Times of Deenabandhu
  • Home
  • ಪ್ರಧಾನ ಸುದ್ದಿ
  •  ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವವರನ್ನು ಬಂಧಿಸಿ – ಮಾನವ ಹಕ್ಕುಗಳ ಆಯೋಗ ಆದೇಶ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವವರನ್ನು ಬಂಧಿಸಿ – ಮಾನವ ಹಕ್ಕುಗಳ ಆಯೋಗ ಆದೇಶ

ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಇಒಗಳನ್ನು ಬಂಧಿಸಿ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಸೋಂಕಿತರಿಗೆ ಆಗುತ್ತಿರುವ ಅವ್ಯವಸ್ಥೆಯೂ ಮಾನವ ಹಕ್ಕು ಉಲ್ಲಂಘನೆ ಎಂದು ಮಾಜಿ ಸಚಿವ ಎಚ್‌ಕೆ ಪಾಟೀಲ್‌ ಸಲ್ಲಿಸಿದ್ದ ದೂರು ಆಧರಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಡಿ.ಎಚ್‌. ವಘೇಲಾ ನೇತೃತ್ವದ ಪೀಠ ಸೋಮವಾರ ಈ ಸೂಚನೆ ನೀಡಿತು.
ವಿಚಾರಣೆಗೆ ಹಾಜರಾದ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌,ಅಂತ್ಯಕ್ರಿಯೆ ಶಿಷ್ಟಾಚಾರಗಳ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದರು. ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಲಾಯಿತು.
ಮಾಜಿ ಸಚಿವ ಎಚ್‌ಕೆ ಪಾಟೀಲ್‌, “ಸೋಂಕಿತರಿಗೆ ಅಸ್ಪತ್ರೆಗೆ ಸೇರಿಸಲು ಒಂದು ಗಂಟೆಯೊಳಗೆ ಆಂಬ್ಯುಲೆನ್ಸ್‌ , ಮೂರು ತಾಸಿನೊಳಗೆ ಆಸ್ಪತ್ರೆ ಸೇರಿಸಬೇಕು. ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು ಸೇರಿದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ಕೋರಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ಮೇರೆಗೆ ಆಯೋಗ ಸ್ಪಷ್ಟ ಸೂಚನೆಯನ್ನು ಸರಕಾರಕ್ಕೆ ನೀಡಿದೆ.

Related posts

ಚುನಾವಣೋತ್ತರ ಸಮೀಕ್ಷೆ: ಪೋಲ್‌ ಆಫ್‌ ಪೋಲ್ಸ್‌ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬಹುಪರಾಕ್‌

Times fo Deenabandhu

‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಜನತೆಗೆ ಅನಿಲ್‌ ಕುಂಬ್ಳೆ ಮನವಿ

Times fo Deenabandhu

ಮಂದಿರ ನಿರ್ಮಾಣದಿಂದ ಕೋವಿಡ್ ನಿರ್ಮೂಲನೆ ಸಾಧ್ಯ ಎನ್ನುವುದು ಕೆಲವರ ನಂಬಿಕೆ: ಪವಾರ್