Times of Deenabandhu
  • Home
  • ನ್ಯೂಸ್
  • ರಾಜ್ಯ
  • ರಾಜ್ಯದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ   ಕೊರೊನಾ… ಬೆಂಗಳೂರೊಂದರಲ್ಲಿಯೇ 1148 ಜನರಿಗೆ ಸೋಂಕು.. ದಕ್ಷಿಣ ಕನ್ನಡದಲ್ಲಿ  ಮತ್ತೊಮ್ಮೆ ಆರ್ಭಟ…. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……   
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ   ಕೊರೊನಾ… ಬೆಂಗಳೂರೊಂದರಲ್ಲಿಯೇ 1148 ಜನರಿಗೆ ಸೋಂಕು.. ದಕ್ಷಿಣ ಕನ್ನಡದಲ್ಲಿ  ಮತ್ತೊಮ್ಮೆ ಆರ್ಭಟ…. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……   

ಬೆಂಗಳೂರು ಜೂ.08: ರಾಜ್ಯದಲ್ಲಿ ಕೊರೊನಾ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಇಂದು ಬರೋಬ್ಬರಿ 2062 ಜನರಲ್ಲಿ   ಸೋಂಕು ಕಾಣಿಸಿಕೊಂಡರೆ,  ಕೊರೊನಾಕ್ಕೆ ರಾಜ್ಯದಲ್ಲಿ 54 ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ 1148 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ದಕ್ಷಿಣಕನ್ನಡದಲ್ಲಿ 183, ಧಾರವಾಡ 89, ಜನರಲ್ಲಿ  ಸೋಂಕು ದೃಢವಾಗಿದೆ. ಉಡುಪಿಯಲ್ಲಿ 31 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ 17  ಜನರಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ.. ಇದರೊಂದಿಗೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಒಟ್ಟು 141 ಜನ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 190 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ರಾಜ್ಯದಲ್ಲಿ ಒಟ್ಟು 28877 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇದೂವರೆಗೆ 11876  ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಕೋವಿಡ್ ನಿಂದಾಗಿ 470ಜನ ಮರಣ ಹೊಂದಿದ್ದಾರೆ.

ಇದು ಇಂದು ಸಂಜೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್   ಬುಲೆಟಿನ್ ಮಾಹಿತಿಯಾಗಿದೆ.

 

Related posts

ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಶೀಘ್ರ ವಿಶೇಷ ನ್ಯಾಯಾಲಯ: ಮಾಧುಸ್ವಾಮಿ

Times fo Deenabandhu

ಈ ಬಾಲಕಿ ಯಾರೆಂದು ಗುರುತಿಸುವಿರಾ?

Times fo Deenabandhu

ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೇಗೆ?

Times fo Deenabandhu