Times of Deenabandhu
  • Home
  • ಪ್ರಧಾನ ಸುದ್ದಿ
  • ‘ಭಾರತದ ವಿರುದ್ಧ ನೇಪಾಳ ಪ್ರಧಾನಿಯ ಅಪ್ರಬುದ್ಧ ರಾಜತಾಂತ್ರಿಕ ನಡೆ’: ಸ್ವಪಕ್ಷದ ಪ್ರಭಾವಿ ನಾಯಕನಿಂದಲೇ ಟೀಕೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

‘ಭಾರತದ ವಿರುದ್ಧ ನೇಪಾಳ ಪ್ರಧಾನಿಯ ಅಪ್ರಬುದ್ಧ ರಾಜತಾಂತ್ರಿಕ ನಡೆ’: ಸ್ವಪಕ್ಷದ ಪ್ರಭಾವಿ ನಾಯಕನಿಂದಲೇ ಟೀಕೆ

ಕಠ್ಮಂಡು: ”ದೇಶದ ನಕ್ಷೆ ಬದಲಾವಣೆಗೊಳಿಸಿ ಹೊಸ ಪ್ರಾಂತ್ಯಗಳ ಸಮರ್ಥನೆ, ಅಯೋಧ್ಯೆ ನೇಪಾಳದಲ್ಲಿದೆ ಎಂದು ವಾದ, ಶ್ರೀರಾಮ ದಕ್ಷಿಣ ನೇಪಾಳದಲ್ಲಿ ಜನಿಸಿದ್ದು ಎಂಬ ಮೂರು ತಪ್ಪು ಹೇಳಿಕೆಗಳನ್ನು ನೀಡಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ರಾಜತಾಂತ್ರಿಕವಲ್ಲದ ನಡೆ ಅನುಸರಿಸಿದ್ದಾರೆ ಎಂದು ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ (ಸಿಪಿಎನ್‌) ಪ್ರಭಾವಿ ನಾಯಕ ನಾರಾಯಣಕಾಜಿ ಶ್ರೇಷ್ಠ ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿರುವ ಶ್ರೇಷ್ಠ, ಕೆ.ಪಿ.ಶರ್ಮಾ ಓಲಿ ಅವರ ಇಂತಹ ಹೇಳಿಕೆಗಳು ನೆರೆ ರಾಷ್ಟ್ರ ಭಾರತಕ್ಕೆ ಮುಜುಗರ ಉಂಟುಮಾಡುವಂತಹ ಅನಗತ್ಯ ಹೇಳಿಕೆಗಳಾಗಿವೆ ಎಂದು ಹೇಳಿದ್ದಾರೆ.
”ಗಡಿ ಬಿಕ್ಕಟ್ಟುಗಳ ಶಮನಕ್ಕೆ ಆದ್ಯತೆ ನೀಡಬೇಕಿದ್ದ ಸಮಯದಲ್ಲಿ ಪ್ರಧಾನಿ ಓಲಿ ಅನಗತ್ಯವಾಗಿ ನೆರೆಯ ಭಾರತಕ್ಕೆ ಕಿರಿಕಿರಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದರು. ಇದೊಂದು ದೊಡ್ಡ ಪ್ರಮಾದವಾಗಿದೆ. ಇದರಿಂದ ನೇಪಾಳ ಪರಿಣಾಮ ಅನುಭವಿಸಬೇಕಾಗುತ್ತದೆ,” ಕಿಡಿಕಾರಿದ್ದಾರೆ.
ಈ ಮೂಲಕ ಪ್ರಧಾನಿ ಶರ್ಮಾ ಅವರ ಭಾರತ ವಿರೋಧಿ ನಡೆಗೆ ಪಕ್ಷದ ಮತ್ತೊಬ್ಬ ಧ್ವನಿಗೂಡಿಸಿದಂತಾಗಿದೆ. ಚೀನಾ ಆಮಿಷಕ್ಕೆ ಬಲಿಯಾಗಿ ಭಾರತದ ವೈರತ್ವ ಕಟ್ಟಿಕೊಳ್ಳಲು ಮುಂದಾಗಿರುವ ಓಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಪಕ್ಷದ ಸಹ ಅಧ್ಯಕ್ಷ ಪುಪ್ಪ ಕಮಲ್‌ ದಹಾಲ್‌ ಪ್ರಚಂಡ ಅವರು ಈಗಾಗಲೇ ಆಗ್ರಹಿಸಿದ್ದಾರೆ. ಪಕ್ಷದ ಸ್ಥಾಯಿ ಸಮಿತಿ ಸಭೆಗೆ ಹಾಜರಾಗದೇ ಓಲಿ ಅವರು ಸ್ವಪಕ್ಷೀಯರ ಪದಚ್ಯುತಿ ಪ್ರಯತ್ನಕ್ಕೆ ತಿರುಗೇಟು ನೀಡಿದ್ದಾರೆ.

Related posts

9 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

 ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!

Times fo Deenabandhu

ಸರಕಾರ ಮತ್ತು ತೆರಿಗೆದಾರರ ಮಧ್ಯೆ ‘ಸ್ವೀಟ್‌ ಡೀಲ್‌’

Times fo Deenabandhu