Times of Deenabandhu
  • Home
  • ಜಿಲ್ಲೆ
  • ಜೆ.ಎನ್.ಎನ್.ಸಿ ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ಪ್ರಯತ್ನ ವಿಕಲಚೇತನರಿಗೆರಿವರ್ಸ್‍ಗೇರ್ ಹೊಂದಿರುವ ಕ್ವಾಡ್ ಬೈಕ್ ವಿನ್ಯಾಸ
ಜಿಲ್ಲೆ ನಮ್ಮ ವಿಶೇಷ ಶಿವಮೊಗ್ಗ

ಜೆ.ಎನ್.ಎನ್.ಸಿ ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ಪ್ರಯತ್ನ ವಿಕಲಚೇತನರಿಗೆರಿವರ್ಸ್‍ಗೇರ್ ಹೊಂದಿರುವ ಕ್ವಾಡ್ ಬೈಕ್ ವಿನ್ಯಾಸ

 

ಶಿವಮೊಗ್ಗ: ನಗರದ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‍ಇಂಜಿನಿಯರಿಂಗ್ ವಿಭಾಗದ ವತಿಯಿಂದ ರಿವರ್ಸ್‍ಗೇರ್ ಹೊಂದಿರುವ ಎಲೆಕ್ಟ್ರಿಕ್‍ಕ್ವಾಡ್ ಬೈಕ್‍ವಿದ್ಯುತ್‍ಚಾಲಿತ ವಾಹನವನ್ನು ವಿನ್ಯಾಸಗೊಳಿಸಲಾಗಿದ್ದು, ವಿಕಲಚೇತನ ಬೈಕ್ ಸವಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಮೆಕ್ಯಾನಿಕಲ್‍ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾದ್ಯಾಪಕರಾದ                                        ಡಾ.ಎಸ್.ಜೆ. ಅಮಿತ್‍ಕುಮಾರ್‍ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಎ.ಶಬರೀಶ್, ಎಂ.ಶ್ರೇಯಸ್, ನಿರಂಜನ್‍ತಡಸದ್, ಚಂದನ್‍ಕುಮಾರ್‍ಅವರ ತಂಡ ಈ ವಿನೂತನ ಪ್ರಯತ್ನ ಮಾಡಿದ್ದಾರೆ.ಕರ್ನಾಟಕ ಸರ್ಕಾರವುಜೆ.ಎನ್.ಎನ್.ಸಿಇಂಜಿನಿಯರಿಂಗ್‍ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂಏಜ್‍ಇನೊವೇಷನ್ ನೆಟ್‍ವರ್ಕ್ ಸೆಂಟರ್ ಮೂಲಕ ಆರ್ಥಿಕ ಸಹಕಾರವನ್ನು ನೀಡಲಾಗಿದೆ. ಪ್ರಸ್ಥುತ ವಿಕಲಚೇತನರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿವಾಹನವನ್ನುರಿವರ್ಸ್ ತೆಗೆದುಕೊಳ್ಳುವಾಗ ಮತ್ತು ತಿರುಗಿಸುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರಿವರ್ಸ್‍ಗೇರ್ ಹೊಂದಿರುವ ಎಲೆಕ್ಟ್ರಿಕ್‍ಕ್ವಾಡ್ ಬೈಕ್ ವಾಹನವನ್ನು ಅಭಿವೃದ್ದಿಪಡಿಸಲಾಗಿದೆ. ಈ ನೂತನ ವಿನ್ಯಾಸದ ಎಲೆಕ್ಟ್ರಿಕ್‍ಕ್ವಾಡ್ ಬೈಕ್ ನಾಲ್ಕು ಚಕ್ರಗಳನ್ನು ಹೊಂದಿದ್ದು ಬೈಕ್ ಸವಾರರಿಗೆಎರಡು ಆಯ್ಕೆಗಳನ್ನು ಹೊಂದಿರುವ ಬಟನ್ ನೀಡಲಾಗಿದ್ದು, ಸವಾರರ ಅಗತ್ಯತೆಯ ಆಧಾರದಲ್ಲಿ ಮುಂಬದಿ ಮತ್ತು ಹಿಂಬದಿ ಚಲನೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಸವಾರರಿಗೆ ಅದ್ಭುತ ಮತ್ತು ಆರಾಮದಾಯಕ ಅನುಭವ ನೀಡುವುದರಜೊತೆಗೆ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ದಿಪಡಿಸಲಾಗಿದ್ದು ಸುಮಾರು ಏಳರಿಂದ ಎಂಟು ಘಂಟೆಗಳ ಬ್ಯಾಟರಿ ಚಾರ್ಜ್‍ಮಾಡಿದನಂತರ ಸುಮಾರುತೊಂಬತ್ತು ಕಿ.ಮಿ ಮೈಲೇಜ್‍ಈ ವಾಹನವು ನೀಡಲಿದೆ. ವಿಕಲಚೇತನರು ಬಳಸುತ್ತಿರುವ ಹೆಚ್ಚುವರಿ ಚಕ್ರದ ಗಾಡಿಗಳ ಸ್ಥಿರತೆ ವ್ಯತ್ಯಾಸವಾದರೇ ಉರುಳಿ ಬೀಳುವ ಆತಂಕವಿದ್ದು ಅಂತಹ ಆತಂಕವನ್ನು ಎಲೆಕ್ಟ್ರಿಕ್‍ಕ್ವಾಡ್ ಬೈಕ್‍ದೂರಮಾಡಿದೆ. ಈ ನೂತನ ವಿನ್ಯಾಸದಿಂದ ವಾಹನ ಕೈಗಾರಿಕೆಗಳ ಕ್ಷೇತ್ರದ ಪ್ರಸ್ತುತ ಮತ್ತು ಭವಿಷ್ಯದಲ್ಲಿನ ಮೆಕ್ಯಾನಿಕಲ್‍ಇಂಜಿನಿಯರಿಂಗ್ ವಿಭಾಗದ ಸಾಮಥ್ರ್ಯವನ್ನು ಎತ್ತಿತೊರಿಸುತ್ತಿದೆ. ಮುಂದಿನ ದಿನಗಳಲ್ಲಿ ವಾಹನ ಉದ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ 2021 ರ ವೇಳೆಗೆ ಎಲೆಕ್ಟ್ರೀಕ್ ಮೊಬಿಲಿಟಿ ಸೇವೆಗೆ ಚಾಲನೆ ನೀಡುವ ಇಂಗಿತ ತಂಡದ ಸದಸ್ಯರದ್ದಾಗಿದೆ

ಕರ್ನಾಟಕ ಸರ್ಕಾರ ಜೆ.ಎನ್.ಎನ್.ಸಿ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂಏಜ್‍ಇನೊವೇಷನ್ ನೆಟ್‍ವರ್ಕ್ ಸೆಂಟರ್ ಮೂಲಕ ವಿದ್ಯಾರ್ಥಿಗಳ ಸಾಕಷ್ಟು ಹೊಸ ಆಲೋಚನೆಗಳಿಗೆ ಆರ್ಥಿಕ ಸಹಕಾರ ಮತ್ತು ನವ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯ ಬೆಂಬಲ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್‍ಕ್ವಾಡ್ ಬೈಕ್‍ಅನ್ನು ಕಾಲೇಜಿನ ಆವರಣದಲ್ಲಿ ಚಲಿಸಲು ಚಾಲನೆ ನೀಡಲಾಯಿತು. ಜೆ.ಎನ್.ಎನ್.ಸಿ ಇಂಜಿನಿಯರಿಂಗ್‍ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಆರ್ ಮಹದೇವಸ್ವಾಮಿ, ಆಡಳಿತ ವಿಭಾಗದ ಡೀನ್‍ಡಾ. ಪಿ ಮಂಜುನಾಥ, ನ್ಯೂಏಜ್‍ಇನೊವೇಷನ್ ನೆಟ್‍ವರ್ಕ್ ಸೆಂಟ ರ್‍ಪ್ರಾ ದೇಶಿಕ ಸಂಯೋಜಕರಾದ ಮಲ್ಲೇಶ್‍ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಕುವೆಂಪು ವಿವಿಯಲ್ಲಿ ಕ್ರೀಡೋತ್ಸವ: ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ದಕ್ಷಿಣ ವಲಯ ಅಂತರ್ ವಿವಿ ಖೊ-ಖೊ ಪಂದ್ಯಾವಳಿಗೆ ಕುಲಪತಿಗಳಿಂದ ಚಾಲನೆ….

Times fo Deenabandhu

ಅಬ್ಬಾ..! ಎಂತಹ ಪ್ರತಿಸ್ಪಂದನೆ – ಕೇವಲ 3 ತಿಂಗಳಲ್ಲಿ 1 ಲಕ್ಷ ವೀಕ್ಷಕರು

Times fo Deenabandhu

ಫೆ.೪ ರಿಂದ ೭ರವರೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯಾವಳಿ

Times fo Deenabandhu