Times of Deenabandhu
  • Home
  • ಪ್ರಧಾನ ಸುದ್ದಿ
  •  ಯಾವುದೇ ರಾಜ್ಯಗಳ ಮೇಲೆ ಯಾವುದೇ ಭಾಷಾ ಹೇರಿಕೆ ಇಲ್ಲ: ಸಚಿವ ಪೋಖ್ರಿಯಾಲ್
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಯಾವುದೇ ರಾಜ್ಯಗಳ ಮೇಲೆ ಯಾವುದೇ ಭಾಷಾ ಹೇರಿಕೆ ಇಲ್ಲ: ಸಚಿವ ಪೋಖ್ರಿಯಾಲ್

ಚೆನ್ನೈ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಮುಖಾಂತರ ಕೇಂದ್ರ ಸರ್ಕಾರವು ಯಾವುದೇ ರಾಜ್ಯಗಳ ಮೇಲೆ ಯಾವುದೇ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಭಾನುವಾರ ತಿಳಿಸಿದರು.

ನೂತನ ಶಿಕ್ಷಣ ನೀತಿಯು ಹಿಂದಿ ಮತ್ತು ಸಂಸ್ಕೃತ ಭಾಷೆಯನ್ನು ಹೇರುತ್ತಿದೆ ಎನ್ನುವ ಕಾರಣದಿಂದ ತಮಿಳುನಾಡಿನಾದ್ಯಂತ ನೀತಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ನಿಶಾಂಕ್‌ ತಮಿಳು ಭಾಷೆಯಲ್ಲೇ ಟ್ವೀಟ್‌ ಮುಖಾಂತರ ಸ್ಪಷ್ಟನೆ ನೀಡಿದ್ದಾರೆ. ‘ತಮಿಳುನಾಡಿನಲ್ಲಿ ಎನ್‌ಇಪಿ ಅನುಷ್ಠಾನದ ಕುರಿತು ನಾನು ಕೇಂದ್ರದ ಸಚಿವರಾಗಿದ್ದ ಪೊನ್‌ ರಾಧಾಕೃಷ್ಣನ್‌ ಅವರ ಮಾರ್ಗದರ್ಶನವನ್ನು ಬಯಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಎನ್‌ಇಪಿಯನ್ನು ವಿರೋಧಿಸಿದ್ದು, ಪ್ರಸ್ತಾವಿತ ಬದಲಾವಣೆಗಳ ಪುನರ್‌ಪರಿಶೀಲನೆಗೆ ಆಗ್ರಹಿಸಿವೆ. ‘ಎನ್‌ಇಪಿ ಮುಖಾಂತರ ಹಿಂದಿ ಮತ್ತು ಸಂಸ್ಕೃತದ ಹೇರಿಕೆ ಮಾಡಲಾಗುತ್ತಿದ್ದು, ಸಮಾನ ಮನಃಸ್ಥಿತಿ ಇರುವ ಪಕ್ಷಗಳು ಹಾಗೂ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೂಡಿ ನೀತಿ ವಿರುದ್ಧ ಹೋರಾಡುತ್ತೇವೆ’ ಎಂದು ಸ್ಟಾಲಿನ್‌ ಶನಿವಾರ ಹೇಳಿದ್ದರು.

Related posts

‘ಪೌರತ್ವ’ ತಿದ್ದುಪಡಿ ಕಾಯಿದೆ ‘ಗಾಂಧಿ’ಯ ಕನಸಾಗಿತ್ತು: ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿಕೆ

Times fo Deenabandhu

ಭೋಪಾಲ್‌ ನೆನಪಿಸಿದ ವಿಶಾಖಪಟ್ಟಣದ ವಿಷಾನಿಲ..!

Times fo Deenabandhu

”ಕೊರೊನಾ ವೈರಸ್ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳು ಭಯ ಹುಟ್ಟಿಸುತ್ತಿದೆ-ಹೆದರಬೇಡಿ – ವೈದ್ಯಕೀಯ ವಿದ್ಯಾರ್ಥಿ ವಿಡಿಯೋ ವೈರಲ್ ಆಗುತ್ತಿದೆ

Times fo Deenabandhu