Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

1.8 ಕೋಟಿ ಕೊರೊನಾ ಸೋಂಕಿತರು, 6.9 ಲಕ್ಷ ಸಾವು

ವಾಷಿಂಗ್ಟನ್: ಜಗತ್ತಿನಾದ್ಯಂತ 1,80,97,682 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 6,90,047 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 1,13,75,462 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೊಮೀಟರ್‌ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 47,79,096 ಸೋಂಕಿತರಿದ್ದು, ಈ ವರೆಗೆ 1,58,043 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 27,08,876 ಪ್ರಕರಣಗಳು ಬೆಳಕಿಗೆ ಬಂದಿವೆ. 18,84,051 ಸೋಂಕಿತರು ಗುಣಮುಖರಾಗಿದ್ದು, 93,616 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 17,80,268, ರಷ್ಯಾದಲ್ಲಿ 8,50,870, ದಕ್ಷಿಣ ಆಫ್ರಿಕಾದಲ್ಲಿ 5,03,290, ಪೆರುವಿನಲ್ಲಿ 4,22,183, ಚಿಲಿಯಲ್ಲಿ 3,57,658, ಇಂಗ್ಲೆಂಡ್‌ನಲ್ಲಿ 3,04,695, ಸ್ಪೇನ್‌ನಲ್ಲಿ 3,35,602 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಮೆಕ್ಸಿಕೊದಲ್ಲಿ 47,472, ಇಂಗ್ಲೆಂಡ್‌ನಲ್ಲಿ 46,119, ಇಟಲಿಯಲ್ಲಿ 35,154, ಪ್ರಾನ್ಸ್‌ನಲ್ಲಿ 30,265, ಸ್ಪೇನ್‌ನಲ್ಲಿ 28,445, ಪೆರುವಿನಲ್ಲಿ 19,408, ರಷ್ಯಾದಲ್ಲಿ 14,128, ಚಿಲಿಯಲ್ಲಿ 9,533, ದಕ್ಷಿಣ ಆಫ್ರಿಕಾದಲ್ಲಿ 8,153 ಮತ್ತು ಪಾಕಿಸ್ತಾನದಲ್ಲಿ 5,976 ಜನರು ಸಾವಿಗೀಡಾಗಿದ್ದಾರೆ.

Related posts

 ಕೋವಿಡ್ ನಿರ್ವಹಣೆಯಲ್ಲಿ ಅಕ್ರಮ ಚರ್ಚೆ: ‘ಕೈ’ ಆರೋಪಕ್ಕೆ ಲೆಕ್ಕ ಕೊಟ್ಟ ಸರ್ಕಾರ

ನಂಜನಗೂಡಿನಲ್ಲಿ ನಂಜು ಹರಡಿದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ: ಸೋಮಣ್ಣ

Times fo Deenabandhu

ಪರಿಸರವಾದಿ, ತೇರಿ ಸಂಸ್ಥೆಯ ಮಾಜಿ ಮುಖ್ಯಸ್ಥ ಆರ್.ಕೆ.ಪಚೌರಿ ನಿಧನ

Times fo Deenabandhu