Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಜು.13ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶುರು: 71 ಸಾವಿರ ಶಿಕ್ಷಕರ ನೇಮಕ

ಬೆಂಗಳೂರು: ರಾಜ್ಯಾದ್ಯಂತ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಜು.13ರ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ. ಆದರೆ, ರಾಜ್ಯ ಸರಕಾರ ಮಂಗಳವಾರದಿಂದ ಒಂದು ವಾರ ಕಾಲ ‘ಲಾಕ್‌ಡೌನ್‌’ ಘೋಷಣೆ ಮಾಡಿರುವುದರಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೌಲ್ಯಮಾಪನಕ್ಕೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

ಒಟ್ಟು 228 ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದ್ದು, ವಿಷಯವಾರು ಒಟ್ಟು 71,154 ಮೌಲ್ಯಮಾಪಕರನ್ನು ನೇಮಿಸಲಾಗಿದೆ. ಕೇಂದ್ರದ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿಮೌಲ್ಯಮಾಪನ ಆರಂಭವಾಗುವ ಮುನ್ನ ಪ್ರತಿ ಕೇಂದ್ರವನ್ನು ಸೋಂಕು ನಿವಾರಕದಿಂದ ಸ್ಯಾನಿಟೈಸ್‌ ಮಾಡಲಾಗುವುದು. ಮೌಲ್ಯಮಾಪನ ಮುಗಿದ ನಂತರ ಎಲ್ಲಾಕೊಠಡಿಗಳು, ಪೀಠೋಪಕರಣಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಜೊತೆಗೆ ‘ಆರೋಗ್ಯ ತಪಾಸಣಾ ಕೌಂಟರ್‌’ಗಳನ್ನು ತೆರೆಯಲಾಗಿದೆ.
ಎಲ್ಲಾ ಮೌಲ್ಯಮಾಪಕರನ್ನು ಥರ್ಮಲ್‌ ಸ್ಕ್ಯಾ‌ನರ್‌ ಮೂಲಕ ಆರೋಗ್ಯ ತಪಾಸಣೆಗೊಳಪಡಿಸಿ, ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ಧಾರಣೆಯನ್ನು ಖಚಿತಪಡಿಸಿಕೊಂಡು ಕೇಂದ್ರಗಳ ಒಳಗೆ ಹೋಗಲು ಅನುಮತಿ ನೀಡಲಾಗುತ್ತದೆ.

ಕೋವಿಡ್‌ ಪಾಸಿಟಿವ್‌ ಇರುವ ಅಥವಾ ಕ್ವಾರಂಟೈನ್‌ಗೆ ಒಳಗಾಗಿರುವ ಅಥವಾ ವೈದ್ಯಕೀಯ ತಪಾಸಣೆಗೆ ಒಳಗಾಗಿ ವರದಿಯ ನಿರೀಕ್ಷೆಯಲ್ಲಿರುವ ಮೌಲ್ಯಮಾಪಕರನ್ನು ಯಾವುದೇ ಕಾರಣಕ್ಕೂ ಮೌಲ್ಯಮಾಪನಕ್ಕೆ ತೆಗೆದುಕೊಳ್ಳುವುದಿಲ್ಲಎಂದು ಕಟ್ಟುನಿಟ್ಟಾಗಿ ತಿಳಿಸಿರುವ ಮಂಡಳಿ, ಎಲ್ಲಾ ಮೌಲ್ಯಮಾಪಕರು ಕೇಂದ್ರಗಳಲ್ಲಿ ಗುಂಪುಗೂಡದೆ ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

Related posts

​ದೇಶದಲ್ಲಿ 74,800ರ ಗಡಿದಾಟಿದ ಸೋಂಕಿತರು..!

 ನವೆಂಬರ್‌ ವೇಳೆಗೆ ದೇಶದಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಕೋವಿಡ್‌: ಐಸಿಎಂಆರ್

‘5 ಬಾರಿ ಗೆದ್ದಿದ್ದೇನೆ.. ನಾನೂ ಸಚಿವ ಸ್ಥಾನದ ಆಕಾಂಕ್ಷಿ’ : ಮಡಿಕೇರಿ ಶಾಸಕ ಅಪ್ಪಚ್ಚು

Times fo Deenabandhu