Times of Deenabandhu
  • Home
  • ಜಿಲ್ಲೆ
  • ನಮ್ಮ ಜಿಲ್ಲೆಗೆ ಜಿಲ್ಲೆಗೆ ಬರಬೇಡಿ … ಜಿಲ್ಲಾಧಿಕಾರಿಗಳ ಖಡಕ್ ಆದೇಶ
ಚಿಕ್ಕಮಗಳೂರು ಜಿಲ್ಲೆ

ನಮ್ಮ ಜಿಲ್ಲೆಗೆ ಜಿಲ್ಲೆಗೆ ಬರಬೇಡಿ … ಜಿಲ್ಲಾಧಿಕಾರಿಗಳ ಖಡಕ್ ಆದೇಶ

ಚಿಕ್ಕಮಗಳೂರು, ಜುಲೈ ೦೬: ಜಿಲ್ಲೆಯಾದ್ಯಂತ ಕೋವಿಡ್-೧೯ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಠಿಯ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಕಲಂ ೩೪(ಸಿ) ಮತ್ತು ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪(೩) ರಡಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಪ್ರವಾಸವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶಿಸಿದ್ದಾರೆ.
ಪ್ರಸ್ತುತ ಹವಾಮಾನ ಮತ್ತು ಕೋವಿಡ್ ವಿಕೋಪದ ಈ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರವಾಸಿಗರು ಪ್ರವಾಸ ಮಾಡುವುದು ಪ್ರವಾಸಿಗರ ಮತ್ತು ಜಿಲ್ಲೆಯ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸೂಕ್ತವಲ್ಲವೆಂದು ಅಭಿಪ್ರಾಯಿಸಿ ಈ ಕೆಳಗಿನ ನಿರ್ಬಂಧನ ಆದೇಶವನ್ನು ಹೊರಡಿಸಲಾಗಿದೆ.
ಹೊರ ದೇಶ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬರುವ ಎಲ್ಲಾ ರೀತಿಯ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ಹಾಗೂ ಪ್ರವಾಸ  ಮಾಡುವುದನ್ನು ಈ ತಕ್ಷಣದಿಂದ ನಿರ್ಬಂಧಿಸಲಾಗಿದೆ.
ಹೊರ ದೇಶ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರವಾಸಿಗರಿಗಾಗಿ ಜಿಲ್ಲೆಯ ಯಾವುದೇ ಹೋಟೆಲ್‌ಗಳು, ರೆಸಾರ್ಟ್‌ಗಳು, ಹೋಂ ಸ್ಟೇಗಳು ಹಾಗೂ ಇತರೆ ವಸತಿ ಗೃಹಗಳಲ್ಲಿ ವಸತಿ ಉದ್ದೇಶಕ್ಕೆ ನೀಡುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿನ ಸಾರ್ವಜನಿಕರು ನಿಯಂತ್ರಣ ಸಂಬಂಧದ ಎಲ್ಲಾ ಮುಂಜಾಗ್ರತಾ ಕ್ರಮಗಳ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಆದ್ಯತೆ ನೀಡಿ ಅದರಂತೆ ಕಡ್ಡಾಯವಾಗಿ ಪಾಲಿಸುವ ನಿಬಂಧನೆಗಳಿಗೆ ಒಳಪಟ್ಟು ಜಿಲ್ಲೆಯ ಒಳಗೆ ಪ್ರಯಾಣಿಸುವ ಯಾವುದೇ ನಿರ್ಬಧವಿರುವುದಿಲ್ಲ.
ಜಿಲ್ಲೆಯ  ಎಲ್ಲಾ ಪ್ರವಾಸಿ ತಾಣಗಳ ಪ್ರದೇಶ ದ್ವಾರಗಳು/ಕೇಂದ್ರಗಳಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರನ್ನು ಪ್ರವಾಸಿ ತಾನಗಳ ಒಳಗೆ ಪ್ರವೇಶ ಮಾಡದಂತೆ ನಿರ್ಬಧಗೊಳಿಸಲು ಸೂಚಿಸಲಾಗಿದೆ.
ಈ ಆದೇಶದ ಉಲ್ಲಂಘನೆಯು ಭಾರತ ದಂಡಸಂಹಿತೆ ೧೮೬೦ ರ ಕಲಂ ೧೮೮ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಕಲಂ ೫೧ ರಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಆದೇಶ ತಕ್ಷಣದಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ. ಬಗಾದಿ ಗೌತಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

Related posts

ನಾಳೆ ಗೋಣಿಬೀಡು ಶ್ರೀ ಶೀಲಸಂಪಾದನಾಮಠದಲ್ಲಿ ಮಾಸಿಕ ಅನುಭಾವ ಸಂಗಮ: 25ನೇ ವರ್ಷದ ಗುರು ಸ್ಮರಣಾ ಹಾಗೂ ವಿಶ್ವ ಮಹಿಳಾ ದಿನಾಚರಣೆ

Times fo Deenabandhu

14 ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ ವಿಜಯ ಶ್ರೀಧರ್ ಗೆ ಕಸಾಪ ದಿಂದ ಅಧಿಕೃತ ಆಹ್ವಾನ .

Times fo Deenabandhu

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಇನ್-ಯೂನಿಟಿ ೨ಕೆ೧೯

Times fo Deenabandhu