Times of Deenabandhu
  • Home
  • ಮುಖ್ಯಾಂಶಗಳು
  • ಕೃಷಿ ವಿಶ್ವವಿದ್ಯಾಲದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ
ಜಿಲ್ಲೆ ಮುಖ್ಯಾಂಶಗಳು ರಾಜ್ಯ ಶಿವಮೊಗ್ಗ

ಕೃಷಿ ವಿಶ್ವವಿದ್ಯಾಲದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

 

ಶಿವಮೊಗ್ಗ ಜು.6: ಸಾಗರ ತಾಲೂಕಿನ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ಅತಿ ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಗುತ್ತಿಗೆದಾರನಿಗೆ ಸೂಚನೆ ನೀಡಿದರು.

ಇಂದು ಕೃಷಿ ವಿವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು, ಒಟ್ಟು 787 ಎಕರೆ ಜಾಗದಲ್ಲಿ ಕೃಷಿ ವಿಶ್ವವಿದ್ಯಾಲಯವಿದ್ದು, ಇದರಲ್ಲಿ 4 ಎಕರೆ ಜಾಗದಲ್ಲಿ  ಕಟ್ಟಡ ನಿರ್ಮಾಣವಾಗುತ್ತಿದೆ. ನಾಲ್ಕು ಆಡಳಿತ ಕಟ್ಟಡ, 42 ತರಗತಿಗಳು, 42 ಲ್ಯಾಬ್‍ಗಳು, 24 ರೈನ್ ಹೆಚ್‍ಒಡಿ ಕಟ್ಟಡ, 10 ರೈನ್ ಶೆಲ್ಟರ್, ಗೇಟ್-1 ಮತ್ತು ಗೇಟ್-2 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. 7.78 ಎಕರೆ ಸುತ್ತಲೂ ಫೆನ್ಸಿಂಗ್ ಹಾಕಲಾಗುತ್ತಿದೆ ಎಂದರು.

ನಿರ್ಮಾಣಗೊಂಡ ಕಟ್ಟಡಗಳ ಲೋಕಾರ್ಪಣೆಯನ್ನು  ಆ; 31 ರಂದು ಮಾಡಲು ನೆರವೇರಿಸಲಾಗುವುದು.  15 ದಿನಗಳ ಮುಂಚೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿಕೊಡುವಂತೆ ಗುತ್ತಿಗೆದಾರನಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಕಟ್ಟಡ ನಿರ್ಮಾಣದ ಪರಿಶೀಲನೆ ನಡೆಸಲಾಗಿದೆ.  ಪರಿಶೀಲನೆಯಲ್ಲಿ ನಿರ್ಮಾಣ ತೃಪ್ತಿ ತಂದಿದೆ. ಕಟ್ಟಡಕ್ಕೆ ಬಳಸಿರುವ ಪರಿಕರಗಳ ಬಗ್ಗೆ ತಪ್ಪುಗಳು ಕಂಡುಬಂದರೆ ಮೂರನೇ ಏಜೆನ್ಸಿಯ ತಪಾಸಣೆ ಮಾಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಶಾಸಕ ಹರತಾಳು ಹಾಲಪ್ಪ,  ಕೃಷಿ ವಿವಿಯ ಉಪಕುಲಪತಿ ಡಾ.ಎಂ.ಕೆ.ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ದತ್ತಾತ್ತಿ, ಚನ್ನವೀರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೃಷಿ ಇಲಾಖೆ ಅಧಿಕಾರಿಗಳು ಇನ್ನಿತರರಿದ್ದರು.

Related posts

 ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟ

Times fo Deenabandhu

ಕೋವಿಡ್-19 ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮ: ಸಚಿವ ಸಿ.ಟಿ.ರವಿ

ಭಟ್ಕಳದ ವ್ಯಕ್ತಿಗೆ ಕೋವಿಡ್-19: ಮಂಗಳೂರಿನಲ್ಲಿ ಮೊದಲ ಪ್ರಕರಣ ದೃಢ

Times fo Deenabandhu