Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ವಿಶ್ವದ ವಿವಿಧೆಡೆ 1.31 ಕೋಟಿ ಜನರಿಗೆ ಕೊರೊನಾ ಸೋಂಕು

ವಿಶ್ವದ ವಿವಿಧ ದೇಶಗಳಲ್ಲಿ ಸೋಮವಾರ ರಾತ್ರಿ ವೇಳೆಗೆ ಒಟ್ಟು 1.31 ಕೋಟಿ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ 5.73 ಲಕ್ಷ ಮಂದಿ ಮೃತಪಟ್ಟಿದ್ದಾರೆ. ವಿಶ್ವದ ಒಟ್ಟು 210 ದೇಶಗಳಲ್ಲಿ ಕೊರೊನಾ ಸೋಂಕು ವರದಿಯಾಗಿದೆ.

ಅಮೆರಿಕದಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು, 34.38 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಒಟ್ಟು 1.37 ಲಕ್ಷ ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದೆ. ಬ್ರಿಜಿಲ್‌ನ ಒಟ್ಟು 18.66 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ 72 ಸಾವಿದ ದಾಟಿದೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 8.98 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 23 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 7.33 ಲಕ್ಷ ಸೋಂಕಿತರಿದ್ದರೆ, ಪೆರು ದೇಶದಲ್ಲಿ 3.26 ಲಕ್ಷ ಸೋಂಕಿತರಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಇಬ್ಬರು ಸದಸ್ಯರು ಚೀನಾದಲ್ಲಿದ್ದು, ವೈರಸ್‌ನ ಉಗಮದ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.

ಹಾಂಗ್‌ಕಾಂಗ್: ಕಟ್ಟುನಿಟ್ಟಿನ ‘ಅಂತರ’ ಜಾರಿ

ಹಾಂಗ್‌ಕಾಂಗ್ ಆಡಳಿತವು ಜನರು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಿದೆ. ಸಾರ್ವಜನಿಕರ ಸಭೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸಂಜೆ 6ರಿಂದ ಬೆಳಿಗ್ಗೆ 5ರವರೆಗೆ ರೆಸ್ಟೊರೆಂಟ್‌ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಫಿಟ್‌ನೆಸ್‌ ಮತ್ತು ಬ್ಯೂಟಿ ಸಲೋನ್‌ಗಳನ್ನು ಒಂದು ವಾರದ ಅವಧಿಗೆ ಬಾಗಿಲು ಹಾಕಲು ಸೂಚಿಸಲಾಗಿದೆ.

ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸಕ್ಕೆ (ವರ್ಕ್‌ ಫ್ರಂ ಹೋಂ) ಅವಕಾಶ ಮಾಡಿಕೊಡಬೇಕು ಎಂದು ಹಾಂಗ್‌ಕಾಂಗ್‌ ನಾಯಕಿ ಕ್ಯಾರಿ ಲಾಮ್ ಸೂಚಿಸಿದ್ದಾರೆ. ಸೋಮವಾರ ವರದಿಯಾದ 52 ಕೊರೊನಾ ವೈರಸ್ ಪ್ರಕರಣಗಳ ಪೈಕಿ 41 ಪ್ರಕರಣಗಳು ಸ್ಥಳೀಯವಾಗಿಯೇ ಹರಡಿದ್ದವು. ಈ ಹಿನ್ನೆಲೆಯಲ್ಲಿ ಬಿಗಿ ಕ್ರಮಕ್ಕೆ ಅಲ್ಲಿನ ಆಡಳಿತ ಮುಂದಾಗಿದೆ.

ಅಂಗಡಿಗಳಲ್ಲೂ ಫೇಸ್‌ಮಾಸ್ಕ್ ಧರಿಸಲು ಬ್ರಿಟನ್ ಪ್ರಧಾನಿ ಸೂಚನೆ

ಸಾರ್ವಜನಿಕ ಸ್ಥಳಗಳಲ್ಲಿ ಫೇಸ್‌ಮಾಸ್ಕ್ ಹಾಕಿಕೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೂಚಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಫೇಸ್‌ ಮಾಸ್ಕ್ ಬಳಸುವುದನ್ನು ಬ್ರಿಟನ್ ಈಗಾಗಲೇ ಕಡ್ಡಾಯಗೊಳಿಸಿದೆ.

ಪಾಕಿಸ್ತಾನದಲ್ಲಿ 2.5 ಲಕ್ಷ ದಾಟಿತು ಸೋಂಕಿತರ ಸಂಖ್ಯೆ

ಪಾಕಿಸ್ತಾನದಲ್ಲಿ ಸೋಮವಾರ 2,769 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 2.51 ಲಕ್ಷ ದಾಟಿದೆ. 69 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 5,226ಕ್ಕೆ ಏರಿಕೆಯಾಗಿದೆ. 1,837 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.
ದಾಖಲೆ ಬರೆದ ನ್ಯೂಯಾರ್ಕ್

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಕೊರೊನಾ ಕೇಂದ್ರಸ್ಥಾನ ಎನಿಸಿಕೊಂಡಿದ್ದ ನ್ಯೂಯಾರ್ಕ್‌ ನಗರದಲ್ಲಿ ಭಾನುವಾರ ಸೋಂಕಿನಿಂದ ಒಬ್ಬರೂ ಮೃತಪಟ್ಟಿಲ್ಲ ಎಂಬ ವಿಚಾರವನ್ನು ಅಮೆರಿಕದ ಮಾಧ್ಯಮಗಳು ಎದ್ದುಕಾಣಿಸುವಂತೆ ಪ್ರಕಟಿಸಿವೆ. ಕಳೆದ 4 ತಿಂಗಳುಗಳಿಂದ ನ್ಯೂಯಾರ್ಕ್ ನಗರದಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿತ್ತು. ಈವರೆಗೆ ನ್ಯೂಯಾರ್ಕ್‌ ನಗರದಲ್ಲಿ ಒಟ್ಟು 18,670 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಅಮೆರಿಕದ ಮತ್ತೊಂದು ಪ್ರಮುಖ ರಾಜ್ಯ ಫ್ಲಾರಿಡಾದಲ್ಲಿ ಸೋಂಕು ತೀವ್ರಗತಿಯಲ್ಲಿ ಏರುತ್ತಿದೆ. ಒಂದೇ ದಿನ ಈ ಪ್ರಾಂತ್ಯದಲ್ಲಿ 15,000 ಹೊಸ ಪ್ರಕರಣಗಳು ವರದಿಯಾಗಿವೆ.

ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಬೇಕು ಎಂದು ಟ್ರಂಪ್ ಆಡಳಿತ ಒತ್ತಡ ಹೇರುತ್ತಿದ್ದರೆ, ಮಿಚಿಗನ್ ಮತ್ತು ಮಿಸ್ಸೋರಿ ಪ್ರಾಂತ್ಯಗಳಲ್ಲಿ ‘ಮಾಸ್ಕ್ ಬೇಡ’ ಪ್ರತಿಭಟನೆಗಳು ಆರಂಭವಾಗಿವೆ.

Related posts

ರಾಜ್ಯದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ   ಕೊರೊನಾ… ಬೆಂಗಳೂರೊಂದರಲ್ಲಿಯೇ 1148 ಜನರಿಗೆ ಸೋಂಕು.. ದಕ್ಷಿಣ ಕನ್ನಡದಲ್ಲಿ  ಮತ್ತೊಮ್ಮೆ ಆರ್ಭಟ…. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……   

ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ…! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ…!

Times fo Deenabandhu

ರಾಜ್ಯಸಭೆ ಚುನಾವಣೆ : ಬಿಜೆಪಿ ತಲ್ಲಣ