Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗ
  • ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ : ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಮಳೆ
ಜಿಲ್ಲೆ ಶಿವಮೊಗ್ಗ

ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ : ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಮಳೆ

 

ಶಿವಮೊಗ್ಗ ಜು.08:: ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಕೋರ್ಪಲಯ್ಯನ ಛತ್ರದ ಬಳಿ ಇರುವ ಐತಿಹಾಸಿಕ ಮಂಟಪ ಮುಳುಗಲು ಇನ್ನು 2 ಅಡಿ ಬಾಕಿ ಇದ್ದು ತುಂಗೆ ತುಂಬಿ ಹರಿಯುತ್ತಿದ್ದಾಳೆ.

ತೀರ್ಥಹಳ್ಳಿ ಸೇರಿದಂತೆ ಶೃಂಗೇರಿ, ಕೊಪ್ಪ ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತುಂಗಾ ಜಲಾಶಯದ 11 ಕ್ರಸ್ಟ್ ಗೇಟುಗಳನ್ನು ತೆರೆದು ಸುಮಾರು 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಇಂದೂ ಸಹ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದೆ. ಜು.1 ರಿಂದ 8ರವರೆಗೆ ಶಿವಮೊಗ್ಗ ತಾಲ್ಲೂಕಿನಲ್ಲಿ 82 ಮಿ.ಮೀ., ಭದ್ರಾವತಿ ತಾಲ್ಲೂಕಿನಲ್ಲಿ 71 ಮಿ.ಮೀ., ತೀರ್ಥಹಳ್ಳಿಯಲ್ಲಿ-272.00 ಮಿ.ಮೀ., ಸಾಗರ 198.80 ಮಿ.ಮೀ., ಶಿಕಾರಿಪುರ 82.80 ಮಿ.ಮೀ., ಸೊರಬ-101.40 ಮಿ.ಮೀ., ಹೊಸನಗರ 304.30 ಮಿ.ಮೀ., ಮಳೆಯಾಗಿದೆ. ಒಟ್ಟಾರೆ ಸರಾಸರಿ ಜಿಲ್ಲೆಯಲ್ಲಿ 159.01 ಮಿ.ಮೀ., ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 1761.25 ಅಡಿ ಇದೆ. ಜಲಾಶಯನ ಪ್ರದೇಶದಲ್ಲಿ 53.20 ಮಿ.ಮೀ. ಮಳೆಯಾಗಿದೆ. ಭದ್ರಾ ಜಲಾಶಯದಲ್ಲಿ 144.50 ಅಡಿ ನೀರು ಇದ್ದು, ಜಲಾನಯನ ಪ್ರದೇಶದಲ್ಲಿ 8.20 ಮಿ.ಮೀ., ಮಳೆಯಾಗಿದೆ. ತುಂಗಾ ಜಲಾಶಯದ ಸರಾಸರಿ ಮಟ್ಟ  588.24 ಅಡಿ ಇದ್ದು, ಇಂದು ಕೂಡ 588.24 ಅಡಿ ಇದೆ.

Related posts

ಸ್ವಾಸ್ಥ್ಯ ಸಮಾಜ ನಿರ್ಮಾಣ ಲಯನ್ಸ್ ಗುರಿ : ರೋನಾಲ್ಡ್ ಗೋಮ್ಸ್

Times fo Deenabandhu

ಕೋಳಿ ಫಾರಂನಲ್ಲಿ ಕೋಳಿಗಳ ಸಾವು-ವೈಜ್ಞಾನಿಕ ವಿಲೇವಾರಿ ಮಾಡದೆ ನಿರ್ಲಕ್ಷ್ಯ ತೋರಿದ ವ್ಯಕ್ತಿಯ ಮೇಲೆ ಕೇಸು ದಾಖಲು…

Times fo Deenabandhu

ಔಷಧಿ ಅಂಗಡಿ ಹೊರತುಪಡಿಸಿ ಎಲ್ಲಾ ಅಂಗಡಿಯನ್ನು ಬಂದ್ ಮಾಡಬೇಕು: