Times of Deenabandhu
ಮುಖ್ಯಾಂಶಗಳು

 ಬಡ್ಡಿ ಪಾವತಿಸಲು ಆಗದೆ ಸಾಲಕೊಟ್ಟವನ ಮನೆಗೇ ಕನ್ನ ಹಾಕಿದ ಭೂಪ!

ಹೊಸದಿಲ್ಲಿ: ತಾನು ಅಡವಿಟ್ಟ ಮನೆಯ ದಾಖಲೆ ಪತ್ರಗಳನ್ನು ಪಡೆಯಲು ಸಾಲ ಕೊಟ್ಟ ವ್ಯಕ್ತಿಯ ಮನೆಯನ್ನೇ ದರೋಡೆ ಮಾಡಿಸಿದ ಆರೋಪಿ ಹಾಗೂ ಆತನ ಸಹಚರರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹಿರಿಯ ವಕೀಲರೊಬ್ಬರ ಬಳಿ ಮುನ್ಶಿ (ಬರಹಗಾರ) ಕೆಲಸ ಮಾಡುತ್ತಿದ್ದ ಮನ್‌ಪ್ರಿತ್‌, ಮನೆ ಕಟ್ಟಲು ಉದ್ಯಮಿಯೊಬ್ಬರಿಂದ 25 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಅದಕ್ಕಾಗಿ ಆಸ್ತಿಪತ್ರಗಳನ್ನು ಅವರಿಗೆ ಆಧಾರವಾಗಿ ಕೊಟ್ಟಿದ್ದ.

ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ 75 ಸಾವಿರ ರೂ. ಬಡ್ಡಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಕಾಸ್‌ಪುರಿಯಲ್ಲಿರುವ ಉದ್ಯಮಿಯ ಮನೆಗೆ ನುಗ್ಗಿ ದರೋಡೆ ಮಾಡಿ ದಾಖಲೆ ಪತ್ರಗಳನ್ನು ಕದಿಯಲು ಯೋಜನೆ ರೂಪಿಸಿದ್ದ.
ಅದಕ್ಕಾಗಿ ಪ್ರವೀಣ್‌ನನ್ನು ಸಂಪರ್ಕಿಸಿ 10 ಲಕ್ಷ ರೂ. ಸುಪಾರಿ ಕೊಡುವುದಾಗಿ ಹೇಳಿ 35 ಸಾವಿರ ರೂ. ಮುಂಗಡ ಕೊಟ್ಟಿದ್ದ. ಅದರಂತೆ ಕಳೆದ ಶನಿವಾರ ಆರೋಪಿಗಳು ವಕೀಲರ ಮನೆಗೆ ನುಗ್ಗಿ ಗನ್‌ ತೋರಿಸಿ ಬೆದರಿಸಿ ದಾಖಲೆ ಪತ್ರ ಹಾಗೂ ಇನ್ನಿತರ ವಸ್ತುಗಳನ್ನು ಆರೋಪಿಗಳು ದೋಚಿದ್ದರು.

ವಾಪಸ್‌ ಹೋಗುವ ವೇಳೆ ವ್ಯಕ್ತಿಯೊಬ್ಬರ ಬೈಕ್‌ ಕೂಡ ದರೋಡೆ ಮಾಡಿದ್ದರು. ಫೋನ್‌ ಕರೆಗಳು ಹಾಗೂ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Related posts

ಸಾಧ್ಯವಾದರೆ ನಾಳೆಯೇ ದೆಹಲಿಗೆ; ಈ ತಿಂಗಳಲ್ಲೇ ಸಂಪುಟ ವಿಸ್ತರಣೆ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Times fo Deenabandhu

ಕ್ವಾರಂಟೈನ್‌ನಲ್ಲಿರುವವರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ

 ರಾಜ್ಯದಲ್ಲಿ ಸತತ 4ನೇ ದಿನವೂ ‘ಕೊರೊನಾ’ ಸೆಂಚುರಿ..! ಮತ್ತೆ 130 ಪಾಸಿಟಿವ್‌ ಕೇಸ್ ಪತ್ತೆ