Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಒಂದೇ ದಿನ 3,860 ಮಂದಿ ಗುಣಮುಖ

ಬೆಂಗಳೂರು: ಕೋವಿಡ್‌ ಸೋಂಕಿತರಲ್ಲಿ ಶನಿವಾರ ಒಂದೇ ದಿನ 3,860 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 50 ಸಾವಿರ ಗಡಿದಾಟಿದೆ (53,648).

ರಾಜ್ಯದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 5,172 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 98 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಒಂದೇ ದಿನ 1852 ಮಂದಿಗೆ ಕೋವಿಡ್ ತಗುಲಿದ್ದು, 27 ಮಂದಿ ಸಾವಿಗೀಡಾಗಿದ್ದಾರೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 1.29 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ ಮೃತರ ಸಂಖ್ಯೆ 2,412ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 73,219ಕ್ಕೆ ತಲುಪಿದೆ.

ಮೈಸೂರು 365, ಬಳ್ಳಾರಿ 269, ಕಲಬುರ್ಗಿ 219, ಬೆಳಗಾವಿ 219, ಧಾರವಾಡ 184, ಹಾಸನ 146, ದಕ್ಷಿಣ ಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆಯಲ್ಲಿ 108 ಪ್ರಕರಣಗಳು ಪತ್ತೆಯಾಗಿವೆ.

Related posts

ಪಾದರಾಯನಪುರ ದಾಂದಲೆ: ನನ್ನ ಹೆಸರು ಕೆಡಿಸುವ ಯತ್ನ, ಕಠಿಣ ಕ್ರಮ ಕೈಗೊಳ್ಳಿ: ಜಮೀರ್

Times fo Deenabandhu

ಬಿಗ್ ಬಾಸ್ ವೇದಿಕೆ ಮೇಲೆ ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸಲ್ಮಾನ್ ಖಾನ್

Times fo Deenabandhu

 ಕೊರೊನಾ ಅಬ್ಬರಕ್ಕೆ ಅಲ್ಪವಿರಾಮ, 67 ಹೊಸ ಕೇಸ್‌, 1 ಸಾವು; ಮಂಡ್ಯ 21, ಬೀದರ್‌ 10

Times fo Deenabandhu