Times of Deenabandhu
ಜಿಲ್ಲೆ ದಕ್ಷಿಣ ಕನ್ನಡ

ತಿಮ್ಮಪ್ಪ ಶೆಟ್ಟಿ ಆರೂರು ಬ್ರಹ್ಮಾವರ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರು

ಬ್ರಹ್ಮಾವರ ಜು.3: ಕರ್ನಾಟಕ ಶಿಕ್ಷಕರ ಸಂಘದ ರಾಜ್ಯ ಮಾಜಿ ಉಪಾಧ್ಯಕ್ಷರಾದ ಬ್ರಹ್ಮಾವರದ ತಿಮ್ಮಪ್ಪ ಶೆಟ್ಟಿ ಆರೂರು ಇವರು ಬ್ರಹ್ಮಾವರ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರಾಗಿ ನಿಯೋಕ್ತಿಗೊಂಡಿದ್ದಾರೆ. ಇವರು ಇದೇ ತಿಂಗಳು 4 ರಂದು ಬ್ರಹ್ಮಾವರದ ರೋಟರಿ ಹಾಲ್‍ನಲ್ಲಿ ನಡೆಯಲಿರುವ “ಪದಾಧಿಕಾರಿಗಳ ಪದಗ್ರಹಣ 2020-21” ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲ್ಲಿದ್ದಾರೆ.

ತಿಮ್ಮಪ್ಪ ಶೆಟ್ಟಿ ಆರೂರು ಇವರು ಉಡುಪಿಯ ಶಿಕ್ಷಕರ ಬ್ಯಾಂಕಿನ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಭಾರತ ಸೇವಾದಳದ ಮತ್ತು ಅಮೆಚೂರ್ ಕಬ್ಬಡಿ ಅಸೋಷಿಯೇಷನ್ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ಸಂಘ ಸಂಸ್ಥೆಗಳಲ್ಲಿ ಸಮಾಜಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಾಳೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ರೋಟೆರಿಯನ್ ಗಳಾದ ಅಭಿನಂದನ್ ಶೆಟ್ಟಿ, ದೇವದಾಸ್ ಶೆಟ್ಟಿಗಾರ್, ಬೆಂಗಳೂರಿನ ತೆರಿಗೆ ಸಲಹೆಗಾರರಾದ ಲ:ನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

 

 

 

Related posts

ತಾ.ಪಂ. ಅಧ್ಯಕ್ಷರಿಂದ ಜನಸಂಪರ್ಕ ಸಭೆಯ ಪೂರ್ವಭಾವಿ ಸಭೆ

Times fo Deenabandhu

ಮಾನವ ಹಕ್ಕುಗಳ ಕಮಿಟಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ

Times fo Deenabandhu

ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರಷ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ: ತಿಪ್ಪೇರುದ್ರಪ್ಪ

Times fo Deenabandhu