Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸೋಂಕಿತರಿಗಿಂತ ಗುಣಮುಖರೇ ಹೆಚ್ಚು; 4,776 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಕೊರೊನಾ ಸೋಂಕು ದೃಢಪಟ್ಟವರಿಗಿಂತ, ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಸೋಮವಾರ 4,752 ಜನರಲ್ಲಿ ಸೋಂಕು ದೃಢಪಟ್ಟಿದ್ದರೆ, 4,776 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಸೋಂಕಿತರಿಗಿಂತ, ಆಸ್ಪತ್ರೆಯಿಂದ ಗುಣಮುಖರಾದವರ ಸಂಖ್ಯೆಯೇ ಸಾವಿರಕ್ಕೂ ಅಧಿಕವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,39,591ಕ್ಕೆ ಏರಿಕೆಯಾಗಿದೆ. 98 ಮಂದಿ ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 2,595ಕ್ಕೆ ಮುಟ್ಟಿದೆ. 629 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರ (27), ಮೈಸೂರು (13), ಬೆಳಗಾವಿಯಲ್ಲಿ (10) ಜುಲೈ 3ರಂದು ಮೃತಪಟ್ಟವರ ಸಂಖ್ಯೆ ಎರಡಂಕಿ ತಲುಪಿದೆ.

ಶೇ 5.67ಕ್ಕೆ ಏರಿಕೆ: ‘ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗುವವರ ಪ್ರಮಾಣ ಒಂದು ವಾರದಲ್ಲಿ ಶೇ.5.67 ರಷ್ಟು ಏರಿಕೆಯಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ‌ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

‘ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ 9.17 ರಷ್ಟು ಏರಿಕೆ ಕಂಡಿದೆ. ಭಾನುವಾರ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ಪ್ರಮಾಣ ಶೇ.42.81 ಮತ್ತು ಬೆಂಗಳೂರಿನಲ್ಲಿ ಶೇ 35.14 ರಷ್ಟು ಇತ್ತು’ ಎಂದು ಅವರು ತಿಳಿಸಿದ್ದಾರೆ.

Related posts

ಕರ್ನಾಟಕ ಬಜೆಟ್ 2020: ರಾಜ್ಯ ಬೊಕ್ಕಸ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಒತ್ತು ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮದ್ಯ, ಡೀಸೆಲ್,ಪೆಟ್ರೋಲ್ ಬೆಲೆ ಹೆಚ್ಚಳ : ಮನೆ ಖರೀದಿದಾರರಿಗೆ ಸಿಹಿ ಸುದ್ದಿ, ಅಡಿಕೆ ಬೆಳೆಗಾರರಿಗೆ 2 ಲಕ್ಷ ರೂ .ವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ.

ಗಲ್ಲು ಪ್ರಶ್ನಿಸಿ ನಿರ್ಭಯಾ ಅಪರಾಧಿಯಿಂದ ಮೇಲ್ಮನವಿ

Times fo Deenabandhu

 ಜಿಡಿಪಿ ಶೇ 1.1ಕ್ಕೆ ಕುಸಿತ ಸಂಭವ

Times fo Deenabandhu