Times of Deenabandhu
  • Home
  • ಪ್ರಧಾನ ಸುದ್ದಿ
  •  ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು: ಚೀನಾ ಕಂಪನಿ ಟೆಂಡರ್ ರದ್ದತಿಗೆ ಚಿಂತನೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು: ಚೀನಾ ಕಂಪನಿ ಟೆಂಡರ್ ರದ್ದತಿಗೆ ಚಿಂತನೆ

ನವದೆಹಲಿ: ಅತಿ ವೇಗದ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು ಯೋಜನೆಗೆ ಚೀನಾದ ಸಿಆರ್‌ಆರ್‌ಸಿ ಪಿಯೊನೀರ್ ಎಲೆಕ್ಟ್ರಿಕ್‌ ಕಂಪನಿಗೆ ನೀಡಿದ್ದ ಟೆಂಡರ್‌ ರದ್ದುಗೊಳಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.
ಚೆನ್ನೈನಲ್ಲಿನ ಭಾರತೀಯ ರೈಲ್ವೆ ಕೋಚ್‌ ಫ್ಯಾಕ್ಟರಿ ಹಾಗೂ ಚೀನಾದ ಈ ಕಂಪನಿ ಜಂಟಿಯಾಗಿ ಈ ರೈಲನ್ನು ಅಭಿವೃದ್ಧಿ ಪಡಿಸುವ ಯೋಜನೆ ಇತ್ತು. 2019ರ ಡಿಸೆಂಬರ್‌ನಲ್ಲಿ ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ 44 ರೈಲುಗಳಿಗೆ ಎಲೆಕ್ಟ್ರಿಕ್‌ ಟ್ರ್ಯಾಕ್ಷನ್‌ ಅಭಿವೃದ್ಧಿ ಪಡಿಸುವ ಹೊಣೆಯನ್ನು ಚೀನಾದ ಈ ಕಂಪನಿಗೆ ನೀಡಲಾಗಿತ್ತು.
ಶುಕ್ರವಾರ ಆರಂಭವಾದ ಹರಾಜು ಪ್ರಕ್ರಿಯೆಯಲ್ಲಿ ಚೀನಾದ ಕಂಪನಿ ಹೊರತು ಪಡಿಸಿ ದೇಶದ ಆರು ಕಂ‍ಪನಿಗಳು ಪಾಲ್ಗೊಂಡಿದ್ದವು.
ಗಾಲ್ವನ್‌ ಕಣಿವೆಯಲ್ಲಿ ಭಾರತ– ಚೀನಾ ಸೈನಿಕರ ನಡುವಿನ ಸಂಘರ್ಷದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಆದ್ದರಿಂದ ಭಾರತ– ಚೀನಾ ಜಂಟಿ ಸಹಭಾಗಿತ್ವದ ಕಂಪನಿ ಸಲ್ಲಿಸಿರುವ ಬಿಡ್ಅನ್ನು ರೈಲ್ವೆ ಇಲಾಖೆ ತಿರಸ್ಕರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Related posts

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಪಠ್ಯಕ್ರಮ

ಸಂಜೆ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ..! ದೇಶವಾಸಿಗಳಲ್ಲಿ ಗರಿಗೆದರಿದ ಕುತೂಹಲ

ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.

Times fo Deenabandhu