Times of Deenabandhu
  • Home
  • ಪ್ರಧಾನ ಸುದ್ದಿ
  • ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಗ್ರಾಂಡ್‌ ಫಿನಾಲೆ: ನರೇಂದ್ರ ಮೋದಿ ಮಾತುಗಳಿವು!
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಗ್ರಾಂಡ್‌ ಫಿನಾಲೆ: ನರೇಂದ್ರ ಮೋದಿ ಮಾತುಗಳಿವು!

ಹೊಸದಿಲ್ಲಿ: ಆಲ್‌ ಇಂಡಿಯಾ ಕೌನ್ಸಿಲ್‌ ಆಫ್ ಟಿಕ್ನಿಕಲ್‌ ಎದುಕೇಶನ್‌ (ಎಐಸಿಟಿಇ) ಆಯೋಜಿಸಿದ್ದ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌’ನ ಗ್ರ್ಯಾಂಡ್‌ ಫಿನಾಲೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ ಸಂಜೆ 4:30ಕ್ಕೆ ಭಾಷಣ ಆರಂಭಿಸಿದ್ದಾರೆ. ಮಾತಿಗೂ ಮೊದಲು ವಣಕ್ಕಂ ಎಂದು ತಮಿಳಿನಲ್ಲಿ ವಂದನೆಗಳನ್ನು ಸಲ್ಲಿಸಿ ಮಾತು ಆರಂಭಿಸಿದರು.
ಈಗಾಗಲೇ ದೇಶದಲ್ಲಿ ಅನ್‌ಲಾಕ್‌ 3.0 ಜಾರಿಯಾಗಿದ್ದ, ಇದರ ನಂತರ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನಲ್ಲಿ ದೇಶಾದ್ಯಂತ 4.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಹಾಗೂ ಜಾಗತಿಕ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ದೊರೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೊಳಿಸಿ ಕಾರ್ಯಪ್ರವೃತ್ತವಾಗಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು. ಜತೆಗೆ ಗ್ರ್ಯಾಂಡ್‌ ಫಿನಾಲೆಯಲ್ಲಿ ಭಾಗವಹಿಸಿರುವ ಯುವ ವಿಜ್ಞಾನಿಗಳ ಐಡಿಯಾಗಳನ್ನು ಆಲಿಸಿದರು. ದೇಶಾದ್ಯಂತ ಭಾಗವಹಿಸಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಪೈಕಿ ಆಯ್ದ ವಿಭಿನ್ನ ಪ್ರಾಜೆಕ್ಟ್‌ಗಳ ಕುರಿತು ವಿದ್ಯಾರ್ಥಿಗಳ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡರು.
ಕೊರೊನಾ ಚಿಕಿತ್ಸೆಗೆ ರೋಬಾಟ್‌
ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಚಿಕಿತ್ಸೆಗಾಗಿ ವೈದ್ಯರ ಬದಲು ರೋಬಾಟ್‌ಗಳನ್ನು ನಿಯೋಜಿಸುವ ಉಪಾಯವನ್ನು ವಿದ್ಯಾರ್ಥಿನಿಯೊಬ್ಬರು ಪ್ರಸ್ತಾಪಿಸಿದರು. ಯಂತ್ರಗಳ ಮೂಲಕವೇ ಐಸಿಯು ನಿರ್ವಹಿಸಬಹುದಾದ ಸಾಧ್ಯತೆಯನ್ನು ತಿಳಿಸಿದರು. ಜತೆಗೆ ಕಡಿಮೆ ಖರ್ಚಿನ ಸ್ಯಾನಿಟರಿ ಪ್ಯಾಡ್‌ನ ಐಡಿಯಾವನ್ನೂ ನೀಡಿದರು.
ಇದಲ್ಲದೆ ದೇಶದಲ್ಲಿ ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ ಬಗ್ಗೆ ವಿದ್ಯಾರ್ಥಿಗಳು ಹಲವು ಸಾಧ್ಯತೆಗಳ ಬಗ್ಗೆ ಹಂಚಿಕೊಂಡರು. ಈ ಕುರಿತು ಚರ್ಚೆ ನಡೆಸಲು ಐಪಿಎಸ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ಸಭೆ ನಡೆಸಲು ಮೋದಿ ಅವರು ಯೋಜಿಸಿದರು. ವಿದ್ಯಾರ್ಥಿಗಳ ಸಂಶೋಧನಾ ಶಕ್ತಿಯನ್ನು ಶ್ಲಾಘಿಸಿದ ನರೇಂದ್ರ ಮೋದಿ, ಸಂಶೋಧನೆಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಇದಲ್ಲದೆ ವಿದ್ಯಾರ್ಥಿಗಳ ಸಂಶೋಧನೆಗೆ ಸಹಾಯ ನೀಡುವುದಾಗಿ ಭರವಸೆ ನೀಡಿದರು.
34 ವರ್ಷಗಳ ನಂತರ ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಸ್ವಾತಂತ್ರ್ಯದ ನಂತರ ಜಾರಿಗೆ ಬರುತ್ತಿರುವ ಮೂರನೇ ಪರಿಷ್ಕೃತ ಶಿಕ್ಷಣ ನೀತಿ ಇದಾಗಿದೆ. ಶಿಕ್ಷಣಕ್ಕಾಗಿ ಪ್ರಸ್ತುತ ಮೀಸಲಿಡುತ್ತಿರುವ ಅನುದಾನದ ನಾಲ್ಕು ಪಟ್ಟು ಅನುದಾನ ಮೀಸಲಿಡಲು ಹೊಸ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಒಟ್ಟಾರೆ ಹೊಸ ಶಿಕ್ಷಣ ನೀತಿಯು, ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ.

Related posts

ಒಂದೇ ವರ್ಷದಲ್ಲಿ 1 ಕೋಟಿ ರೂ. ‘ದುಡಿದ’ ಉತ್ತರ ಪ್ರದೇಶದ ಸರಕಾರಿ ಶಾಲಾ ಶಿಕ್ಷಕಿ!

 ರಾಜ್ಯದಲ್ಲೀಗ ಭರ್ತಿ 7000 ಸೋಂಕಿತರು

 ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಶೀಘ್ರ