Times of Deenabandhu
  • Home
  • ಜಿಲ್ಲೆ
  • ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದವರು ಈಗ ಬೆಂಗಳೂರನ್ನು ಬಿಟ್ಟು ಹೋಗುವ ಮಾತು ಆಡುತ್ತಿದ್ದಾರೆ….
ಜಿಲ್ಲೆ ಶಿವಮೊಗ್ಗ

ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದವರು ಈಗ ಬೆಂಗಳೂರನ್ನು ಬಿಟ್ಟು ಹೋಗುವ ಮಾತು ಆಡುತ್ತಿದ್ದಾರೆ….

 

ಸಾಗರ ಜು.08: ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚು ಜಾಗೃತೆ ವಹಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದಾರೆ.

ಇಲ್ಲಿನ ಬ್ಲಾಕ್ ಕಾಂಗ್ರೇಸ್ ವತಿಯಿಂದ ಬುಧವಾರ ಕೊರೋನಾ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈರ್ ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾಗೋಡು,

ಬೆಂಗಳೂರಿನಂತಹ ನಗರ ಕೊರೊನಾದಿಂದ ತಲ್ಲಣಿಸಿ ಹೋಗಿದೆ. ಜನರನ್ನು ಜಾಗೃತೆಗೊಳಿಸುವುದು ಸರ್ಕಾರಕ್ಕೂ ಸವಾಲು ಎನ್ನುವಂತೆ ಆಗಿದೆ. ಇಷ್ಟು ದಿನ ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದವರು ಈಗ ಬೆಂಗಳೂರನ್ನು ಬಿಟ್ಟು ಹೋಗುವ ಮಾತು ಆಡುತ್ತಿದ್ದಾರೆ. ಕೊರೋನಾ ಎಲ್ಲರ ಮನಸ್ಥಿತಿಯನ್ನೇ ಅಲ್ಲಾಡಿಸಿದೆ. ಕೊರೋನಾಕ್ಕೆ ಹೆದರುವ ಬದಲು ನಮ್ಮ ಮಾನಸಿಕತೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆಗಾಗ ಕೈತೊಳೆದುಕೊಳ್ಳುವಂತೆ ಮುಂಜಾಗೃತೆಯನ್ನು ಜನರು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಾಗರದಲ್ಲಿ ಈಗಾಗಲೆ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿದೆ. ಕಾಯಿಲೆ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಬೇಕು. ನಗರ ಪ್ರದೇಶದಲ್ಲಿ ಈಗಾಗಲೆ ಸುಮಾರು 10 ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ. ಇದು ಹಳ್ಳಿಗಳಿಗೆ ಹೋಗದಂತೆ ತಾಲ್ಲೂಕು ಆಡಳಿತ ಗಮನ ಹರಿಸಬೇಕು. ಕೊರೋನಾ ಜಾಗೃತಿಗೊಳಿಸುವ ನಿಟ್ಟಿನಲ್ಲಿ ನಗರ ಕಾಂಗ್ರೇಸ್ ಘಟಕ ಹಮ್ಮಿಕೊಂಡಿರುವ ಕಾರ್ಯಕ್ರಮ ನಿಜಕ್ಕೂ ಪರಿಣಾಮಕಾರಿಯಾದದ್ದು ಎಂದು ತಿಳಿಸಿದರು.

ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಕೊರೋನಾವನ್ನು ಬಗ್ಗೆ ಭಯಪಡುವುದಕ್ಕಿಂತ ಜಾಗೃತೆವಹಿಸಿ ಎದುರಿಸುವುದು ಸೂಕ್ತ. ಕೊರೋನಾ ಕಾಯಿಲೆ ಹೇಗೆ ಹರಡುತ್ತದೆ ಎನ್ನುವ ಕುರಿತು ಜನಸಾಮಾನ್ಯರಿಗೆ ಕನಿಷ್ಟ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೇಸ್ ಮತ್ತು ನಗರ ಕಾಂಗ್ರೇಸ್ ವತಿಯಿಂದ ಕರಪತ್ರ ಹಂಚಿಕೆ, ಮಾಸ್ಕ್ ವಿತರಣೆಯಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೊತೆಗೆ ಅಂಗಡಿಗಳಿಗೆ, ಜನರ ಬಳಿಗೆ ತೆರಳಿ ಅವರಿಗೆ ಕೊರೋನಾ ಕುರಿತು ಜಾಗೃತಿವಹಿಸಲು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಎಚ್.ಎಂ.ರವಿಕುಮಾರ್, ಅಣ್ಣಪ್ಪ ಭೀಮನೇರಿ, ಕಾಂಗ್ರೇಸ್ ಪ್ರಮುಖರಾದ ಮಹಾಬಲ ಕೌತಿ, ಮಧುಮಾಲತಿ, ನಾಗರಾಜ ಗುಡ್ಡೆಮನೆ, ತಾರಾಮೂರ್ತಿ, ಮಹಮದ್ ಜಕ್ರಿಯ, ಎಲ್.ಚಂದ್ರಪ್ಪ, ಪ್ರೇಮ್ ಸಿಂಗ್, ವೆಂಕಟೇಶ್ ಮೆಳವರಿಗೆ, ಪ್ರವೀಣ ಬಣಕಾರ್ ಇನ್ನಿತರರು ಹಾಜರಿದ್ದರು.

 

Related posts

ಪರವಿದ್ಯೆ ಮತ್ತು ಅಪರವಿದ್ಯೆ ಎರಡನ್ನೂ ಮಕ್ಕಳಿಗೆ ನೀಡಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ

Times fo Deenabandhu

ಲಾಕ್ಡೌನ್ ನಿಯಮ ಉಲ್ಲಂಘನೆ: ವಾಹನ ಸವಾರರಿಗೆ ನೇರವಾಗಿ ಬಿಸಿ ಮುಟ್ಟಿಸಿದ ಡಿಸಿ,ಎಸ್ಪಿ

Times fo Deenabandhu

ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು -ಅವಕಾಶ ಹೆಡ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ-ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ

Times fo Deenabandhu