Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 2,228 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,373

ಬೆಂಗಳೂರು: ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆ ವರೆಗಿನ ಅವಧಿಯಲ್ಲಿ ರಾಜ್ಯದಾದ್ಯಂತ 2,228 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆಯಾಗಿದೆ. ಇದುವರೆಗೆ 486 ಮಂದಿ ಸಾವಿಗೀಡಾಗಿದ್ದಾರೆ.
ಇದುವರೆಗೆ 12, 884 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ ರಾಜ್ಯದಲ್ಲಿ 17, 782 ಸಕ್ರಿಯ ಪ್ರಕರಣಗಳು ಇವೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ ಅತಿ ಹೆಚ್ಚು (1373) ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 177ಕ್ಕೆ ತಲುಪಿದೆ.
ದಕ್ಷಿಣ ಕನ್ನಡ- 167, ಕಲಬುರ್ಗಿ- 85, ಧಾರವಾಡ- 75, ಮೈಸೂರು- 52, ಬಳ್ಳಾರಿ- 41, ದಾವಣಗೆರೆ- 40, ಶಿವಮೊಗ್ಗ- 37, ಬಾಗಲಕೋಟೆ- 36, ಕೋಲಾರ- 34, ಚಿಕ್ಕಬಳ್ಳಾಪುರ- 32 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.

Related posts

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ 14 ದಿನಗಳಿಂದ 7ಕ್ಕೆ ಇಳಿಕೆ, ಮತ್ತಷ್ಟು ಅನಾಹುತಕ್ಕೆ ದಾರಿ

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು, ಕೆಎಸ್‌ಆರ್‌ಟಿಸಿಗೆ 8.40 ಕೋಟಿ, ಬಿಎಂಟಿಸಿಗೆ 6.10 ಕೋಟಿ ರೂ. ನಷ್ಟ

Times fo Deenabandhu

 ಬೆಂಗಳೂರಿನಲ್ಲಿ ಮತ್ತೆ 55 ಮಂದಿಗೆ ಕೊರೊನಾ ಸೋಂಕು: ಐವರ ಸಾವು, 800 ಗಡಿ ದಾಟಿದ ಸೋಂಕಿತರ ಸಂಖ್ಯೆ