Times of Deenabandhu
  • Home
  • ಜಿಲ್ಲೆ
  • ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸಲು ಆಯುಷ್ ಇಲಾಖೆಗೆ ಸೂಚನೆ….
ಜಿಲ್ಲೆ ಶಿವಮೊಗ್ಗ

ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸಲು ಆಯುಷ್ ಇಲಾಖೆಗೆ ಸೂಚನೆ….

ಶಿವಮೊಗ್ಗ ಜು.06: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಆಯುಷ್ ಇಲಾಖೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸಬೇಕೆಂದು  ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಸೂಚಿಸಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಆಯುಷ್ ಇಲಾಖೆಯ ವೈದ್ಯರೊಂದಿಗೆ ಸಭೆ ನಡೆಸಿದ ಅವರು,  ಆಯುರ್ವೇದ ಔಷಧಿಯು ರೋಗನಿರೋಧಿಸುವಲ್ಲಿ  ಪ್ರಮುಖ ಪಾತ್ರ ವಹಿಸುತ್ತಿದೆ. ಜೊತೆಗೆ ಹಲವೆಡೆ ಇದರಿಂದಲೇ ರೋಗಮುಕ್ತರಾದವರಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಉರಿಗೂ ಇದರ ಲಾಭ ದೊರೆಯಲು ಮನೆಮನೆಗೆ ವಿತರಿಸುವ ಕೆಲಸವಾಗಬೇಕೆಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಪುಷ್ಪಾ ಮಾತನಾಡಿ, ಈಗಾಗಲೆ ಗ್ರಾಪಂ ಮಟ್ಟದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯುರ್ವೇದ ಔಷಧ ವಿತರಿಸಲಾಗುತ್ತಿದೆ. ಇನ್ನೂ ಇದನ್ನು ವಿಸ್ತರಿಸಲಾಗುವುದು. ಬೇರೆ ಬೇರೆ ಹಂತದಲ್ಲೂ ಇದನ್ನು ರೂಪಿಸಲಾಗಿದೆ ಎಂದರಲ್ಲದೆ, ಕೊರೊನಾ ವಾರಿಯರ್ಸ್ ಗೆ ಈಗಾಗಲೆ ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ಆಯಿರ್ವೇದ ಮಹಾವಿದ್ಯಾಲಯದ  ಡಾ. ಕೊಟ್ರೇಶ, ಡಾ.  ವೀರಣ್ಣ, ಡಾ. ಲಿಂಗರಾಜು ಮೊದಲಾದವರಿದ್ದರು.

 

 

Related posts

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಪ್ರತಿಭಟನೆ

Times fo Deenabandhu

ಗುಜರಿ ಅಂಗಡಿಯಿಂದ ಸಾಂಕ್ರಾಮಿಕ ಕಾಯಿಲೆ: ಯಾಸ್ಮಿನ್ ಆರೋಪ

Times fo Deenabandhu

ಮಾನವ ಹಕ್ಕುಗಳ ಕಮಿಟಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ

Times fo Deenabandhu