Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೊನಾ ಸೋಂಕು

ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಕುರಿತು ಅವರೇ ಟಿವಿ ಮೂಲಕ ಘೋಷಣೆ ಮಾಡಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.

65 ವರ್ಷ ವಯಸ್ಸಿನ ಬೋಲ್ಸನಾರೊ ಅವರಲ್ಲಿ ಸೋಮವಾರ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಜತೆಗೆ ಜ್ವರದಿಂದಲೂ ಬಳಲುತ್ತಿದ್ದರು. ಹೀಗಾಗಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಬ್ರೆಜಿಲ್‌ನಲ್ಲಿರುವ ಅಮೆರಿಕದ ರಾಯಭಾರಿ ಟಾಡ್ ಚಾಪ್ಮನ್ ಜತೆ ಅವರು ರಾಜಧಾನಿ ಬ್ರೆಸಿಲಿಯಾದಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅದಾದ ಮೂರು ದಿನಗಳ ಬಳಿಕ ಸೋಂಕು ತಗುಲಿದೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಬ್ರೆಜಿಲ್‌ನಲ್ಲಿ ಈವರೆಗೆ 16.23 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 65,487 ಜನ ಮೃತಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿ ಮಂಗಳವಾರ 2,691 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರದಲ್ಲಿ ದಿನವೊಂದರಲ್ಲಿ ದಾಖಲಾದ ಕಡಿಮೆ ಪ್ರಕರಣ ಇದಾಗಿದೆ. ಆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 234,508ಕ್ಕೆ ಏರಿಕೆಯಾಗಿದೆ. ಈವರೆಗೆ 4,839 ಜನ ಮೃತಪಟ್ಟಿದ್ದಾರೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 29.48 ಲಕ್ಷ ತಲುಪಿದ್ದು, 130,430 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್‌ನಿಂದಾಗಿ ಈವರೆಗೆ ರಷ್ಯಾದಲ್ಲಿ 10,478, ಪೆರುವಿನಲ್ಲಿ 10,772, ಚಿಲೆಯಲ್ಲಿ 6,384, ಬ್ರಿಟನ್‌ನಲ್ಲಿ 44,321, ಮೆಕ್ಸಿಕೊದಲ್ಲಿ 31,119, ಸ್ಪೇನ್‌ನಲ್ಲಿ 28,388, ಇರಾನ್‌ನಲ್ಲಿ 11,931, ಇಟಲಿಯಲ್ಲಿ 34,869 ಮಂದಿ ಮೃತಪಟ್ಟಿದ್ದಾರೆ.

Related posts

ಭಾರತೀಯ ವಾಯುಪಡೆಯ ಬಹದ್ದೂರ್‌ ಮಿಗ್‌ ‘ವಿದಾಯ’

Times fo Deenabandhu

ಎಸ್ಸೆಸ್ಸೆಲ್ಸಿ: ಧೈರ್ಯದಿಂದ ಪರೀಕ್ಷೆ ಎದುರಿಸಿ

ಸನ್ಯಾಸದ ಬದುಕಿಗೆ ಆಧ್ಯಾತ್ಮದ ಅನುಸಂಧಾನ ಅಗತ್ಯ

Times fo Deenabandhu