Times of Deenabandhu
  • Home
  • ಪ್ರಧಾನ ಸುದ್ದಿ
  •  ಎರಡು ತಿಂಗಳ ಬಳಿಕ ಪತ್ನಿ, ಮಗುವನ್ನು ಕಣ್ತುಂಬಿಕೊಂಡ ಆಂಬುಲೆನ್ಸ್‌ ಚಾಲಕ!
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಎರಡು ತಿಂಗಳ ಬಳಿಕ ಪತ್ನಿ, ಮಗುವನ್ನು ಕಣ್ತುಂಬಿಕೊಂಡ ಆಂಬುಲೆನ್ಸ್‌ ಚಾಲಕ!

ತಿರುವನಂತಪುರ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಆಂಬುಲೆನ್ಸ್‌ ಚಾಲಕರೊಬ್ಬರು ಎರಡು ತಿಂಗಳ ನಂತರ ಪತ್ನಿ ಮತ್ತು ಮಗುವನ್ನು ದೂರದಲ್ಲೇ ನಿಂತು ಕಣ್ತುಂಬಿಕೊಂಡಿರುವ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ.

ಚಾಲಕ ಫೈಜಲ್‌ ಕಬೀರ್‌ (29) ಅವರು ಸುರಕ್ಷತೆಯ ದೃಷ್ಟಿಯಿಂದ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾರೆ. ಒಂದು ವರ್ಷದ ಮಗು ಮತ್ತು ಪ್ರೀತಿಯ ಮಡದಿಯನ್ನು ನೋಡುವ ತವಕ ಅವರಿಗೆ. ಆದರೆ, ಸೋಂಕಿತರ ಸೇವೆಯಲ್ಲಿರುವ ಅವರಿಗೆ ಮನೆಗೆ ಹೋಗಲಾಗದಂತಹ ಪರಿಸ್ಥಿತಿ.

ಎರ್ನಾಕುಳಂನಲ್ಲಿ ಕರ್ತವ್ಯದಲ್ಲಿರುವ ಫೈಜಲ್‌ ಕೆಲಸದ ನಿಮಿತ್ತ ತಿರುವನಂತಪುರಕ್ಕೆ ಹೋಗಿದ್ದರು. ಅಲ್ಲಿಂದ ತೆರಳುವಾಗ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ನಿಗೆ ಬರುವಂತೆ ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ಪತ್ನಿಯನ್ನು ಕಂಡು ದೂರದಿಂದಲೇ ಸಂಭಾಷಣೆ ನಡೆಸಿದ್ದಾರೆ. ಈ ಪ್ರೀತಿಗೆ ಸಾಕ್ಷಿ ಆಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಯನ್ನು ಗಳಿಸಿಕೊಂಡಿದೆ.

‘ಆಂಬುಲೆನ್ಸ್‌ ನಿಲ್ಲಿಸಿ, ಪತ್ನಿ, ಮಗು ಕಂಡಾಗ ಅವರ ಸಮೀಪ ಹೋಗುವ ಆಸೆಯಾಯಿತು. ಆದರೆ, ಸೋಂಕು ಹರಡುವ ಭೀತಿಯಿಂದ ದೂರವೇ ಉಳಿದೆ. ನಾನು ಮಗುವನ್ನು ಮುದ್ದಿಸದೆ ನಾಲ್ಕು ತಿಂಗಳೇ ಆಗಿದೆ. ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದೇನೆ’ ಎಂದು ಫೈಜಲ್‌ ತಿಳಿಸಿದ್ದಾರೆ.

Related posts

ಫೆಬ್ರವರಿ 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

Times fo Deenabandhu

ಕೊರೊನಾದಿಂದ ಕಂಗೆಟ್ಟಿದ್ದ ಚೀನಾದಲ್ಲಿ ಹೊಸ ಸಮಸ್ಯೆ, ಕೋವಿಡ್‌-19ನಿಂದ ವಿಚ್ಛೇದನ ಹೆಚ್ಚಳ

Times fo Deenabandhu

ಬೆಂಗಳೂರಿನಲ್ಲಿ ಭಾರತದ ಮೊದಲ ಗಗನಯಾನ ತರಬೇತಿ ಕೇಂದ್ರ ಸ್ಥಾಪನೆ: ಇಸ್ರೋ ಅಧ್ಯಕ್ಷ ಶಿವನ್‌

Times fo Deenabandhu