Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಜಿಲ್ಲಾಧಿಕಾರಿಗಳಿಗೇ ಲಾಕ್‌ಡೌನ್‌ ಅಧಿಕಾರ ಕೊಟ್ಟ ಸಿಎಂ

ಕೋವಿಡ್‌ ನಿಯಂತ್ರಣ, ರಾಜ್ಯದ ಮಳೆ-ಬೆಳೆ ಪರಿಸ್ಥಿತಿ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳ ಜತೆಗೆ ಸಿಎಂ ಯಡಿಯೂರಪ್ಪ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದ್ದು, ‘ಲಾಕ್‌ಡೌನ್‌’ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಹೈರಿಸ್ಕ್‌ ಜಿಲ್ಲೆಯ ಡಿಸಿ, ಎಸ್ಪಿ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲೇ ಸಿಎಂ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧಿಕಾರಿಗಳು ಸಮಾಲೋಚನೆ ನಡೆಸಿ ಕೆಲವು ಜಿಲ್ಲೆಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲು ತೀರ್ಮಾನ ಪ್ರಕಟಿಸಿದ್ದಾರೆ.

ಧಾರವಾಡದಲ್ಲಿ ಜುಲೈ 15 ರಿಂದ 24, ದಕ್ಷಿಣ ಕನ್ನಡದಲ್ಲಿ ಜುಲೈ 16 ರಿಂದ ಒಂದು ವಾರ ಕಾಲ ಲಾಕ್‌ಡೌನ್‌ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

Related posts

ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನ… ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮನಕಲಕುವ ಈ ಹಾಡು ಕೇಳಿ….

Times fo Deenabandhu

ರಾಜ್ಯದ ಜನ ನಿರೀಕ್ಷಿಸಿದಂತೆ ಮೈತ್ರಿ ಸರಕಾರ ನಡೆದುಕೊಂಡಿಲ್ಲ- ಎಸ್‌.ಎಂ. ಕೃಷ್ಣ ಟೀಕೆ

Times fo Deenabandhu

ರಜಿನಿಯ ಮ್ಯಾನ್​ ವರ್ಸಸ್​ ವೈಲ್ಡ್ ಕಾರ್ಯಕ್ರಮದ ಮೋಷನ್​ ಪೋಸ್ಟರ್​ ವಿಡಿಯೋ ರಿಲೀಸ್! ​​

Times fo Deenabandhu