Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೊರೊನಾ: ಖರೀದಿಯಲ್ಲಿಅಕ್ರಮ, ಕೇಂದ್ರ ತಂಡದಿಂದ ಮಂಗಳವಾರ ಸಿಎಂ ಭೇಟಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಯಂತ್ರಣ ಮೀರಿ ಹಬ್ಬುತ್ತಿರುವ ಕೊರೊನಾ ಸಂಬಂಧಿತ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಂದ್ರ ಸರಕಾರದ ಕಣ್ಣು ಕೆಂಪಗಾಗಿಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ಉನ್ನಾತಾಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ಹಠಾತ್‌ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಆರೋಗ್ಯ ಇಲಾಖೆ ತಂಡವು ಮಧ್ಯಾಹ್ನ 12 ಗಂಟೆಗೆ ಸಿಎಂ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಲಿದೆ.

ಆ ಬಳಿಕ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಿದೆ. ಈ ವೇಳೆ ಖರೀದಿ ಹಗರಣದ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದು ತಿಳಿದುಬಂದಿದೆ.
ಹೆಚ್ಚಿದ ಆತಂಕ

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪಾಸಿಟಿವ್‌ ಸಂಖ್ಯೆ ಹೆಚ್ಚುತ್ತಿದೆ. ದಿಲ್ಲಿ, ಮುಂಬಯಿ ಬಳಿಕ ಬೆಂಗಳೂರಿನಲ್ಲೂ ಪ್ರಕರಣ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇದರಿಂದ ಆರ್ಥಿಕವಾಗಿ ಹೊಡೆತ ಬೀಳುವ ಅಪಾಯವಿದೆ. ದಿಲ್ಲಿ, ಮುಂಬಯಿ ರೀತಿ ಬೆಂಗಳೂರು ಕೂಡಾ ಅಪಾಯದ ಪಟ್ಟಿಗೆ ಸೇರದಂತೆ ತಡೆಯುವ ಬಗ್ಗೆಯೂ ಕೇಂದ್ರ ತಂಡವು ರಾಜ್ಯ ಸರಕಾರದ ಜತೆ ಚರ್ಚಿಸುವ ಸಾಧ್ಯತೆಗಳಿವೆ.

Related posts

ಕೊರೊನಾ ಲಕ್ಷಣಗಳಿಲ್ಲದ ಸೋಂಕಿತರ ಸಂಖ್ಯೆ ಹೆಚ್ಚಳ, ತಲೆನೋವು ತಂದ ಹೊಸ ಬೆಳವಣಿಗೆ

Times fo Deenabandhu

 ನಿಲ್ಲದ ಕೊರೊನಾ ಸ್ಫೋಟ, 138 ಹೊಸ ಪ್ರಕರಣ; ಚಿಕ್ಕಬಳ್ಳಾಪುರದಲ್ಲಿ 47, ಹಾಸನ 14

ಬಿಹಾರದಲ್ಲಿ ಸಿಡಿಲಿಗೆ ಒಂದೇ ದಿನ 83 ಮಂದಿ ಸಾವು: ನಿತೀಶ್‌ ಪರಿಹಾರ, ಮೋದಿ ಸಂತಾಪ