Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೋವಿಡ್‌ ಚಿಕಿತ್ಸೆಗೆ ಬಯೊಕಾನ್‌ನಿಂದ Itolizumab ಚುಚ್ಚುಮದ್ದು: ಬೆಲೆ ₹8,000

ನವದೆಹಲಿ: ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಬಯೊಕಾನ್‌ ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ಜೈವಿಕ ಮೂಲದ ಔಷಧಿ ಬಿಡುಗಡೆ ಮಾಡುವುದಾಗಿ ಸೋಮವಾರ ಹೇಳಿದೆ. ಇಟೊಲೈಜುಮ್ಯಾಬ್‌ (Itolizumab) ಹೆಸರಿನ ಚುಚ್ಚುಮದ್ದು ಪ್ರತಿ ಸೀಸೆಗೆ (vial) ಸುಮಾರು ₹8,000 ಇರಲಿದೆ.

25ಎಂಜಿ/ 5ಎಂಎಲ್‌ ಇಟೊಲೈಜುಮ್ಯಾಬ್‌ ಚುಚ್ಚುಮದ್ದು ಮಾರಾಟ ಮಾಡಲು ಭಾರತದ ಪ್ರಧಾನ ಔಷಧಿ ನಿಯಂತ್ರಕ (ಡಿಸಿಜಿಐ) ಬಯೊಕಾನ್‌ ಅನುಮತಿ ಪಡೆದಿದೆ. ಕೋವಿಡ್‌–19ನಿಂದ ಉಂಟಾಗುವ ಉಸಿರಾಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಈ ಔಷಧಿ ಸಹಕಾರಿಯಾಗಲಿದೆ. ಅತಿಯಲ್ಲದ ಸ್ಥಿತಿಯಿಂದ ಗಂಭೀರ ಪ್ರಕರಣಗಳ ವರೆಗೂ ಇದನ್ನು ಬಳಸಬಹುದಾಗಿದೆ.

ಇಡೀ ಜಗತ್ತಿನಲ್ಲಿ ಕೋವಿಡ್‌–19 ಸಂಬಂಧಿತ ಚಿಕಿತ್ಸೆಗಳಿಗಾಗಿ ಅನುಮತಿ ಪಡೆದಿರುವ ಏಕೈಕ ಜೈವಿಕ ಮೂಲದ ಔಷಧಿ ಇಟೊಲೈಜುಮ್ಯಾಬ್‌ ಎಂದು ಬಯೊಕಾನ್‌ ಹೇಳಿಕೊಂಡಿದೆ.

‘ಕೋವಿಡ್‌ಗೆ ಲಸಿಕೆ ಬರುವವರೆಗೂ ನಮಗೆ ಜೀವ ರಕ್ಷಕವಾಗುವ ಔಷಧಗಳ ಅಗತ್ಯವಿದೆ. ಕೊರೊನಾ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಜಗತ್ತಿನಾದ್ಯಂತ ಇರುವ ಔಷಧಿಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಹುಡುಕಾಟ ಅಥವಾ ಹೊಸ ಔಷಧಿಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದೇವೆ’ ಎಂದು ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಹೇಳಿದ್ದಾರೆ.
ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಮಗೆ ಲಸಿಕೆ ಲಭ್ಯವಾದರೂ, ಮತ್ತೆ ಸೋಂಕು ಹರಡದಿರುವ ಕುರಿತು ಯಾವುದೇ ಖಾತರಿ ಇಲ್ಲ. ಹಾಗೇ ನಮ್ಮ ನಿರೀಕ್ಷೆಗೆ ತಕ್ಕಂತೆ ಅದು ಉಪಯುಕ್ತವಾಗುವ ಖಾತರಿಯೂ ಇಲ್ಲ, ಹಾಗಾಗಿ ನಾವು ಎಲ್ಲದಕ್ಕೂ ಸಿದ್ಧವಿರುವ ಸ್ಥಿತಿಯಲ್ಲಿರಬೇಕು ಎಂದಿದ್ದಾರೆ.

ಸೋಂಕಿನಿಂದ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಟೊಲೈಜುಮ್ಯಾಬ್‌ ಉಪಯುಕ್ತವಾಗಲಿದೆ. ‘ಔಷಧಿಯ ಒಂದು ಸೀಸೆಗೆ ₹7,950 ನಿಗದಿಯಾಗಿದ್ದು, ಒಬ್ಬ ರೋಗಿಗೆ ಗರಿಷ್ಠ 4 ಸೀಸೆಗಳ ಚುಚ್ಚುಮದ್ದು ಬಳಕೆಯಾಗಬಹುದಾಗಿದ್ದು, ಒಟ್ಟು ₹32,000 ವೆಚ್ಚವಾಗಲಿದೆ’ ಎಂದು ಕಿರಣ್ ಮಜುಂದಾರ್‌ ಶಾ ಹೇಳಿದ್ದಾರೆ.

ಬೆಂಗಳೂರಿನ ಬಯೊಕಾನ್‌ ಪಾರ್ಕ್‌ನಲ್ಲೇ ಇಟೊಲೈಜುಮ್ಯಾಬ್‌ ತಯಾರಿಸಲಾಗುತ್ತಿದೆ.

Related posts

ಪ್ರವೇಶ ಪತ್ರವನ್ನೇ ಬಿಟ್ಟು ಹೋಗಿ, ಕಂಗಾಲಾಗಿ ನಿಂತಿದ್ದ 10ನೇ ತರಗತಿ ವಿದ್ಯಾರ್ಥಿನಿ ನಿರಾತಂಕವಾಗಿ ಪರೀಕ್ಷೆ ಬರೆಯುವಂತೆ ಮಾಡಿದ್ದು ಟ್ರಾಫಿಕ್​ ಪೊಲೀಸ್ ಅಧಿಕಾರಿ…

Times fo Deenabandhu

ಆನ್‌ಲೈನ್‌ ಶಿಕ್ಷಣ: ನಿಲುವು ತಿಳಿಸಲು ಸರ್ಕಾರಕ್ಕೆ ನಿರ್ದೇಶನ

Times fo Deenabandhu

ಜುಲೈ 30, 31ರಂದು ಸಿಇಟಿ: ಕೋವಿಡ್ ಇದ್ದರೂ ಪರೀಕ್ಷೆಗೆ ಅವಕಾಶ