Times of Deenabandhu
  • Home
  • ಪ್ರಧಾನ ಸುದ್ದಿ
  • ವಾರದೊಳಗೆ ಭಾರತದ ಮೊಟ್ಟಮೊದಲ ಕೊರೊನಾ ವ್ಯಾಕ್ಸಿನ್….. 1100 ಜನರಿಗೆ ಕ್ಲಿನಿಕಲ್ ಟ್ರಯಲ್
ಆರೋಗ್ಯ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ವಾರದೊಳಗೆ ಭಾರತದ ಮೊಟ್ಟಮೊದಲ ಕೊರೊನಾ ವ್ಯಾಕ್ಸಿನ್….. 1100 ಜನರಿಗೆ ಕ್ಲಿನಿಕಲ್ ಟ್ರಯಲ್

 

ನವದೆಹಲಿ ಜು.7: ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರವೇ  ಭಾರತದ ಮೊಟ್ಟ ಮೊದಲ ಕೊರೊನಾ ಲಸಿಕೆ ‘ಕೊವ್ಯಾಕ್ಸಿನ್’ ಮನುಷ್ಯರ ಮೇಲೆ ಪ್ರಯೋಗ ಮಾಡುವ ಎಲ್ಲ ಸಾದ್ಯತೆ ಇದೆ. ಹೈದರಾಬಾದ್ ಫಾರ್ಮಸಿ ಕಂಪನಿ ‘ಭಾರತ್ ಬಯೋಟೆಕ್ ‘  ಐಸಿಎಂಆರ್‌ ಜೊತೆಗೂಡಿ ತಯಾರಿಸಿರುವ ಲಸಿಕೆಯನ್ನು ಪ್ರಯೋಗಿಕವಾಗಿ ಕರ್ನಾಟಕದ ಬೆಳಗಾವಿಯೂ ಸೇರಿದಂತೆ ಸುಮಾರು 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡು 2 ಹಂತಗಳಲ್ಲಿ 1100 ಜನರಿಗೆ ಕ್ಲಿನಿಕಲ್ ಟ್ರಯಲ್ ನಡೆಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಐಸಿಎಂಆರ್‌ ಮೂಲದ ಪ್ರಕಾರ ಭಾರತ್ ಬಯೋಟೆಕ್ ಕಂಪನಿಯು ಮೊದಲಿಗೆ 375 ಮಂದಿಗೆ ಲಸಿಕೆಯನ್ನು ಪ್ರಯೋಗ ಮಾಡಲಿದೆ. 2ನೇ ಹಂತದಲ್ಲಿ 750 ಜನರಿಗೆ ಲಸಿಕೆಯನ್ನು ಪ್ರಯೋಗ ಮಾಡಲಿದೆ. ಈಗಾಗಲೇ 2 ಹಂತಗಳಲ್ಲಿ ಟ್ರಯಲ್ ನಡೆಸಲು ಅನುಮತಿಯನ್ನು ಪಡೆಯಲಾಗಿದೆ. ಕೊರೊನಾ ವ್ಯಾಕ್ಸಿನ್‌ ಅನ್ನು ಸಾರ್ಸ್‌ ವೈರಸ್‌ನಿಂದ ಅಭಿವೃದ್ಧಿಪಡಿಲಾಗಿದೆ. ಪುಣೆಯ ಎನ್‌ಐವಿ ಯಲ್ಲಿ ರಕ್ಷಿಸಿಟ್ಟಿದ್ದ ಸಾರ್ಸ್‌ ವೈರಸ್ ಅನ್ನು ಭಾರತ್‌ ಬಯೋಟೆಕ್ ಫಾರ್ಮಸಿ ಕಂಪನಿಗೆ ಕಳುಹಿಸಲಾಗಿತ್ತು.

ಐಸಿಎಂಆರ್‌ ನಿರ್ದೇಶಕ ಡಾ. ಬಲರಾಂ ಭಾರ್ಗವ್‌ ಅವರು ವ್ಯಾಕ್ಸಿನ್‌ ಪ್ರಯೋಗಕ್ಕೆ ಗುರುತಿಸಲಾಗಿರುವ ಎಲ್ಲ 12 ಆಸ್ಪತ್ರೆಗಳಿಗೂ, ಕೂಡಲೇ ವ್ಯಾಕ್ಸಿನ್ ಪ್ರಯೋಗ ಮಾಡುವಂತೆ ತಿಳಿಸಿದ್ದಾರೆ..

ಬೆಂಗಳೂರು ಮೂಲದ ವಿಜ್ಞಾನಿಗಳ ವೇದಿಕೆಯಾದ ‘ ಇಂಡಿಯನ್ ಅಕಾಡೆಮಿ ಆಫ್‌ ಸೈನ್ಸ್’ ಕೂಡ ಶಿಘ್ರವಾಗಿ ಲಸಿಕೆ ಹೊರತರುವ ಅನಿವಾರ್ಯತೆಯನ್ನು ಒಪ್ಪಿಕೊಂಡಿದೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಲಸಿಕೆ ಹೊರತರುತ್ತೇವೆ ಎಂದು  ಹೇಳಿರುವುದು ಅವಾಸ್ತವಿಕ ಎಂದಿದೆ.

ಭಾರತದಲ್ಲಿ ಒಟ್ಟು 6 ಫಾರ್ಮಸಿ ಕಂಪನಿಗಳು ಕೊರೊನಾಗೆ ಲಸಿಕೆ ತಯಾರಿಸಿಲು ಸಂಶೋಧನೆಯಲ್ಲಿ ನಿರತವಾಗಿವೆ ಎಂದು ಕೇಂದ್ರ ಸರಕಾರ ಈಗಾಗಲೇ ತಿಳಿಸಿರುವುದನ್ನು ಗಮನಿಸಬಹುದಾಗಿದೆ.

Related posts

ಉಗ್ರರ ವಿರುದ್ಧ ಕಾದಾಡುವ ಯೋಧರಿಗೆ ಸರಿಯಾದ ಊಟ, ಬಟ್ಟೆ ಸಿಗ್ತಿಲ್ಲ..!

Times fo Deenabandhu

 ಭಾರತದ ಪ್ರತೀಕಾರ ಕ್ರಮದ ಭಯ: ಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳ ಹಾರಾಟ!

ಕೆಂಪು, ಕಿತ್ತಳೆ, ಹಸಿರು.. ಯಾವ ವಲಯದಲ್ಲಿ ಏನುಂಟು, ಏನಿಲ್ಲ? ಕಂಟೈನ್ಮೆಂಟ್‌ ಝೋನ್ ಕಥೆ?