Times of Deenabandhu
  • Home
  • ಪ್ರಧಾನ ಸುದ್ದಿ
  • ರಾಜ್ಯದಲ್ಲಿ 20000 ಗಡಿ ದಾಟಿದ ಕೊರೊನಾ …  ಮತ್ತೆ ಮರಣ ಮೃದಂಗ, ಬೆಂಗಳೂರು ನಗರವೊಂದರಲ್ಲೇ 1172 ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್….
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದಲ್ಲಿ 20000 ಗಡಿ ದಾಟಿದ ಕೊರೊನಾ …  ಮತ್ತೆ ಮರಣ ಮೃದಂಗ, ಬೆಂಗಳೂರು ನಗರವೊಂದರಲ್ಲೇ 1172 ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್….

..   ಬೆಂಗಳೂರು ಜೂ.04: ರಾಜ್ಯದಲ್ಲಿ ನೋಡು ನೋಡುತ್ತಿದಂತೆ 20000 ಗಡಿ ದಾಟಿಯೇ ಬಿಟ್ಟಿತ್ತು. ಇಂದು ಕೊರೊನ 1694 ಜನರಲ್ಲಿ ಸೋಂಕು ಕಾಣಿಸಿಕೊಂಡರೆ,  ಕೊರೊನಾಕ್ಕೆ ರಾಜ್ಯದಲ್ಲಿ 42 ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ 1172 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ದಕ್ಷಿಣಕನ್ನಡದಲ್ಲಿ 75, ಬಳ್ಳಾರಿ 73, ಜನರಲ್ಲಿ  ಸೋಂಕು ದೃಢವಾಗಿದೆ. ಉಡುಪಿಯಲ್ಲಿ 18 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ ಇಂದು ಕೊರೊನ ತನ್ನ ಆರ್ಭಟ ಮುಂದುವರಿಸಿದೆ   ಬರೋಬ್ಬರಿ 31 ಜನರಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ.. ಇದರೊಂದಿಗೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 253 ಕ್ಕೆ ಏರಿಕೆಯಾಗಿದೆ. ಒಟ್ಟು 117 ಜನ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 132 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 21549 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇದೂವರೆಗೆ 9244 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಕೋವಿಡ್ ನಿಂದಾಗಿ 335 ಜನ ಮರಣ ಹೊಂದಿದ್ದಾರೆ.

ಇದು ಇಂದು ಸಂಜೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್   ಬುಲೆಟಿನ್ ಮಾಹಿತಿಯಾಗಿದೆ.

 

Related posts

ಲಾಕ್‌ಡೌನ್‌ ಅಂತ್ಯ: ರಾತ್ರಿ ಕರ್ಫ್ಯೂ ಮುಂದುವರಿಕೆ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೊನಾ ಸೋಂಕು

ಕಾಂಗ್ರೆಸ್ಸಿನ ಒಡೆದು ಆಳುವ ನೀತಿಯಿಂದ ದೇಶ ಬಲಿಯಾಗಿತ್ತು: ರಾಜೀವ್ ಕುಡುಚಿ

Times fo Deenabandhu