Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಬಣ್ಣ–ಬಣ್ಣದ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ ಚಿಣ್ಣರು

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಬಣ್ಣ–ಬಣ್ಣದ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರವು ಈ ಶೈಕ್ಷಣಿಕ ವರ್ಷ ಒಂದೇ ಬಣ್ಣದಲ್ಲಿರುವುದಿಲ್ಲ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯಾ ಶಾಲೆಗಳ ಸಮವಸ್ತ್ರದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಆಯಾ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳಿಗೆ (ಎಸ್‌ಡಿಎಂಸಿ) ನೀಡಿದೆ. ಈ ನಿಯಮ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸಲಿದೆ.

‘ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಎಸ್‌ಡಿಎಂಸಿಗಳಿಗೆ ಅನುದಾನ ಬಿಡುಗಡೆಯಾಗುವುದು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರಗಳಿಗೆ ಆರ್ಡರ್‌ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಎರಡನೇ ಜೋಡಿ ಸಮವಸ್ತ್ರದ ಹಣವನ್ನು ಮಾತ್ರ ಈಗ ಇಲಾಖೆಯು ಎಸ್‌ಡಿಎಂಸಿಗಳಿಗೆ ವರ್ಗಾಯಿಸಿದ್ದು, ತಮ್ಮ ಆಯ್ಕೆಯ ಬಣ್ಣದ ಸಮವಸ್ತ್ರಗಳನ್ನು ಹೊಲಿಸಿ, ವಿದ್ಯಾರ್ಥಿಗಳಿಗೆ ವಿತರಿಸುವಂತೆ ಸೂಚಿಸಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯಸರ್ಕಾರವು ಪ್ರತಿ ವಿದ್ಯಾರ್ಥಿಗೆ, ಒಂದು ಸಮವಸ್ತ್ರಕ್ಕೆ ₹250 ಖರ್ಚು ಮಾಡುತ್ತದೆ. ಅಂದರೆ, ಈ ಉದ್ದೇಶಕ್ಕೆ ಸರ್ಕಾರ ₹100 ಕೋಟಿಗೂ ಹೆಚ್ಚು ಖರ್ಚು ಮಾಡುತ್ತದೆ.

Related posts

ಯಡಿಯೂರಪ್ಪ- ಈಶ್ವರಪ್ಪ ಮನಸ್ತಾಪ ಏನಪ್ಪ? ಸಿಎಂ ಸಮಾರಂಭಕ್ಕೆ ಉಸ್ತುವಾರಿ ಗೈರು!

Times fo Deenabandhu

ಕಾಳ್ಗಿಚ್ಚಿನ ಕಾರಣಕ್ಕೆ 10 ಸಾವಿರ ಒಂಟೆ ಕೊಲ್ಲಲು ನಿರ್ಧರಿಸಿದೆಯಂತೆ ಆಸ್ಟ್ರೇಲಿಯಾ…! : ಯಾಕೆ ಗೊತ್ತಾ…?

Times fo Deenabandhu

ಬಿಯರ್ ತಯಾರಿಕಾ ಕಂಪನಿಗೆ ಟೆನ್ಷನ್ ತಂದ ಡೆಡ್ಲಿ ಕೊರೊನಾ ವೈರಸ್…! ಯಾಕೆ ಗೊತ್ತಾ…?

Times fo Deenabandhu