September 27, 2020
Times of Deenabandhu
  • Home
  • ಪ್ರಧಾನ ಸುದ್ದಿ
  •  ಶನಿವಾರದಿಂದ ರಾಜ್ಯದಲ್ಲಿ ರ‍್ಯಾಪಿಡ್ ಆಂಟಿಜೆನ್‌ ಕೋವಿಡ್‌ ಪರೀಕ್ಷೆ, ವಾರದಲ್ಲಿ 2 ಲಕ್ಷ ಜನರ ತಪಾಸಣೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಶನಿವಾರದಿಂದ ರಾಜ್ಯದಲ್ಲಿ ರ‍್ಯಾಪಿಡ್ ಆಂಟಿಜೆನ್‌ ಕೋವಿಡ್‌ ಪರೀಕ್ಷೆ, ವಾರದಲ್ಲಿ 2 ಲಕ್ಷ ಜನರ ತಪಾಸಣೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರದ ಅವಧಿಯಲ್ಲಿ 2 ಲಕ್ಷ ಆಂಟಿಜೆನ್‌ ಕೋವಿಡ್‌ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಶನಿವಾರದಿಂದಲೇ ರಾಜ್ಯಾದ್ಯಂತ ಆಂಟಿಜೆನ್‌‌ ಪರೀಕ್ಷೆಯನ್ನು ಅಗತ್ಯತೆ ಅನುಗುಣವಾಗಿ ನಡೆಸಲಾಗುವುದು. ಈಗಾಗಲೇ 1 ಲಕ್ಷ ಪರೀಕ್ಷಾ ಕಿಟ್‌ಗಳು ಲಭ್ಯವಿದ್ದು, ಬೆಂಗಳೂರಿನಲ್ಲಿ 50 ಸಾವಿರ , ಉಳಿದ ಜಿಲ್ಲೆಗಳಲ್ಲಿ 50 ಸಾವಿರ ಪರೀಕ್ಷೆ ನಡೆಸಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 20 ಸಾವಿರ ಪರೀಕ್ಷೆ ನಡೆಸಲಾಗುವುದು,” ಎಂದು ವಿವರಿಸಿದರು.
‘ರಾಜ್ಯದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ದಾಖಲಾದ ಮರಣ ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುವುದು. ಸಾವಿನ ನೈಜ ಕಾರಣ ಪತ್ತೆ ಹಚ್ಚಲಾಗುತ್ತದೆ. ಶೇ.95ರಷ್ಟು ಪ್ರಕರಣದಲ್ಲಿ ಕೋವಿಡ್‌ ಮಾರಣಾಂತಿಕವಲ್ಲ ಹೀಗಾಗಿ ಪ್ರತಿ ಸಾವಿನ ಕಾರಣ ಶೋಧಿಸಲಾಗುವುದು,” ಎಂದು ಹೇಳಿದರು.
”ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಗಮನಿಸಿದಾಗ 60 ವರ್ಷ ಮೇಲ್ಪಟ್ಟವರು ಹಾಗೂ ಅನ್ಯ ಕಾಯಿಲೆ ಹೊಂದಿದವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಶ್ರವಣಕುಮಾರನ ರೀತಿ ಹಿರಿಯ ನಾಗರಿಕರ ಕಾಳಜಿ ಮಾಡುವುದು ನಮ್ಮ ಕರ್ತವ್ಯವಾಗಿದೆ,” ಎಂದು ಹೇಳಿದರು.

2313 ಪಾಸಿಟಿವ್‌

ರಾಜ್ಯದಲ್ಲಿ ಶುಕ್ರವಾರ 2313 ಕೊರೊನಾ ಪಾಸಿಟಿವ್‌ ಪ್ರಕರಣ ವರದಿಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 1447 ಪ್ರಕರಣಗಳಿವೆ. ರಾಜ್ಯವ್ಯಾಪಿ 57 ಜನರು ಮೃತಪಟ್ಟಿದ್ದು, ಅವರಲ್ಲಿ 29 ಜನರು ಬೆಂಗಳೂರಿಗರಾಗಿದ್ದಾರೆ. ಸದ್ಯ 17782 ಆಕ್ಟಿವ್‌ ಪ್ರಕರಣಗಳು ಕರ್ನಾಟಕದಲ್ಲಿದ್ದು, 472 ಜನರು ಐಸಿಯುನಲ್ಲಿದ್ದಾರೆ. 12833 ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

Related posts

ನೂರಾರು ವಿದ್ಯಾರ್ಥಿಗಳ ಜೊತೆಯಲ್ಲಿ ಭೋಜನ ಮಾಡುತ್ತ ಗ್ರಹಣ ವೀಕ್ಷಿಸಿದ ಡಾ.ಶಿವಮೂರ್ತಿ ಮುರುಘಾ ಶರಣರು

Times fo Deenabandhu

ಜಗತ್ತಿನಾದ್ಯಂತ 2.09 ಕೋಟಿ ಕೊರೊನಾ ಸೋಂಕಿತರು

Times fo Deenabandhu

ಚೀನಾದಲ್ಲಿ ಕೊರೊನಾಗೆ ಈವರೆಗೆ 2,592 ಬಲಿ..! ದ. ಕೊರಿಯಾದಲ್ಲಿ ರೆಡ್‌ ಅಲರ್ಟ್‌ ಘೋಷಣೆ..!

Times fo Deenabandhu