Times of Deenabandhu
  • Home
  • ಜಿಲ್ಲೆ
  • ಭದ್ರಾವತಿ: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದಿದ್ದಕ್ಕೆ ಅಜಿಯನ್ನೇ ಕೊಂದ ಮೊಮ್ಮಗ
ಜಿಲ್ಲೆ ಶಿವಮೊಗ್ಗ

ಭದ್ರಾವತಿ: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದಿದ್ದಕ್ಕೆ ಅಜಿಯನ್ನೇ ಕೊಂದ ಮೊಮ್ಮಗ

ಶಿವಮೊಗ್ಗ ಜು.8: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಮೊಮ್ಮಗ ಅಜ್ಜಿಗೆ ಕುಡಗೋಲಿನಿಂದ ಥಳಿಸಿದ್ದರಿಂದ ಆಕೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಭದ್ರಾವತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಭದ್ರಾವತಿಯ ಹೊರವಲಯದ ತಾಷ್ಕೆಂಟ್ ನಗರದಲ್ಲಿ ಈ ದುರಂತ ಘಟಿಸಿದೆ. ಅರುಣ್ (೨೫) ಕೊಲೆ ಮಾಡಿದವನು. ಕುಡಿತದ ಚಟಕ್ಕೆ ಸಿಲುಕಿದ್ದ ಈತ ಬೆಳಿಗ್ಗೆಯೇ ಅಜ್ಜಿಯಲ್ಲಿ ಹಣ ಕೇಳಿದಾಗ ಆಕೆ ಹಣವಿಲ್ಲ ಎಂದಿದ್ದಳು. ಇದರಿಂದ ಸಿಟ್ಟಿಗೆದ್ದ ಮೊಮ್ಮಗ ಕೈಗೆ ಸಿಕ್ಕ ಕುಡುಗೋಲಿನಿಂದ ಕುತ್ತಿಗೆಗೆ ಹೊಡೆದಾಗ ತೀವ್ರ ರಕ್ತಸ್ರಾವದಿಂದ  ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಇದನ್ನು ತಪ್ಪಿಸಲು ಬಂದ ಒನ್ನೊಬ್ಬ ಮಹಿಳೆ ಪಾಪಮ್ಮ ಎನ್ನುವವರಿಗೂ ಗಂಭೀರ ಕತ್ತಿಯೇಟು ತಗುಲಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಅರುಣ್ ನನ್ನು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Related posts

ಬದುಕಿನಲ್ಲಿ ಉತ್ತಮ‌ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ – ಸಾಹಿತಿ ರವಿ ಸಸಿತೋಟ ಅಭಿಪ್ರಾಯಪಟ್ಟರು.

Times fo Deenabandhu

ಶಿಕ್ಷಣದಲ್ಲಿ ಕೇಸರೀಕರಣ ಅಪರಾಧವಲ್ಲ-ಅಗತ್ಯ: ಜಿ.ಆರ್.ಜಗದೀಶ್

Times fo Deenabandhu

ಕರ್ನಾಟಕಕ್ಕೆ ಆರಂಭಿಕ ಅಘಾತ

Times fo Deenabandhu