Times of Deenabandhu
  • Home
  • ಜಿಲ್ಲೆ
  • ಸಾಗರ:ಕೊರೋನಾ ಸೋಂಕಿತ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್
ಜಿಲ್ಲೆ ಶಿವಮೊಗ್ಗ

ಸಾಗರ:ಕೊರೋನಾ ಸೋಂಕಿತ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್

ಸಾಗರ ಜು.03 : ಇಲ್ಲಿನ ಮೆಸ್ಕಾಂ ವಸತಿಗೃಹದಲ್ಲಿದ್ದ 33 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಸೋಂಕಿತ ವ್ಯಕ್ತಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬುಧವಾರ ಮೆಸ್ಕಾಂ ಲೈನ್‍ಮ್ಯಾನ್ ಓರ್ವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯು ಬುಧವಾರ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದು, ಆತನಿಂದ ಸೋಂಕು ಹರಡಿರಬಹುದು ಎಂದು ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಬುಧವಾರ ಲೈನ್‍ಮ್ಯಾನ್‍ನಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರಸಭೆ ಮೆಸ್ಕಾಂ ಕಚೇರಿಗೆ ಔಷಧಿ ಸಿಂಪಡಿಸಿ, ಮೆಸ್ಕಾಂ ವಸತಿಗೃಹಗಳನ್ನು ತನ್ನ ಸುಪರ್ಧಿಗೆ ಪಡೆದಿತ್ತು. ತಾಲ್ಲೂಕು ಆಡಳಿತ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದು, ವಸತಿಗೃಹದಲ್ಲಿರುವವರು ಹೊರಗೆ ಬರದಂತೆ, ಸಾರ್ವಜನಿಕರು ಒಳಗೆ ಹೋಗದಂತೆ ಬ್ಯಾರಿಕೇಡ್‍ಗಳನ್ನು ಹಾಕಿ ಸಾರ್ವಜನಿಕ ಪ್ರವೇಶಕ್ಕೆ ನಿಷೇದ ಹೇರಲಾಗಿದೆ.

ಸೀಲ್‍ಡೌನ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಬೆಳಿಗ್ಗೆ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ. ಇಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಬೆಳಿಗ್ಗೆ 7-30ರೊಳಗೆ ಹಾಲು ಪೂರೈಕೆ, ಮಧ್ಯಾಹ್ನ 11ಗಂಟೆಯೊಳಗೆ ಅವರಿಗೆ ಬೇಕಾದ ತರಕಾರಿ, ದಿನಸಿ ಇನ್ನಿತ್ಯಾದಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

ಈಗಾಗಲೆ ಆರೋಗ್ಯ ಇಲಾಖೆ ವತಿಯಿಂದ ಸೀಲ್‍ಡೌನ್ ಸ್ಥಳದಲ್ಲಿ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇವರ ಜೊತೆಗೆ ನಗರಸಭೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

 

 

Related posts

ನಾವು ಉಳಿಯಬೇಕಾದಲ್ಲಿ ಸಾಮಾಜಿಕ ಅಂತರವೊಂದೇ ಮಾರ್ಗ: ಸಚಿವ ಸಿ.ಟಿ.ರವಿ – ಕೊರೋನಾ: ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಂಸದರ ಸಭೆ

ನಾಟಕಗಳು ಮಾನವನಿಗೆ ಜೀವನದ ರೀತಿ ನೀತಿ ಕಲಿಸುವ ಸಾಧನಗಳು

Times fo Deenabandhu

೨೯ಕ್ಕೆ ಪ್ರಬೋಧಿನೀ ಗುರುಕುಲಮ್ ಅರ್ಧಮಂಡಲೋತ್ಸವ ಕಾರ್ಯಕ್ರಮ

Times fo Deenabandhu