Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಒಟ್ಟು 41,581 ಪ್ರಕರಣ, 757ಕ್ಕೆ ಏರಿದ ಸಾವು

ಬೆಂಗಳೂರು: ರಾಜ್ಯದಲ್ಲಿ ಜುಲೈ 12ರ ಸಂಜೆ 5ರಿಂದ ಜುಲೈ 13ರ ಸಂಜೆ 5ರ ವರೆಗೂ ಕೋವಿಡ್‌ ದೃಢಪಟ್ಟ 2738 ಹೊಸ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ ಸೋಂಕಿನಿಂದ 73 ಮಂದಿ ಸಾವಿಗೀಡಾಗಿದ್ದಾರೆ.

ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 41,581ಕ್ಕೆ ಮುಟ್ಟಿದೆ, 757 ಜನ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿನಿಂದ 16,248 ಮಂದಿ ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 1,315 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪ್ರಸ್ತುತ 24,572 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರು ಒಂದರಲ್ಲಿಯೇ 15,052 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131 ಹಾಗೂ ಬಳ್ಳಾರಿಯಲ್ಲಿ 106 ಹೊಸ ಪ್ರಕರಣಗಳು ವರದಿಯಾಗಿವೆ

Related posts

ವಚನಾನಂದ ಶ್ರೀ ಬೆದರಿಕೆ ವಿವಾದ, ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ನಿರಾಣಿ

Times fo Deenabandhu

 ಬಕ್ರೀದ್‌ ಹಬ್ಬ: ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

ತಾಜ್​ ಮಹಲ್​ ನೋಡಿದ ಟ್ರಂಪ್​ ದಂಪತಿಯ ಮೊದಲ ಪ್ರತಿಕ್ರಿಯೆ ಹೇಗಿತ್ತು?

Times fo Deenabandhu