Times of Deenabandhu
  • Home
  • Uncategorized
  • ರಾಜ್ಯದಲ್ಲಿ 38,843 ಪ್ರಕರಣ,15,409 ಮಂದಿ ಗುಣಮುಖ
Uncategorized

ರಾಜ್ಯದಲ್ಲಿ 38,843 ಪ್ರಕರಣ,15,409 ಮಂದಿ ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಜುಲೈ 11ರ ಸಂಜೆ 5ರಿಂದ ಜುಲೈ 12ರ ಸಂಜೆ 5ರ ವರೆಗೂ ಕೋವಿಡ್‌ ದೃಢಪಟ್ಟ 2,627 ಹೊಸ ಪ್ರಕರಣಗಳು ದಾಖಲಾಗಿವೆ. 693 ಮಂದಿ ಗುಣಮುಖರಾಗಿದ್ದು, ಒಂದೇ ದಿನ ಸೋಂಕಿನಿಂದ 71 ಮಂದಿ ಸಾವಿಗೀಡಾಗಿದ್ದಾರೆ.

ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 38,843 ತಲುಪಿದ್ದು, 684 ಜನ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿನಿಂದ 15,409 ಮಂದಿ ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 1,525 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪ್ರಸ್ತುತ 22,746 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರು ಒಂದರಲ್ಲಿಯೇ 14,067 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕನ್ನಡದಲ್ಲಿ 196, ಧಾರವಾಡದಲ್ಲಿ 129, ಯಾದಗಿರಿಯಲ್ಲಿ 120 ಹಾಗೂ ಕಲಬುರ್ಗಿಯಲ್ಲಿ 79 ಪ್ರಕರಣಗಳು ವರದಿಯಾಗಿವೆ.

Related posts

ನಿಖಿಲ್ ಕುಮಾರಸ್ವಾಮಿಗೆ ಕೂಡಿಬಂತಾ ಕಂಕಣಭಾಗ್ಯ?

Times fo Deenabandhu

 51 ವರ್ಷದ ಅಜ್ಜಿಯ ಹೊಟ್ಟೆಯಲ್ಲಿ ಬೆಳೆಯುತ್ತಿದೆ ತನ್ನದೇ ಮೊಮ್ಮಗು…!

Times fo Deenabandhu

ಜೇನು ಕೃಷಿಕರಿಂದ ಅರ್ಜಿ ಆಹ್ವಾನ

Times fo Deenabandhu