Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಯುಪಿಎಸ್ಸಿಯಲ್ಲಿ ಕರ್ನಾಟಕ ಕಮಾಲ್‌

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ 2019ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 37 ಅಭ್ಯರ್ಥಿಗಳು ತೇರ್ಗಡೆಯಾಗುವ ಮೂಲಕ ರಾಜ್ಯದ ಕೀರ್ತಿ ಬೆಳಗಿದ್ದಾರೆ. ಚಿಕ್ಕಮಗಳೂರು ಮೂಲದ ಯಶಸ್ವಿನಿ ಬಿ. ರಾಜ್ಯದ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ್ದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರೆನಿಸಿದ್ದಾರೆ. ಎಚ್‌ ವಿನೋದ್‌ ಪಾಟೀಲ್‌ (132) ಹಾಗೂ ಎಚ್‌.ಎಸ್‌.ಕೀರ್ತನಾ(167) ರಾಜ್ಯದಲ್ಲಿ2ನೇ ಮತ್ತು 3ನೇ ಸ್ಥಾನ ಪಡೆದಿದ್ದಾರೆ.

ಹರಿಯಾಣದ ಪ್ರದೀಪ್‌ ಸಿಂಗ್‌ ದೇಶಕ್ಕೇ ಮೊದಲ ರ‍್ಯಾಂಕ್ ಪಡೆದಿದ್ದಾರೆ. 29 ವರ್ಷದ ಪ್ರದೀಪ್‌ ಸಿಂಗ್‌ ಪ್ರಸ್ತುತ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿ. ಫರೀದಾಬಾದ್‌ನಲ್ಲಿ ತರಬೇತಿ ಪಡೆಯುತ್ತಿರುವಾಗಲೇ ನಾಲ್ಕನೇ ಪ್ರಯತ್ನದಲ್ಲಿ ಐಎಎಸ್‌ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಮೂರನೇ ರ‍್ಯಾಂಕ್ ಪಡೆದಿರುವ ಉತ್ತರ ಪ್ರದೇಶ ಮೂಲದ ಪ್ರತಿಭಾ, ಮಹಿಳೆಯರ ವಿಭಾಗದಲ್ಲಿ ಟಾಪ್‌ ರ‍್ಯಾಂಕರ್‌ ಆಗಿ ಹೊರಹೊಮ್ಮಿದ್ದಾರೆ.
ಅಡ್ಡಿಯಾಗದ ದೃಷ್ಟಿ ದೋಷ

ದೃಷ್ಟಿ ದೋಷದ ನಡುವೆಯೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಯುವತಿ ಮೇಘನಾ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದ ಅವರು ಸತತ ಪರಿಶ್ರಮದ ಮೂಲಕ 465 ರ‍್ಯಾಂಕ್ ಗಳಿಸಿದ್ದಾರೆ. ಎರಡನೇ ಪ್ರಯತ್ನದಲ್ಲೇ ಪಾಸ್‌ ಆಗಿದ್ದಾರೆ.

829: ಆಯ್ಕೆಯಾದ ಒಟ್ಟು ಅಭ್ಯರ್ಥಿಗಳು

37: 1000 ರ‍್ಯಾಂಕ್ ಒಳಗೆ ರಾಜ್ಯದ ಅಭ್ಯರ್ಥಿಗಳು

ರಾಜ್ಯದಲ್ಲಿ ಟಾಪರ್ಸ್‌

ಯಶಸ್ವಿನಿ ಬಿ – 71

ವಿನೋದ್‌ ಪಾಟೀಲ್‌ ಎಚ್‌ – 132

ಕೀರ್ತನಾ ಎಚ್‌.ಎಸ್‌. – 167

ಸಚಿನ್‌ ಹಿರೇಮಠ ಎಸ್‌ – 213

ಹೇಮಾ ನಾಯಕ್‌ – 225

ದೇಶದ ಟಾಪ್‌ 5 ರ‍್ಯಾಂಕ್

1. ಪ್ರದೀಪ್‌ ಸಿಂಗ್‌

2. ಜತಿನ್‌ ಕಿಶೋರ್‌

3. ಪ್ರತಿಭಾ ವರ್ಮಾ

4. ಹಿಮಾಂಶು ಜೈನ್‌

5. ಜಯದೇವ್‌ ಸಿ.ಎಸ್‌

Related posts

ದೇಶದಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್‌, ನಾಲ್ಕೇ ದಿನದಲ್ಲಿ ದುಪ್ಪಟ್ಟಾದ ಸೋಂಕಿತರ ಸಂಖ್ಯೆ

ಕೊಲೆಯಾದಾತನ ಮನೆಗೆ ಹೋಗಿ ನಾನೇ ಕೊಲೆ ಮಾಡಿದ್ದು ಎಂದ ಭೂಪ

ಉಗ್ರ ಪೋಷಕ ಪಾಕಿಸ್ತಾನಕ್ಕೆ ಬ್ಲ್ಯಾಕ್‌ಲಿಸ್ಟ್‌ನಿಂದ ಪಾರಾಗಲು ಕೊನೆಯ ಗಡುವು

Times fo Deenabandhu