Times of Deenabandhu
  • Home
  • ಮುಖ್ಯಾಂಶಗಳು
  • ಪ್ರಧಾನಿ ಮೋದಿ ಲಡಾಖ್‌ಗೆ ಅಚ್ಚರಿಯ ಭೇಟಿ : ಚೀನಾಕ್ಕೆ ಎಚ್ಚರಿಕೆಯ ಸಂದೇಶ-ಯೋಧರಲ್ಲಿ ಚಿಮ್ಮಿದ ಉತ್ಸಾಹ…
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಪ್ರಧಾನಿ ಮೋದಿ ಲಡಾಖ್‌ಗೆ ಅಚ್ಚರಿಯ ಭೇಟಿ : ಚೀನಾಕ್ಕೆ ಎಚ್ಚರಿಕೆಯ ಸಂದೇಶ-ಯೋಧರಲ್ಲಿ ಚಿಮ್ಮಿದ ಉತ್ಸಾಹ…

ಲಡಾಕ್  ಜು.3: ವಿಶ್ವವು ವಿಕಾಸವಾದದತ್ತ ಸಾಗಬೇಕೇ ವಿನಃ ವಿಸ್ತಾರವಾದದತ್ತ ಅಲ್ಲ ಎನ್ನುವ ಮೂಲಕ ಲಡಾಖ್ ನೆಲದಲ್ಲಿ ನಿಂತು ಗಡಿಯಲ್ಲಿ  ಅನಗತ್ಯ ಕಿರಿ ಕಿರಿ ಮಾಡುತ್ತಿರುವ  ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ಲಡಾಖ್ ಗೆ ಅಚ್ಚರಿಯ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಗಾಲ್ವಾನ್ ನದಿ ಕಣಿವೆಯಲ್ಲಿ ಹೋರಾಟ ನಡೆಸಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೌರವ ಮತ್ತು ಹೆಮ್ಮೆಯಿದೆ ಎಂದು ಮೋದಿ ತಿಳಿಸಿದ್ದಾರೆ.

ಯೋಧರ ಶೌರ್ಯ, ತ್ಯಾಗ ಬೆಲೆ ಕಟ್ಟಲಾಗದ್ದು. ನಿಮ್ಮ ಶೌರ್ಯದಿಂದ ಇಡೀ ವಿಶ್ವ ಭಾರತದ ಶಕ್ತಿ ನೋಡಿದೆ.

ಗಾಲ್ವಾನ್ ಕಣಿವೆಗೆ ಕಳೆದ 53 ವರ್ಷಗಳ ಬಳಿ ಮೊದಲ ಬಾರಿಗೆ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂತು.

ಸೈನಿಕರ ಶೌರ್ಯ ಈ ಪರ್ವತಗಳಿಗಿಂತಲೂ ದೊಡ್ಡದು. ನೀವು ತೋರಿದ ಶೌರ್ಯದಿಂದ ಭಾರತ ಹೆಮ್ಮೆ ಪಡುವಂತಾಗಿದೆ. ದೇಶದ ರಕ್ಷಣೆ ಯೋಧರ ಕೈಯಲ್ಲಿದೆ. ನಮಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.

ನೀವು ಇಲ್ಲಿ ತೋರಿದ ಸಾಮರ್ಥ್ಯ ಮತ್ತು ಮಾಡಿದ ಕಾರ್ಯವು ಇಂದು ವಿಶ್ವದ ಎದುರು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಜಗತ್ತಿನಲ್ಲೇ ಭಾರತೀಯ ಸಶಸ್ತ್ರ ಪಡೆಯು ಪ್ರಬಲವಾಗಿ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ಶೌರ್ಯದಿಂದ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತೆ ಆಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ದುರ್ಬಲರಿಂದ ಶಾಂತಿ ಸ್ಥಾಪನೆ ನಡೆಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪನೆಗೆ ಧೈರ್ಯ ಶೌರ್ಯವೇ ಅಗತ್ಯ. ಭಾರತಕ್ಕೆ ಅತ್ಯಾಧುನಿಕ ತಂತ್ರಾಜ್ಞಾನಗಳನ್ನು ತರುತ್ತಿದ್ದೇವೆ. ಯಾವುದೇ ವಿಶ್ವಯುದ್ಧ ಆಗಲಿ, ಶಾಂತಿಯ ಸ್ಥಿತಿಯಾಗಲಿ ನಮ್ಮ ಹೆಮ್ಮೆಯ ಸೈನಿಕರ ಶಕ್ತಿಯನ್ನು ಇಡೀ ವಿಶ್ವ ನೋಡಿದೆ. ನಾವು ಮಾನವೀಯತೆಯ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೇವೆ ಎಂದರು.

 

 

 

 

 

 

Related posts

ಐವರು ವೈದ್ಯರಿಗೆ ಕೊರೊನಾ ಸೋಂಕು ದೃಢ, ಆತಂಕದಲ್ಲಿ ವೈದ್ಯ ವಲಯ

ಆರ್ಥಿಕ ಹೊಡೆತ ತಪ್ಪಿಸಲು ಮೋದಿ ಸರ್ಕಾರಕ್ಕೆ ರಾಹುಲ್ ನೀಡಿದ ಸಲಹೆ ಇದು!

Times fo Deenabandhu

ಕೊರೊನಾಗೆ ಸಾಂಕ್ರಾಮಿಕ ರೋಗ ಎಂದ WHO, ಕೇಂದ್ರದಿಂದ ಏ.15ರವರೆಗೆ ಪ್ರವಾಸಿ ವೀಸಾ ರದ್ದು

Times fo Deenabandhu