Times of Deenabandhu
  • Home
  • ಜಿಲ್ಲೆ
  • ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗುರುಪೂರ್ಣಿಮಾ
ಜಿಲ್ಲೆ ಮಂಡ್ಯ

ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗುರುಪೂರ್ಣಿಮಾ

ಶ್ರೀ ಆದಿಚುಂಚನಗಿರಿ ಕ್ಷೇತ್ರ ಜು.5: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಗುರುಪೂರ್ಣಿಮಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆ ಶ್ರೀಕ್ಷೇತ್ರದ ದೇವಾಲಯಗಳಲ್ಲಿ ಮತ್ತು ಮಹಾಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆಯನ್ನು ಪರಮಪೂಜ್ಯ ಜಗದ್ಗುರು ಮಹಾಸ್ವಾಮೀಜಿಯವರು ನೆರವೇರಿಸಿದರು. ಸಂಜೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪಾದಪೂಜೆ, ಪುಷ್ಪಾರ್ಚನೆ, ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಪರಮಪೂಜ್ಯರು ಎಲ್ಲರಿಗೂ ಶುಭಾಶೀರ್ವಾದವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 17 ಕೆರೆಗಳುನ್ನು ನಿರ್ಮಿಸಿದ ಮಂಡ್ಯದ ಭಗೀರಥ ಶ್ರೀ ಕಾಮೇಗೌಡರವರಿಗೆ ಪರಮಪೂಜ್ಯರು ಸನ್ಮಾನಿಸಿದರು, ಶ್ರೀ ಆದಿಚುಂಚನಗಿರಿ  ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಹಾಗೂ ಇತರ  ಶಾಖಾ ಮಠಗಳ ಪೂಜ್ಯ ಎಲ್ಲಾ ಸ್ವಾಮೀಜಿಗಳವರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದು ಭಗವಂತನ ಹಾಗೂ ಪೂಜ್ಯ ಗುರುಗಳ ದರ್ಶನಾಶೀರ್ವಾದ ಪಡೆದು ಪುಣ್ಯಭಾಜನರಾದರು.

 

Related posts

ಯುವ ಸಮೂಹ ಟಿ.ವಿ., ಮೊಬೈಲು ದೂರಮಾಡಿ ಪುಸ್ತಕ, ಪೆನ್ನು, ಓದಿನತ್ತ ಆಧ್ಯತೆಗೆ ಕರೆ

Times fo Deenabandhu

ಅದ್ದೂರಿಯಾಗಿ ನೆರವೇರಿದ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ

Times fo Deenabandhu

ಹೆಸಗಲ್ ಸರಕಾರಿ ಶಾಲೆಯ ೭೫ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ

Times fo Deenabandhu