Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

 4 ಸರ್ಕಾರಿ ಶಾಲೆ ದತ್ತುಪಡೆದ ಕಿಚ್ಚ ಸುದೀಪ್‌

ನಟ ಕಿಚ್ಚ ಸುದೀಪ್‌ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ನಿಂದ ನಾಲ್ಕು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ಸ್ವೀಕರಿಸಿದ್ದಾರೆ.
ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ವೇತನ ಹೊರತುಪಡಿಸಿ, ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ಈ ಟ್ರಸ್ಟ್ ನಿರ್ವಹಿಸಲಿದೆ. ಮೊದಲ ಹಂತವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಹಿರಿಯೂರು ಮತ್ತು ಚಳ್ಳಕೆರೆ ಬಿಇಒಗಳ ಸಮ್ಮುಖದಲ್ಲಿ ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್ ದತ್ತು ತೆಗೆದುಕೊಂಡಿದೆ.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂದ ಸುದೀಪ್‌ ಒತ್ತಾಸೆಯಂತೆ, ಈ ನಾಲ್ಕು ಶಾಲೆಗಳನ್ನು ಡಿಜಿಟಲೈಜ್‌ ಮಾಡಲಾಗುತ್ತಿದೆ. ಇದರ ಭಾಗವಾಗಿ ನಾಲ್ಕೂ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ಮಾರ್ಚ್‌ ತಿಂಗಳಿನಲ್ಲೇ ಶಾಲೆ ದತ್ತುಪಡೆಯುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು ಎನ್ನುತ್ತಾರೆ ಸುದೀಪ್‌ ಸಮೀಪ ವರ್ತಿಗಳು.

Related posts

ನಾಳೆ ದೇಶದಾದ್ಯಂತ ಬಿಎಸ್‌ಎನ್‌ಎಲ್ ನೌಕರರ ಉಪವಾಸ ಸತ್ಯಾಗ್ರಹ

Times fo Deenabandhu

ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​: ಫಿಟ್​ನೆಸ್​ ವಿಥ್​ ಸೇವಿಂಗ್​

Times fo Deenabandhu

ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ – ಮಾದರಿ ಜಿಲ್ಲೆಯಾಗಿ ಶಿವಮೊಗ್ಗ ಅಭಿವೃದ್ಧಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Times fo Deenabandhu