Times of Deenabandhu
  • Home
  • ಪ್ರಧಾನ ಸುದ್ದಿ
  •  ಆಯುರ್ವೇದ ಸಂಶೋಧನೆಗೆ ಅಮೆರಿಕ ನೆರವು: ಕೊರೊನಾ ಔಷಧ ಆವಿಷ್ಕಾರಕ್ಕೆ ಸಾಥ್‌!
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಆಯುರ್ವೇದ ಸಂಶೋಧನೆಗೆ ಅಮೆರಿಕ ನೆರವು: ಕೊರೊನಾ ಔಷಧ ಆವಿಷ್ಕಾರಕ್ಕೆ ಸಾಥ್‌!

ಹೊಸದಿಲ್ಲಿ: ಕೊರೊನಾ ನಿಯಂತ್ರಣಕ್ಕೆ ಆಯುರ್ವೇದ ಔಷಧ ಕಂಡುಹಿಡಿಯಲು ಭಾರತದ ಜತೆ ಕೈ ಜೋಡಿಸಲು ಅಮೆರಿಕ ಮುಂದಾಗಿದೆ.

ಗುರುವಾರ ಈ ವಿಷಯ ಪ್ರಕಟಿಸಿರುವ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಅವರು, ಭಾರತ ಮತ್ತು ಅಮೆರಿಕದಲ್ಲಿರುವ ಆಯುರ್ವೇದ ತಜ್ಞರು, ಸಂಶೋಧಕರು ಜಂಟಿಯಾಗಿ ಕೊರೊನಾ ನಿಯಂತ್ರಣ ಔಷಧಗಳ ತಯಾರಿಕೆ ಮತ್ತು ಕ್ಲಿನಿಕಲ್‌ ಪ್ರಯೋಗಕ್ಕೆ ನಿರ್ಧರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಪ್ರಯೋಗಗಳು ಭಾರತದಲ್ಲಿಯೇ ನಡೆಯಲಿವೆ ಎಂದು ತಿಳಿಸಿದರು. ಕೊರೊನಾ ಕುರಿತಾಗಿ ತರಬೇತಿ, ಅದರ ಪ್ರಸರಣ ಬಗ್ಗೆ ಅಧ್ಯಯನ, ಶಿಕ್ಷಣವನ್ನು ಕಿರಿಯ ಸಂಶೋಧಕರಿಗೆ ನೀಡುವ ಯೋಜನೆಯೂ ಇದೆ. ಇದು ಉಭಯ ದೇಶಗಳ ನಡುವಿನ ಜ್ಞಾನ ಮತ್ತು ಸಂಶೋಧನಾ ಸಂಪನ್ಮೂಲಗಳ ಹಂಚಿಕೆ ಯೋಜನೆ ಆಗಿದೆ ಎಂದು ತರಣ್‌ಜಿತ್‌ ತಿಳಿಸಿದ್ದಾರೆ.
8 ರಾಜ್ಯಗಳಲ್ಲಿ 90% ಪ್ರಕರಣ: ದೇಶದಲ್ಲಿನ ಸಕ್ರಿಯ ಕೊರೊನಾ ಪ್ರಕರಣಗಳ ಪೈಕಿ ಶೇ.90ರಷ್ಟು ಪ್ರಕರಣಗಳು ಕೇವಲ 8 ರಾಜ್ಯಗಳಲ್ಲಿ ಕಂಡುಬಂದಿದೆ. ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್‌ , ಉತ್ತರಪ್ರದೇಶಗಳಲ್ಲಿ ದೇಶದಲ್ಲಿನ ಅತಿಹೆಚ್ಚು ಸೋಂಕಿತರಿದ್ದಾರೆ.

ಅದರಲ್ಲಿಯೂ ನಿರ್ದಿಷ್ಟವಾಗಿ ಶೇ.80ರಷ್ಟು ಪ್ರಕರಣಗಳು ಈ ರಾಜ್ಯಗಳ 49 ಜಿಲ್ಲೆಗಳಲ್ಲಿ ದಾಖಲಾಗಿವೆ ಎಂದು ಎಂದು ಕೋವಿಡ್‌-19 ನಿಯಂತ್ರಣದ ಉಸ್ತುವಾರಿ ವಹಿಸಿರುವ ಸಚಿವರ ತಂಡಕ್ಕೆ (ಜಿಒಎಂ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರ ನೇತೃತ್ವದಲ್ಲಿ ಆನ್‌ಲೈನ್‌ ಮೂಲಕ ಜಿಒಎಂ 18ನೇ ಸಭೆ ಗುರುವಾರ ನಡೆಯಿತು. ”ಶೇ. 86ರಷ್ಟು ಸಾವುಗಳು ಆರು ರಾಜ್ಯಗಳಾದ ಮಹಾರಾಷ್ಟ್ರ, ದಿಲ್ಲಿ, ಗುಜರಾತ್‌, ತಮಿಳುನಾಡು, ಉತ್ತರಪ್ರದೇಶ, ಮತ್ತು ಪಶ್ಚಿಮ ಬಂಗಾಳಗಳಲ್ಲಿವರದಿಯಾಗಿದೆ. ಕೊರೊನಾದಿಂದ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಶೇ.53ರಷ್ಟು ಪ್ರಕರಣಗಳಲ್ಲಿ ಮೃತಪಟ್ಟವರು 60 ವರ್ಷ ಮೇಲ್ಪಟ್ಟವರು,” ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಶ್ವದಾದ್ಯಂತ ಕೊರೊನಾದಿಂದ ತೀವ್ರತರದಲ್ಲಿ ತತ್ತರಿಸಿರುವ ಅಗ್ರ 5 ರಾಷ್ಟ್ರಗಳಲ್ಲಿ ಸೋಂಕಿತರ ಅಂಕಿ-ಅಂಶಗಳ ಹೋಲಿಕೆಯಲ್ಲಿ ಭಾರತದಲ್ಲಿಪ್ರತಿ ಲಕ್ಷ ಮಂದಿಗೆ 53 ಮಂದಿ ಸೋಂಕಿತರಿದ್ದಾರೆ. ಜತೆಗೆ ಲಕ್ಷ ಮಂದಿ ಸೋಂಕಿತರ ಪೈಕಿ ಒಬ್ಬರು ಮಾತ್ರ ಸಾವಿಗೀಡಾಗುತ್ತಿದ್ದಾರೆ. ಜಾಗತಿಕ ಸರಾಸರಿ ಪರಿಗಣಿಸಿದರೆ ಲಕ್ಷದಲ್ಲಿ145 ಮಂದಿಗೆ ಸೋಂಕು ತಗುಲಿ, 6 ಮಂದಿ ಮೃತಪಡುತ್ತಿದ್ದಾರೆ. ಇದು ದೇಶದ ಪಾಲಿಗೆ ಸಮಾಧಾನಕರ ಸಂಗತಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Related posts

ಇತಿಹಾಸಕ್ಕೆ ಸಂಶೋಧನಾತ್ಮಕ ಚೌಕಟ್ಟು ಅಗತ್ಯ

Times fo Deenabandhu

ಜೆಡಿಎಸ್ ಯುವ ಘಟಕ ಅಧ್ಯಕ್ಷ ಪಟ್ಟದಿಂದ ನಿಖಿಲ್ ಔಟ್? ಪ್ರಜ್ವಲ್ ಇನ್?

Times fo Deenabandhu

ನಂಜನಗೂಡಿನಲ್ಲಿ ನಂಜು ಹರಡಿದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ: ಸೋಮಣ್ಣ

Times fo Deenabandhu