Times of Deenabandhu
  • Home
  • ಪ್ರಧಾನ ಸುದ್ದಿ
  • ರಾಜಸ್ಥಾನ ರಾಜಕೀಯ: ನಾಳೆ ಬೆಳಿಗ್ಗೆ ಕಾಂಗ್ರೆಸ್ ಮತ್ತೊಂದು ಸಭೆ, ಪೈಲಟ್‌ಗೂ ಆಹ್ವಾನ
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜಸ್ಥಾನ ರಾಜಕೀಯ: ನಾಳೆ ಬೆಳಿಗ್ಗೆ ಕಾಂಗ್ರೆಸ್ ಮತ್ತೊಂದು ಸಭೆ, ಪೈಲಟ್‌ಗೂ ಆಹ್ವಾನ

ಜೈಪುರ: ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ 109 ಬಹುಮತ ಹೊಂದಿದೆ, ನಮ್ಮ ಎಲ್ಲ ಶಾಸಕರು ಬೆಂಬಲಿಸಿ ಪತ್ರ ನೀಡಿದ್ದಾರೆ. ಅವರು, ಬಿಜೆಪಿ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಹೇಳಿದ್ದಾರೆ.
ಸರ್ಕಾರದ ಪತನವನ್ನು ತಪ್ಪಿಸಲು ಕಾಂಗ್ರೆಸ್‌ನ ಕನಿಷ್ಠ 100 ಶಾಸಕರನ್ನು ರೆಸಾರ್ಟ್‌ಗೆ ಕರೆತರಲಾಗಿತ್ತು. ಜೈಪುರದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದಲ್ಲಿ ಸಭೆಗೆ ಹಾಜರಾದ ಶಾಸಕರೊಂದಿಗೆ ಗೆಹ್ಲೋಟ್‌ ವಿಜಯದ ಚಿಹ್ನೆ ತೋರವ ಮೂಲಕ ಸರ್ಕಾರ ಸುಭದ್ರವಾಗಿದೆ ಎಂದು ಸೂಚಿಸಿದರು. ಪಕ್ಷ ಮಂಗಳವಾರ ಬೆಳಿಗ್ಗೆ 10ಕ್ಕೆ ಮತ್ತೊಂದು ಸಭೆ ಕರೆಯಲಾದಿದ್ದು, ಬಂಡಾಯ ಎದ್ದಿರುವ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ರನ್ನೂ ಆಹ್ವಾನಿಸಲಾಗಿದೆ.
‘ರಾಜಕೀಯ ಪರಿಸ್ಥಿತಿಯ ಸಂಬಂಧ ಚರ್ಚಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮತ್ತೊಂದು ಸಭೆ ನಾಳೆ ಬೆಳಿಗ್ಗೆ 10ಕ್ಕೆ ಕರೆಯಲಾಗಿದೆ. ಸಚಿನ್‌ ಪೈಲಟ್‌ ಹಾಗೂ ಎಲ್ಲ ಶಾಸಕರು ಹಾಜರಾಗುವಂತೆ ಕೇಳುತ್ತಿದ್ದೇವೆ. ಬರಹ ರೂಪದಲ್ಲಿಯೂ ಅವರಿಗೆ ತಿಳಿಸಲಾಗುತ್ತದೆ’ ಎಂದು ಸುರ್ಜೆವಾಲಾ ಹೇಳಿದ್ದಾರೆ.
ರಾಜಸ್ಥಾನವನ್ನು ಸಮರ್ಥಗೊಳಿಸಲು ಹಾಗೂ ಒಟ್ಟಾಗಿ 8 ಕೋಟಿ ಜನರ ಸೇವೆ ಮಾಡುವ ಕುರಿತು ಚರ್ಚಿಸಲು ಬರುವಂತೆ ಶಾಸಕರನ್ನು ಕೋರಲಾಗಿದೆ. ಇಲ್ಲಿ ಯಾರೊಂದಿಗಾದರೂ ಯಾವುದೇ ಭಿನ್ನತೆ ಇದ್ದರೆ, ಅವರು ಮುಚ್ಚಿಟ್ಟುಕೊಳ್ಳದೆ ನೇರವಾಗಿ ಹೇಳಬೇಕು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಎಲ್ಲರ ಮಾತುಗಳನ್ನೂ ಕೇಳಿ, ಪರಿಹಾರ ಕಂಡುಕೊಳ್ಳಲು ಸಿದ್ಧರಿದ್ದಾರೆ ಎಂದಿದ್ದಾರೆ.

Related posts

ಅಗತ್ಯ ವಸ್ತುಗಳ ಸರಬರಾಜಿಗಾಗಿ ದೇಶಾದ್ಯಂತ 24×7 ಕಾಲ್‌ ಸೆಂಟರ್‌

Times fo Deenabandhu

ಕೊರೊನಾ ತಡೆ: ರಾಜ್ಯಸರಕಾರಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

Times fo Deenabandhu

ಕೊರೊನಾ ಸೋಂಕು ಹರಡದಂತೆ ತಡೆದ ಸಿಂಗಾಪುರ, ಹಾಂಕಾಂಗ್‌, ಶಹಬ್ಬಾಸ್‌ ಎಂದ WHO; ಬೇರೆ ದೇಶಗಳಿಗೆ ಏಕೆ ಸಾಧ್ಯವಾಗಿಲ್ಲ?

Times fo Deenabandhu