. ಅಲ್ಲದೇ ಹೆಚ್ಚು ಉಜ್ಜುವಿಕೆಯಿಂದ ಸೂಕ್ಷ್ಮ ಗೆರೆಗಳೂ ಬಿದ್ದು ಇಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ ಕೀವುಗುಳ್ಳೆ, ಮೊಡವೆ, ಎಕ್ಸಿಮಾ ಮೊದಲಾದವುಗಳನ್ನು ಉಂಟು ಮಾಡಬಹುದು. ಹಾಗಾಗಿ ಮೃದುವಾದ ಬ್ರಶ್ ಬಳಸಿ ಹೆಚ್ಚಿನ ಒತ್ತಡವಿಲ್ಲದೇ ಸ್ವಚ್ಛಗೊಳಿಸುವುದು ಸುರಕ್ಷಿತವಾಗಿದೆ. ಈ ಮೂಲಕ ಚರ್ಮದ ಅಡಿಯಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳಲು, ದೊರಗಾಗಿರುವ ತ್ಚಚೆ ನುಣುಪಾಗಿಸಲು ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ನಿಮ್ಮ ಟವೆಲ್ಲನ್ನು ನೀವು ಸಾಕಷ್ಟು ಬಾರಿ ಸ್ವಚ್ಛಗೊಳಿಸುತ್ತಿಲ್ಲದೇ ಇರಬಹುದು
ಒಂದು ಸ್ನಾನದ ಟವೆಲ್ ಅನ್ನು ಎಷ್ಟು ಬಾರಿ ಬಳಸುತ್ತೀರಿ? ಏಕೆಂದರೆ ಸ್ನಾನ ಮಾಡಿ ಮೈ ಒರೆಸಿಕೊಂಡ ಬಳಿಕ ಇಲ್ಲಿ ಸಂಗ್ರಹವಾಗುವ ನೀರು ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತದೆ. ಇದೇ ಟವೆಲ್ ಒಣಗಿದ್ದರೂ ಸರಿ, ಮುಂದಿನ ಬಾರಿ ಬಳಸುವಾಗ ಕ್ರಿಮಿಗಳಿಂದ ಕೂಡಿರುತ್ತದೆ. ಹಾಗಾಗಿ ಪ್ರತಿ ಬಾರಿ ಸ್ನಾನ ಮಾಡುವಾಗಲೂ ಒಗೆದು ಇಸ್ತ್ರಿ ಮಾಡಿದ ಹೊಸ ಟವೆಲ್ಲನ್ನೇ ಬಳಸಬೇಕು. ಒಂದು ಟವೆಲ್ಲನ್ನು ಗರಿಷ್ಟ ನಾಲ್ಕು ವಾರಗಳವರೆಗೆ ಮಾತ್ರವೇ ಉಪಯೋಗಿಸಿ. ಬಳಿಕ ಹೊಸದಕ್ಕೆ ಬದಲಿಸಿಕೊಳ್ಳಿ.

ನಿಮ್ಮ ಸೋಪು ಗಡಸಾಗಿರಬಹುದು.
ಪರಿಮಳ ಚೆನ್ನಾಗಿದೆ ಎಂದ ಮಾತ್ರಕ್ಕೇ ಸೋಪು ಸಹಾ ಆರೋಗ್ಯಕರ ಇಲ್ಲದೇ ಇರಬಹುದು. ಇದರ ಬಳಕೆಯಿಂದ ತ್ವಚೆಯಲ್ಲಿ ಉರಿ ಮತ್ತು ಒಣಗುವಿಕೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಪರಿಮಳಯುಕ್ತ ಸೋಪು ಗಡಸಾಗಿರುತ್ತದೆ. ಒಂದು ವೇಳೆ ಸೋಪು ಬಳಸಿ ಸ್ನಾನ ಮಾಡಿದ ಬಳಿಕ ತ್ವಚೆಯಲ್ಲಿ ಉರಿ ಕಾಣಿಸಿಕೊಂಡರೆ ಮುಂದಿನ ಸ್ನಾನದಿಂದ ತೇವಕಾರಕ ಅಥವಾ ಮಾಯಿಶ್ಚರೈಸಿಂಗ್ ಬಾಡಿ ವಾಶ್ ದ್ರಾವಣ ಬಳಸಿ ಮೃದು ಬ್ರಶ್ ಮೂಲಕ ಹಚ್ಚಿಕೊಳ್ಳಿ. ಅಥವಾ ಉತ್ತಮ ಗುಣಮಟ್ಟದ ಪರಿಮಳ ರಹಿತ ಸೋಪು ಬಳಸಿ ಇದರಿಂದ ವ್ಯತ್ಯಾಸ ಕಾಣುತ್ತದೆಯೇ ಗಮನಿಸಿ.

​ಎಷ್ಟು ಅಂತರದ ಬಳಿಕ ನಿಮ್ಮ ರೇಜರ್ ಬದಲಿಸಬೇಕು?
ಪ್ರತಿ ಬಾರಿ ಶೇವ್ ಮಾಡಿಕೊಂಡ ಬಳಿಕ ರೇಜರ್ ಬ್ಲೇಡ್ ಗಳ ಸಂಧುಗಳಲ್ಲಿ ಕೊಳೆ ಮತ್ತು ಸತ್ತ ಜೀವಕೋಶಗಳು ತುಂಬಿಕೊಳ್ಳುವುದು ಸಾಮಾನ್ಯವಾಗಿದೆ. ಇವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸೂಕ್ತ ತಾಣವಾಗಿವೆ. ಮುಂದಿನ ಶೇವಿಂಗ್ ಸಮಯದಲ್ಲಿ ಇವು ನಿಮ್ಮ ದೇಹಕ್ಕೆ ದಾಟಿಕೊಳ್ಳಬಹುದು. ಹಾಗಾಗಿ, ಪ್ರತಿ ಬಾರಿ ಬಳಸಿದ ಬಳಿಕ ರೇಜರ್ ಬ್ಲೇಡ್ ಗಳ ನಡುವಣ ಸಂಧಿಯನ್ನೂ ಚೆನ್ನಾಗಿ ತೊಳೆಯಬೇಕು. ತಜ್ಞರ ಪ್ರಕಾರ ಒಂದು ರೇಜರ್ ಬಳಕೆ ಆರು ಅಥವಾ ಏಳು ಬಳಕೆಗಳಿಗೆ ಮೀಸಲಾಗಿಸಬೇಕು. ಇನ್ನೊಂದು ಸಲಹೆ ಎಂದರೆ ಪ್ರತಿ ಬಾರಿ ಶೇವ್ ಮಾಡಿದ ಬಳಿಕ ಬ್ಲೇಡುಗಳ ಅಂಚುಗಳ ನಡುವೆ ಕೊಂಚವೇ ಆಲಿವ್ ಎಣ್ಣೆಯನ್ನು ಬಿಟ್ಟುಕೊಂಡರೆ ಈ ತೊಂದರೆಯಿಂದ ರಕ್ಷಣೆ ಪಡೆಯುವ ಜೊತೆಗೇ ಬ್ಲೇಡುಗಳು ತುಕ್ಕು ಹಿಡಿಯುವುದರಿಂದ ರಕ್ಷಣೆ ಪಡೆಯಬಹುದು.

Related posts

ಪಾದರಾಯನಪುರ ದಾಂದಲೆ: ನನ್ನ ಹೆಸರು ಕೆಡಿಸುವ ಯತ್ನ, ಕಠಿಣ ಕ್ರಮ ಕೈಗೊಳ್ಳಿ: ಜಮೀರ್

Times fo Deenabandhu

 735 ಕೋಟಿ ರು. ಅತಂತ್ರ, ಕೆಜಿಎಫ್‌ 2ಗೆ ಕಾಯುತ್ತಿದ್ದವರಿಗೆ ಶಾಕ್!

Times fo Deenabandhu

ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ

Times fo Deenabandhu