Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಯಡಿಯೂರಪ್ಪ ಹಳೆ ಕೇಸ್‌ ಬಗ್ಗೆ ಮಾತಾಡ್ಲಾ? ಸಿದ್ದರಾಮಯ್ಯ ಮರುಪ್ರಶ್ನೆ!

ಮೈಸೂರು: ಹೂಬ್ಲೋಟ್‌ ವಾಚ್‌ ವಿವಾದ ಕುರಿತು ಬಿಜೆಪಿ ನಾಯಕರು ಪ್ರಶ್ನಿಸಿರುವುದಕ್ಕೆ ಕಿಡಿಕಾರಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ”ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹಳೆಯ ಪ್ರಕರಣಗಳ ಬಗ್ಗೆ ಮಾತನಾಡಬೇಕಾ?” ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ವಾಚ್‌ ಘಟನೆ ಕುರಿತು ತನಿಖೆ ಆಗಿ ಕ್ಲೀನ್‌ಚಿಟ್‌ ನೀಡಲಾಗಿದೆ. ಅದು ಮುಗಿದ ಕಥೆ. ಸರಕಾರದ ಹಣದಿಂದ ವಾಚ್‌ ಖರೀದಿಸಿಲ್ಲ. ಅದನ್ನು ಯಾರೋ ಕೊಟ್ಟಿದ್ದರು. ಅದಕ್ಕೆ ಅಫಿಡವಿಟ್‌ ಕೂಡ ನೀಡಲಾಗಿದೆ. ಈಗ ಮತ್ತೆ ಏಕೆ ಈ ವಿಷಯ ತೆಗೆದಿದ್ದಾರೆ. ಹಾಗಾದರೆ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಳೆಯ ಹಗರಣಗಳ ಬಗ್ಗೆ ಮಾತನಾಡಬೇಕಾ,” ಎಂದು ಪ್ರಶ್ನಿಸಿದರು.
‘ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್‌ ಅವರನ್ನು ಜೊತೆಯಲ್ಲಿಕೂರಿಸಿಕೊಂಡು ಮಾತನಾಡುತ್ತಾರೆ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಡಿಕೆಶಿ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿಲ್ಲ.
ರಾಜಕೀಯ ದುರುದ್ದೇಶದಿಂದ ಅವರ ವಿರುದ್ಧ ಕೇಸ್‌ ಹಾಕಲಾಗಿದೆ. ಈ ಕುರಿತು ನಾನು ಮಾತನಾಡುವುದಿಲ್ಲ. ಅದೇ ರೀತಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವುದಕ್ಕೆ ನೋಟಿಸ್‌ ನೀಡಿದರೆ ನಾನು ಹೆದರಿಕೊಳ್ಳುವುದಿಲ್ಲ. ನಾನು ಆರೋಪ ಮಾಡಿರುವುದು ಸರಕಾರದ ಮೇಲೆ. ಅದಕ್ಕೆ ಬೇರೆ ಯಾರೋ ನೋಟಿಸ್‌ ಕೊಟ್ಟರೆ ಏನು ಪ್ರಯೋಜನ?,” ಎಂದು ಕೇಳಿದರು.

Related posts

 ಈವರೆಗಿನ ಗರಿಷ್ಠ ಪ್ರಕರಣ ದಾಖಲು

Times fo Deenabandhu

ನಿಜಗುಣಾನಂದ ಸ್ವಾಮೀಜಿ, ಎಚ್.ಡಿ.ಕುಮಾರಸ್ವಾಮಿ ಸೇರಿ 15 ಜನರಿಗೆ ಕೊಲೆ ಬೆದರಿಕೆ

Times fo Deenabandhu

ಕೊರೊನಾ ಆತಂಕ : ಒಂದು ವಾರ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಘೋಷಣೆ

Times fo Deenabandhu