Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆಗೆ ಹೈಕೋರ್ಟ್‌ ತಡೆ

ಬೆಂಗಳೂರು: ರಾಜ್ಯದ ಎಲ್ಲಾ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ಚುನಾವಣೆ ಮುಂದೂಡಿ, ಅಡಳಿತಾಧಿಕಾರಿಗಳನ್ನು ನೇಮಿಸುವ ಸರಕಾರದ ಆದೇಶಕ್ಕೆ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ.
ಪುತ್ತೂರಿನ ‘ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘ’ದ ಅಧ್ಯಕ್ಷ ಉದಯ ಮಾದೋರಿ, ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್‌ ಗೌಡ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರತಿವಾದಿಗಳಾದ ರಾಜ್ಯ ಸಹಕಾರ ಇಲಾಖೆಯ ಕಾರ್ಯದರ್ಶಿ, ಸಹಕಾರ ಸಂಘಗಳ ನಿಬಂಧಕರು, ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ರಾಜ್ಯ ಸಹಕಾರ ಸಂಘಗಳ ಚುನಾವಣಾ ಅಯೋಗಕ್ಕೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್‌ ಶ್ಯಾಮ್‌, “ಸರಕಾರದ ಆದೇಶ ಕಾನೂನು ಬಾಹಿರವಾಗಿದ್ದು, ಸಂವಿಧಾನದ 243-(ಝಡ್‌)(ಎಲ್‌)ರ ಉಲ್ಲಂಘನೆಯಾಗಿದೆ. ಹಾಗಾಗಿ, ಸರಕಾರದ ಆದೇಶಕ್ಕೆ ತಡೆ ನೀಡಬೇಕು.” ಎಂದು ಕೋರಿದರು.
ಜುಲೈ 14ರಂದು, ಆಡಳಿತಾವಧಿ ಮುಕ್ತಾಯಗೊಂಡಿರುವ ಹಾಗೂ ಮುಕ್ತಾಯಗೊಳ್ಳಲಿರುವ ರಾಜ್ಯದ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳಿಗೆ ಚುನಾವಣೆಯನ್ನು 2020ರ ಡಿಸೆಂಬರ್‌ ಅಂತ್ಯದವರೆಗೂ ಮುಂದೂಡಬೇಕು ಎಂದು ಈ ಹಿಂದೆ ಸರಕಾರ ಆದೇಶ ನೀಡಿತ್ತು.

Related posts

‘ಭಾರತದ ವಿರುದ್ಧ ನೇಪಾಳ ಪ್ರಧಾನಿಯ ಅಪ್ರಬುದ್ಧ ರಾಜತಾಂತ್ರಿಕ ನಡೆ’: ಸ್ವಪಕ್ಷದ ಪ್ರಭಾವಿ ನಾಯಕನಿಂದಲೇ ಟೀಕೆ

Times fo Deenabandhu

ಕಳೆದುಕೊಂಡಿದ್ದ ದೃಷ್ಟಿ ಅಪಘಾತದ ಬಳಿಕ ಮತ್ತೆ ಬಂತು…! ವೈದ್ಯರು ಏನು ಹೇಳುತ್ತಾರೆ…?

Times fo Deenabandhu

‘ಚೈನೀಸ್ ವೈರಸ್’ ಪದ ಸಮರ್ಥಿಸಿಕೊಂಡ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್

Times fo Deenabandhu